ಬೆಂಗಳೂರು ಕಬ್ಬನ್ ಪಾರ್ಕ್ನಲ್ಲಿ ಡಬಲ್ ಧಮಾಕಾ: ಮಾವು-ಹಲಸು ಮೇಳಕ್ಕೆ ಭರ್ಜರಿ ಸಿದ್ಧತೆ
ಬೆಂಗಳೂರು: ಬೆಂಗಳೂರು ಮಾವು ಮತ್ತು ಹಲಸಿನ ಹಣ್ಣಿನ ಪ್ರಿಯರಿಗೆ ಈ ಬಾರಿ ಡಬಲ್ ಧಮಾಕಾ ಕಾಯುತ್ತಿದೆ. ನಗರದ ಕಬ್ಬನ್ ಪಾರ್ಕ್ ಮತ್ತು ಲಾಲ್ಬಾಗ್ನಲ್ಲಿ ಈ ವರ್ಷ ಮೊದಲ ಬಾರಿಗೆ ಎರಡು ಪ್ರತ್ಯೇಕ ಮಾವು ಮತ್ತು ಹಲಸಿನ ಮೇಳಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ. ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ವತಿಯಿಂದ ಕಬ್ಬನ್ ಪಾರ್ಕ್ನಲ್ಲಿ ಇದೇ ಮೇ 8ರಿಂದ ಮೇ 17ರವರೆಗೆ ಮೊದಲ ಹಂತದಲ್ಲಿ ಮಾವು-ಹಲಸು ಮೇಳ ನಡೆಯಲಿದೆ.
ಈ ಮೇಳವು ಮುಖ್ಯವಾಗಿ ಧಾರವಾಡ, ಮಂಡ್ಯ, ಮೈಸೂರು, ದಕ್ಷಿಣ ಬೆಂಗಳೂರು ಮತ್ತು ದಕ್ಷಿಣ ಕರ್ನಾಟಕದ ರೈತರಿಗೆ ಅನುಕೂಲವಾಗುವಂತೆ ಆಯೋಜಿಸಲಾಗಿದೆ. ಇಲ್ಲಿ ರೈತರು ನೇರವಾಗಿ ಬೆಳೆದ ಸಾವಯವ ಮತ್ತು ಕಾರ್ಬೈಡ್ ಮುಕ್ತ ಹಣ್ಣುಗಳನ್ನು ಮಾರಾಟ ಮಾಡಲು ಸುಮಾರು 70 ಸ್ಟಾಲ್ಗಳನ್ನು ಹಾಕಲಾಗುತ್ತದೆ. ಇದೇ ಮೇ ತಿಂಗಳ ಅಂತ್ಯದಲ್ಲಿ ಕಬ್ಬನ್ ಪಾರ್ಕ್ನಲ್ಲಿ ಮತ್ತೊಂದು ಬೃಹತ್ ಮೇಳವನ್ನು ಆಯೋಜಿಸಲಾಗುವುದು. ಇದರಲ್ಲಿ 100ಕ್ಕೂ ಹೆಚ್ಚು ಮಳಿಗೆಗಳಿರಲಿವೆ. ಇದರ ನಿಖರವಾದ ದಿನಾಂಕಗಳನ್ನು ಶೀಘ್ರದಲ್ಲೇ ಅಂತಿಮಗೊಳಿಸಲಾಗುವುದು. ಆರಂಭಿಕ ಬೆಳೆ ಬಂದಿರುವ ಮತ್ತು ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಸಿಗದೆ ಕಂಗಾಲಾಗಿರುವ ರೈತರಿಗೆ ನೆರವಾಗಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಈ ಮೇಳದಲ್ಲಿ ರಾಮನಗರ, ಮಂಡ್ಯ, ತುಮಕೂರು ಮತ್ತು ಉತ್ತರ ಕನ್ನಡ ಜಿಲ್ಲೆಗಳ ಮಾವು ಹಾಗೂ ಹಲಸು ಬೆಳೆಗಾರರು ಸಕ್ರಿಯವಾಗಿ ಭಾಗವಹಿಸಲಿದ್ದಾರೆ. ರೈತರ ಅನುಕೂಲಕ್ಕಾಗಿ ಒಟ್ಟು 57 ಮಳಿಗೆಗಳನ್ನು ಮೀಸಲಿಡಲಾಗಿದ್ದು, ಇದರಲ್ಲಿ ಮಾವು ಬೆಳೆಗಾರರಿಗೆ 50 ಮಳಿಗೆಗಳು ಮತ್ತು ಹಲಸು ಬೆಳೆಗಾರರಿಗೆ 7 ಮಳಿಗೆಗಳನ್ನು ಹಂಚಿಕೆ ಮಾಡಲಾಗಿದೆ. ಈ ಮೂಲಕ ಬೆಂಗಳೂರಿನ ಜನತೆಗೆ ಹಣ್ಣುಗಳ ರಾಜ ಮಾವು ಮತ್ತು ಹಲಸಿನ ಸವಿಯನ್ನು ಉಣಬಡಿಸಲು ಕಬ್ಬನ್ ಪಾರ್ಕ್ ಸಜ್ಜಾಗಿದೆ.
For More Updates Join our WhatsApp Group :




