70 ಕೆಜಿ ಬೆಳ್ಳಿ ದೋಚಿದ ಖದೀಮರು.!
ನೆಲಮಂಗಲ: ನೆಲಮಂಗಲದ ಹಾವನೂರು ಲೇಔಟ್ನಲ್ಲಿರುವ ಎಂಬಿ ಜ್ಯುವೆಲರ್ಸ್ ಅಂಗಡಿಯಲ್ಲಿ ಕಳ್ಳರು ರಾತ್ರೋರಾತ್ರಿ ದಾಳಿ ನಡೆಸಿದ್ದಾರೆ.ಅಂಗಡಿಯ ಹಿಂಭಾಗದ ಗೋಡೆಯನ್ನು ಕೊರೆದು ಒಳಗೆ ಪ್ರವೇಶಿಸಿದ ಖದೀಮರು, ನಂತರ ರೂಮಿನ ಬಾಗಿಲು ಒಡೆದು ಕಳ್ಳತನ ನಡೆಸಿದ್ದಾರೆ.
ಸುಮಾರು 70 ಕೆಜಿ ಬೆಳ್ಳಿ ಆಭರಣಗಳನ್ನು ದೋಚಲಾಗಿದ್ದು, ಇದರ ಮೌಲ್ಯ ಸುಮಾರು ₹1.2 ಕೋಟಿ ಎಂದು ಅಂದಾಜಿಸಲಾಗಿದೆ.ಈ ಘಟನೆ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.ಕಳ್ಳರನ್ನು ಪತ್ತೆಹಚ್ಚಲು ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಸ್ಥಳೀಯರು ಈ ಘಟನೆಯ ಬಳಿಕ ಭದ್ರತೆ ಹೆಚ್ಚಿಸುವಂತೆ ಆಗ್ರಹಿಸಿದ್ದಾರೆ.
For More Updates Join our WhatsApp Group :




