ಸೇಡಂ CCI ಬಂದ್ ವಿರುದ್ಧ ಸರ್ಕಾರಕ್ಕೆ ತೀವ್ರ ಟೀಕೆ.
ಕಲಬುರಗಿ: ಕಲಬುರಗಿಯ ಸೇಡಂನಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಪತ್ರಿಕಾಗೋಷ್ಠಿ ನಡೆಸಿ, ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯ ಮತ್ತು ರೈತ ವಿರೋಧಿ ನೀತಿಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ವೈದ್ಯಕೀಯ ಸಚಿವ ಶರಣಪ್ರಕಾಶ ಪಾಟೀಲ್ ವಿರುದ್ಧ ಕಿಡಿಕಾರಿದ ನಿಖಿಲ್,
“ಮೂರು ಬಾರಿ ಸಚಿವರಾಗಿದ್ದರೂ ಸೇಡಂಗೆ ಸುಸಜ್ಜಿತ ಆಸ್ಪತ್ರೆ ನಿರ್ಮಿಸಲು ಸಾಧ್ಯವಾಗಿಲ್ಲ. ಜನರು ಕಲಬುರಗಿ ಅಥವಾ ಹೈದರಾಬಾದ್‌ಗೆ ತೆರಳಬೇಕಾದ ಸ್ಥಿತಿ ಇದೆ” ಎಂದು ಆರೋಪಿಸಿದರು.
ರಾಜ್ಯ ಸರ್ಕಾರ ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಂದೂಡುತ್ತಿರುವುದು ಪ್ರಜಾಪ್ರಭುತ್ವಕ್ಕೆ ಅಪಮಾನ ಎಂದು ಟೀಕಿಸಿದರು. ಗ್ರಾಮೀಣ ಅಭಿವೃದ್ಧಿ ಕೆಲಸಗಳು ಸ್ಥಗಿತಗೊಂಡಿವೆ ಎಂದು ಹೇಳಿದರು.
ಸೇಡಂನ ಪ್ರಮುಖ ಕೈಗಾರಿಕೆ CCI ಕಂಪನಿ ಬಂದ್ ಆಗಿರುವುದರಿಂದ ನೂರಾರು ಕಾರ್ಮಿಕರು ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ನಿಖಿಲ್ ಆರೋಪಿಸಿದರು.
“ಕಂಪನಿ ಪುನರಾರಂಭಕ್ಕೆ ಎಲ್ಲ ರೀತಿಯ ಪ್ರಯತ್ನ ಮಾಡುತ್ತೇನೆ” ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಜೆ.ಕೆ ಕೃಷ್ಣಾರೆಡ್ಡಿ, ಬಂಡೆಪ್ಪ ಖಾಶೆಂಪುರ್, ದೊಡ್ಡಪ್ಪಗೌಡ ಪಾಟೀಲ್ ನರಿಬೋಳ್, ರಾಜ ವೆಂಕಟಪ್ಪ ನಾಯಕ್, ಬಾಲರಾಜ್ ಗುತ್ತೇದಾರ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
For More Updates Join our WhatsApp Group :




