ಕಾಂಗ್ರೆಸ್ಗೆಲುವಿಗೆಕಾರ್ಯಕರ್ತರಶ್ರಮ.!
ಬಾಗಲಕೋಟೆ : ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಯ ಸಾಧಿಸಿರುವ ಹಿನ್ನೆಲೆಯಲ್ಲಿ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ್ ಮತದಾರರಿಗೆ ಧನ್ಯವಾದ ತಿಳಿಸಿದ್ದಾರೆ. ಕಾರ್ಯಕರ್ತರ ಶ್ರಮವೇ ಗೆಲುವಿಗೆ ಕಾರಣ ಎಂದರು.
ಬಿಜೆಪಿ ಹಿಂದುತ್ವ ಅಸ್ತ್ರವನ್ನು ಬಳಸಿದರೂ ಫಲ ನೀಡಲಿಲ್ಲ ಎಂದು ತಿಮ್ಮಾಪುರ್ ಹೇಳಿದ್ದಾರೆ. “ಉಮೇಶ್ ಮೇಟಿ ಹಿಂದೂ ಅಲ್ಲವಾ?” ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಪ್ರಚಾರ ನಡೆಸಿದ್ದೇವೆ ಎಂದರು.
ಬಿಜೆಪಿ ಪರ ಯತ್ನಾಳ್ ಪ್ರಚಾರ ನಡೆಸಿದರೂ ಜನರಿಂದ ಬೆಂಬಲ ಸಿಗಲಿಲ್ಲ. ಮತದಾರರು ಕಾಂಗ್ರೆಸ್ಗೆ ಬೆಂಬಲ ನೀಡಿದ್ದಾರೆ ಎಂದು ಹೇಳಿದರು.ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದು, ಇದು ಗೆಲುವಿಗೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ.ಈ ಚುನಾವಣಾ ಫಲಿತಾಂಶವು ಬಿಜೆಪಿಯ ವಿರುದ್ಧ ಜನರ ತಿರಸ್ಕಾರಕ್ಕೆ ಸಾಕ್ಷಿಯಾಗಿದೆ ಎಂದು ಸಚಿವರು ಅಭಿಪ್ರಾಯಪಟ್ಟರು.
For More Updates Join our WhatsApp Group :




