KRS ಡ್ಯಾಂ ಬತ್ತಿಕೆ: ಕುಡಿಯುವ ನೀರಿಗೆ ಆತಂಕ.!

KRS ಡ್ಯಾಂ ಬತ್ತಿಕೆ: ಕುಡಿಯುವ ನೀರಿಗೆ ಆತಂಕ.!

ಮೈಸೂರು, ಬೆಂಗಳೂರಲ್ಲಿ ಕುಡಿಯುವ ನೀರಿಗೂ ಸಂಕಷ್ಟ!

ಮೈಸೂರು: ರಾಜ್ಯದ ಪ್ರಮುಖ ಜಲಾಶಯವಾದ ಕೃಷ್ಣರಾಜ ಸಾಗರ (KRS) ಜಲಾಶಯ ನಲ್ಲಿ ನೀರಿನ ಮಟ್ಟ ದಾಖಲೆ ಮಟ್ಟಕ್ಕೆ ಕುಸಿದಿದ್ದು, ಕುಡಿಯುವ ನೀರಿನ ಸಂಕಷ್ಟದ ಭೀತಿ ಎದುರಾಗಿದೆ.

ಡ್ಯಾಂನ ನೀರಿನ ಮಟ್ಟ 94 ಅಡಿಗೆ ಇಳಿದಿದ್ದು, ಸಂಗ್ರಹ ಪ್ರಮಾಣ ಗಂಭೀರವಾಗಿ ಕುಸಿದಿದೆ. ಸಾಮಾನ್ಯವಾಗಿ ಇದೇ ಅವಧಿಯಲ್ಲಿ ಇದು 100 ಅಡಿ ಇರಬೇಕಾಗಿತ್ತು.ಹೆಚ್ಚಿದ ಬಿಸಿಲಿನಿಂದ ನೀರಿನ ಪ್ರಮಾಣ ಮಾತ್ರವಲ್ಲ, ಗುಣಮಟ್ಟವೂ ಕುಸಿಯುತ್ತಿದೆ. ಪಾಚಿ ಬೆಳವಣಿಗೆ ಹೆಚ್ಚಾಗಿ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗುವ ಸಾಧ್ಯತೆ ಇದೆ.

ಬೆಂಗಳೂರು, ಮೈಸೂರು, ಮಂಡ್ಯ, ರಾಮನಗರ ಜಿಲ್ಲೆಗಳಿಗೆ ಇದೇ ಜಲಾಶಯದಿಂದ ಕುಡಿಯುವ ನೀರು ಪೂರೈಕೆ ಆಗುತ್ತಿರುವುದರಿಂದ ಪರಿಸ್ಥಿತಿ ಗಂಭೀರವಾಗಿದೆ.ಪ್ರಸ್ತುತ ಲಭ್ಯ ನೀರನ್ನು ಜೂನ್ ಮಧ್ಯಭಾಗದವರೆಗೆ ನಿರ್ವಹಿಸಬೇಕಾಗಿದ್ದು, ಜನರು ನೀರನ್ನು ಮಿತವಾಗಿ ಬಳಸಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.ಕೊಡಗು, ಮೈಸೂರು, ಮಂಡ್ಯ ಸೇರಿದಂತೆ ಕಾವೇರಿ ಕಣಿವೆಯಲ್ಲಿ ಮಳೆಯ ಕೊರತೆ ‘ರೆಡ್ ಅಲರ್ಟ್’ ಮಟ್ಟದಲ್ಲಿದ್ದು, ಇದರಿಂದ ಜಲಾಶಯಗಳ ನೀರಿನ ಮಟ್ಟ ಕುಸಿದಿದೆ.ಮಳೆ ಇನ್ನೂ ವಿಳಂಬವಾದರೆ ನೀರಿನ ಸಮಸ್ಯೆ ಮತ್ತಷ್ಟು ತೀವ್ರವಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *