ಚಾಮರಾಜನಗರದಲ್ಲಿ ಬೆಚ್ಚಿಬೀಳಿಸುವ ಘಟನೆ.!

ಚಾಮರಾಜನಗರದಲ್ಲಿ ಬೆಚ್ಚಿಬೀಳಿಸುವ ಘಟನೆ.!

ನಿಧಿ ಆಸೆಗೆ ತಾಯಿಯನ್ನೇ ಬ* ಕೊಡಲು ಯತ್ನ: ಪುತ್ರ ಬಂಧನ

ಚಾಮರಾಜನಗರ : ತಾಲೂಕಿನ ಸಾಗಡೆ ಗ್ರಾಮದಲ್ಲಿ ನಿಧಿ ಆಸೆಗಾಗಿ ತಾಯಿಯನ್ನೇ ಬಲಿ ಕೊಡಲು ಪುತ್ರ ಯತ್ನಿಸಿದ್ದ ಘಟನೆ ಬೆಳಕಿಗೆ ಬಂದಿದೆ.ಕೊಂಡಯ್ಯನ ಮಾದಶೆಟ್ಟಿ ಎಂಬಾತ ತನ್ನ 80 ವರ್ಷದ ಕಣ್ಣು ಕಾಣದ, ಕಿವಿ ಕೇಳದ ತಾಯಿ ಮಾದಮ್ಮಶೆಟ್ಟಿಯನ್ನು ಬಲಿ ಕೊಡಲು ಸಿದ್ಧತೆ ನಡೆಸಿದ್ದಾನೆ.ಮನೆಯಲ್ಲಿ 4 ಅಡಿ ಗುಂಡಿ ತೆಗೆದು, ಮಡಕೆ, ಲಿಂಬೆಹಣ್ಣು, ಅರಿಶಿನ-ಕುಂಕುಮ ಹಾಗೂ ಕಳಸ ಇಟ್ಟು ಪೂಜೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.

ಈ ಚಟುವಟಿಕೆಗಳನ್ನು ಗಮನಿಸಿದ ನೆರೆಹೊರೆಯವರು ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಪೊಲೀಸರು ಮನೆಗೆ ಆಗಮಿಸುತ್ತಿದ್ದಂತೆ ಮಾಟಗಾರ ಪರಾರಿಯಾಗಿದ್ದು, ಮಾದಶೆಟ್ಟಿಯನ್ನು ಬಂಧಿಸಲಾಗಿದೆ.

ನಿಧಿಗಾಗಿ ಇಂತಹ ಕೃತ್ಯಕ್ಕೆ ಮುಂದಾದ ಘಟನೆ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *