ಆಪ್ ನಾಯಕಿಯ ಕಾರು ಧ್ವಂಸ ಆರೋಪ: ಹೊಸ ದೂರುನಿಂದ ರಾಜಕೀಯ ಕಿಚ್ಚು
ಬೆಂಗಳೂರು : ಕೆ.ಆರ್. ಪುರಂ ಬಿಜೆಪಿ ಶಾಸಕ ಬೈರತಿ ಬಸವರಾಜ್ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ. ಆಮ್ ಆದ್ಮಿ ಪಾರ್ಟಿ (AAP) ನಾಯಕಿ ಸತ್ಯವಾಣಿ ತಮ್ಮ ಕಾರು ಧ್ವಂಸಗೊಳಿಸಲಾಗಿದೆ ಹಾಗೂ ಬೆದರಿಕೆ ಹಾಕಲಾಗಿದೆ ಎಂದು ದೂರು ನೀಡಿದ್ದಾರೆ.
ಸತ್ಯವಾಣಿ ಪ್ರಕಾರ, ಶಾಸಕರ ಬೆಂಬಲಿಗರು ತಮ್ಮ ಮನೆ ಮುಂದೆ ನಿಲ್ಲಿಸಿದ್ದ ಕಾರನ್ನು ಹಾನಿಗೊಳಿಸಿದ್ದು, ತಮಗೆ ನಿರಂತರ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.ಕಳೆದ ತಿಂಗಳು ತಮ್ಮ ವಿರುದ್ಧ 50ಕ್ಕೂ ಹೆಚ್ಚು ಫ್ಲೆಕ್ಸ್‌ಗಳನ್ನು ಅಂಟಿಸಲಾಗಿತ್ತು ಎಂದು ಆಪ್ ನಾಯಕಿ ಆರೋಪಿಸಿದ್ದು, ಆರಂಭದಲ್ಲಿ ಪೊಲೀಸರು ದೂರು ಸ್ವೀಕರಿಸದಿದ್ದರೆಂದು ಹೇಳಿದ್ದಾರೆ. ನಂತರ ಲೋಕಾಯುಕ್ತ ಹಸ್ತಕ್ಷೇಪದ ಬಳಿಕ ಪ್ರಕರಣ ದಾಖಲಾಗಿತ್ತು.
ಬೈರತಿ ಬಸವರಾಜ್ ಈಗಾಗಲೇ ಬಿಕ್ಲು ಶಿವು ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದು, ಬಂಧನ ಹಾಗೂ ಜಾಮೀನು ಪ್ರಕ್ರಿಯೆಗಳನ್ನು ಎದುರಿಸಿದ್ದಾರೆ. ಈ ನಡುವೆ ಹೊಸ ಆರೋಪಗಳು ಮತ್ತಷ್ಟು ಸಂಕಷ್ಟ ಹೆಚ್ಚಿಸಿವೆ.ತಮಗೆ ನಿರಂತರ ಬೆದರಿಕೆ ಬರುತ್ತಿದೆ ಎಂದು ಹೇಳಿರುವ ಸತ್ಯವಾಣಿ, ತನ್ನ ಸುರಕ್ಷತೆಗೆ ಹಾನಿಯಾದರೆ ಶಾಸಕರೇ ಹೊಣೆ ಎಂದು ಎಚ್ಚರಿಸಿದ್ದಾರೆ.
For More Updates Join our WhatsApp Group :




