ಬೆಂಗಳೂರು: 436 ಕೋಟಿ ರೂ. ಹೊಸ ಎಲಿವೇಟೆಡ್ ಯೋಜನೆ.!

ಬೆಂಗಳೂರು: 436 ಕೋಟಿ ರೂ. ಹೊಸ ಎಲಿವೇಟೆಡ್ ಯೋಜನೆ.!

ಬಿ-ಸ್ಮೈಲ್ ಪ್ಲಾನ್ ಅಡಿಯಲ್ಲಿ ಬೃಹತ್ ರೋಟರಿ ಫ್ಲೈಓವರ್ ನಿರ್ಮಾಣಕ್ಕೆ ತಯಾರಿ.!

ಬೆಂಗಳೂರು: ಜಯದೇವ ಹಾಗೂ ಡಾಲ್ಮಿಯಾ ಫ್ಲೈಓವರ್‌ಗಳ ತೆರವು ಬಳಿಕ, ಈಗ ಪೂರ್ವ ಬೆಂಗಳೂರಿನ ಐಒಸಿ ಜಂಕ್ಷನ್‌ನ ಹಳೆಯ ಫ್ಲೈಓವರ್‌ನ್ನು ಕೆಡವಿ ಹೊಸ ಬೃಹತ್ ಎಲಿವೇಟೆಡ್ ರೋಟರಿ ಫ್ಲೈಓವರ್ ನಿರ್ಮಿಸಲು ಬಿ-ಸ್ಮೈಲ್ (ಬೆಂಗಳೂರು ಸ್ಮಾರ್ಟ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್) ಯೋಜನೆ ರೂಪಿಸಿದೆ.

2001–02ರಲ್ಲಿ ನಿರ್ಮಿತವಾದ ಈ ಫ್ಲೈಓವರ್ ಹೊಸ ಸಂಚಾರ ವಿನ್ಯಾಸಕ್ಕೆ ಅಡ್ಡಿಯಾಗುತ್ತಿರುವ ಕಾರಣ ತೆರವುಗೊಳಿಸಲಾಗುತ್ತಿದೆ. ಈ ಯೋಜನೆಯ ವೆಚ್ಚ ಆರಂಭದಲ್ಲಿ 263 ಕೋಟಿ ರೂ. ಆಗಿದ್ದರೂ, ಈಗ ವಿನ್ಯಾಸ ಬದಲಾವಣೆ ಮತ್ತು ಹೆಚ್ಚುವರಿ 1.5 ಕಿ.ಮೀ ಸಂಪರ್ಕ ರಸ್ತೆಯ ಸೇರ್ಪಡೆಯಿಂದ 436 ಕೋಟಿ ರೂ.ಗೆ ಏರಿಕೆಯಾಗಿದೆ.ಮಾರುತಿ ಸೇವಾನಗರದಿಂದ ಹೊಸ ಫ್ಲೈಓವರ್ ಸೇರಿಸಲಾಗಿದ್ದು, ಎಸ್‌ಎಂವಿಟಿ ರೈಲ್ವೇ ಟರ್ಮಿನಲ್‌ಗೆ ಸುಗಮ ಸಂಪರ್ಕ ನೀಡುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ. ಕಮ್ಮನಹಳ್ಳಿ, ಬಾಣಸವಾಡಿ ಮತ್ತು ಬೈಯಪ್ಪನಹಳ್ಳಿ ಭಾಗಗಳಿಂದ ಸಂಚಾರ ಸುಗಮಗೊಳ್ಳಲಿದೆ. ಆದರೆ ಕಾಮಗಾರಿ ವೇಳೆ ಭಾರೀ ಟ್ರಾಫಿಕ್ ಸಮಸ್ಯೆ ಎದುರಾಗುವ ಸಾಧ್ಯತೆ ಇದ್ದು, ಅದನ್ನು ನಿಯಂತ್ರಿಸಲು ಟ್ರಾಫಿಕ್ ಡೈವರ್ಷನ್ ಪ್ಲಾನ್ ಸಿದ್ಧಪಡಿಸಲಾಗುತ್ತಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *