ರಾಜ್ಯದ ಹಲವು ನಗರಗಳಲ್ಲಿ ಏರ್ ಕ್ವಾಲಿಟಿ ಏರಿಳಿತ: ಬೆಳಗಾವಿ ಅತ್ಯುತ್ತಮ, ಬೆಂಗಳೂರು ಇನ್ನೂ ಎಚ್ಚರಿಕೆ ವಲಯ
ಬೆಂಗಳೂರು : ರಾಜ್ಯದ ಪ್ರಮುಖ ನಗರಗಳ ವಾಯು ಗುಣಮಟ್ಟದಲ್ಲಿ ಇತ್ತೀಚೆಗೆ ಗಮನಾರ್ಹ ಬದಲಾವಣೆ ಕಂಡುಬಂದಿದೆ. ವಿಶೇಷವಾಗಿ Bengaluru ಮತ್ತು Belagavi ನಗರಗಳಲ್ಲಿ ಏರ್ ಕ್ವಾಲಿಟಿ ಇಂಡೆಕ್ಸ್ (AQI) ಮಟ್ಟದಲ್ಲಿ ಸುಧಾರಣೆ ದಾಖಲಾಗಿದೆ. ಬೆಂಗಳೂರಿನ ಇಂದಿನ AQI 114ಕ್ಕೆ ಇಳಿದಿದ್ದು, ಕಳೆದ ಕೆಲವು ದಿನಗಳಿಗಿಂತ ಉತ್ತಮ ಮಟ್ಟದಲ್ಲಿದೆ. ಆದರೂ ತಜ್ಞರ ಪ್ರಕಾರ ಇದು ಸಂಪೂರ್ಣ ಸುರಕ್ಷಿತ ಮಟ್ಟವಲ್ಲ. ವಿಶ್ವ ಆರೋಗ್ಯ ಸಂಸ್ಥೆ (WHO) ಮಾನದಂಡಗಳ ಪ್ರಕಾರ 100ಕ್ಕಿಂತ ಮೇಲ್ಪಟ್ಟ AQI ದೀರ್ಘಕಾಲ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟುಮಾಡಬಹುದು ಎಂದು ಎಚ್ಚರಿಸಲಾಗಿದೆ.
ಬೆಳಗಾವಿಯಲ್ಲಿ ಕೆಲ ದಿನಗಳ ಹಿಂದೆ ತೀವ್ರ ಕಳಪೆ ಮಟ್ಟ ತಲುಪಿದ್ದ ವಾಯು ಗುಣಮಟ್ಟ ಇಂದು 62ಕ್ಕೆ ಇಳಿದು ಗಮನಾರ್ಹ ಸುಧಾರಣೆ ಕಂಡಿದೆ. ಇದೇ ವೇಳೆ ಮಂಗಳೂರು 138, ಮೈಸೂರು 101, ಉಡುಪಿ 118 AQI ದಾಖಲಿಸಿದ್ದು, ಕೆಲವು ನಗರಗಳಲ್ಲಿ ಇನ್ನೂ ಗಾಳಿಯ ಗುಣಮಟ್ಟ ಕಳಪೆ ಮಟ್ಟದಲ್ಲೇ ಮುಂದುವರಿದಿದೆ. ಕಲಬುರ್ಗಿ, ಬಳ್ಳಾರಿ ಮತ್ತು ಶಿವಮೊಗ್ಗ ನಗರಗಳಲ್ಲಿ ಸಹ ಮಧ್ಯಮ ಮಟ್ಟದ AQI ದಾಖಲಾಗಿದೆ.

ತಜ್ಞರ ಅಭಿಪ್ರಾಯದಂತೆ ವಾಹನ ದಟ್ಟಣೆ, ಕೈಗಾರಿಕಾ ಮಾಲಿನ್ಯ, ಧೂಳು ಹಾಗೂ ಹವಾಮಾನ ಬದಲಾವಣೆಗಳು ಗಾಳಿಯ ಗುಣಮಟ್ಟದ ಏರಿಳಿತಕ್ಕೆ ಪ್ರಮುಖ ಕಾರಣಗಳಾಗಿವೆ. ಮಕ್ಕಳಲ್ಲಿ, ವೃದ್ಧರಲ್ಲಿ ಮತ್ತು ಶ್ವಾಸಕೋಶ ಸಮಸ್ಯೆ ಇರುವವರಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇದೆ. ಮಾಸ್ಕ್ ಬಳಕೆ, ಹೊರಾಂಗಣ ಚಟುವಟಿಕೆ ಕಡಿಮೆ ಮಾಡುವುದು ಮತ್ತು ಪರಿಸರ ಸ್ನೇಹಿ ಕ್ರಮಗಳನ್ನು ಅನುಸರಿಸುವುದು ಅಗತ್ಯ ಎಂದು ಸಲಹೆ ನೀಡಲಾಗಿದೆ.
For More Updates Join our WhatsApp Group :



