ಮೀಸಲಾತಿಯನ್ನು ಶೆಡ್ಯೂಲ್ 9ಗೆ ಸೇರಿಸದಿದ್ದರೆ ಉಗ್ರ ಹೋರಾಟ!

ಮೀಸಲಾತಿಯನ್ನು ಶೆಡ್ಯೂಲ್ 9ಗೆ ಸೇರಿಸದಿದ್ದರೆ ಉಗ್ರ ಹೋರಾಟ!

ಎಸ್‌ಸಿ–ಎಸ್‌ಟಿ ಮೀಸಲಾತಿ ವಿವಾದ: ಕೇಂದ್ರ–ರಾಜ್ಯ ಸರ್ಕಾರಗಳ ವಿರುದ್ಧ ಹೋರಾಟಕ್ಕೆ ವಿ.ಎಸ್. ಉಗ್ರಪ್ಪ ಆಗ್ರಹ

ಬೆಂಗಳೂರು: ಪರಿಶಿಷ್ಟ ಪಂಗಡ ಹಾಗೂ ಪರಿಶಿಷ್ಟ ಜಾತಿಯ ಮೀಸಲಾತಿ ಹೆಚ್ಚಳ ವಿಚಾರವನ್ನು ಶೆಡ್ಯೂಲ್ 9ಗೆ ಸೇರಿಸದಿದ್ದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಮಾಜಿ ಸಂಸದರು, ಕರ್ನಾಟಕ ರಾಜ್ಯ ವಾಲ್ಮೀಕಿ ಸಮಾಜದ ಸಮಾನ ಮನಸ್ಕರ ವೇದಿಕೆ ಅಧ್ಯಕ್ಷರಾದ ವಿ.ಎಸ್. ಉಗ್ರಪ್ಪ ಎಚ್ಚರಿಸಿದ್ದಾರೆ.

ಬೆಂಗಳೂರಿನ ಶಾಸಕರ ಭವನದ ಆವರಣದಲ್ಲಿರುವ ವಾಲ್ಮೀಕಿ ಪ್ರತಿಮೆ ಎದುರು ಸಮಾಜದ ಮುಖಂಡರ ಸಭೆ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದರು. ಇಂದು ಎಸ್ಟಿ, ಎಸ್ಸಿ, ಒಬಿಸಿ ಸಮುದಾಯದ ಸಂಘಟಕರ ತುರ್ತು ಸಭೆ ನಡೆಸಿದ್ದೇವೆ. ನಾವು ಈಗಾಗಲೇ 22 ಜಿಲ್ಲೆಗಳ ಪ್ರವಾಸ ಮಾಡಿ ಎಲ್ಲ ಕಡೆ ಸುದ್ದಿಗೋಷ್ಠಿ ನಡೆಸಲಾಗಿದೆ. ಉಳಿದ ಜಿಲ್ಲೆಗಳಲ್ಲಿ ಮುಂದೆ ಪ್ರವಾಸ ಮಾಡುತ್ತೇವೆ. ರಾಜ್ಯದಲ್ಲಿ 1.20 ಕೋಟಿ ಎಸ್ಸಿ, 50 ಲಕ್ಷ ಎಸ್ಟಿ, 32% ಒಬಿಸಿ ಜನರಿದ್ದಾರೆ.  243 ಕಲಂ ಪ್ರಕಾರ ಎಲ್ಲ ಕಡೆ ಮೀಸಲಾತಿ ಇದೆ. ಆದರೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಇಲ್ಲದಾಗಿದೆ ಎಂದರು.

ಹೈಕೋರ್ಟ್ ನಲ್ಲಿ 2022ರಲ್ಲಿ (16852/2015)  ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಹಾಕಲಾಗಿತ್ತು. ಹೈಕೋರ್ಟ್ ನಿರ್ದೇಶನದ ಮೇಲೆ ನ್ಯಾ. ನಾಗಮೋಹನ್ ದಾಸ್ ಆಯೋಗ ರಚನೆ ಆಯ್ತು. ನಂತರ ನ್ಯಾ. ಸುಭಾಷ್ ಅಡಿ ನೇತೃತ್ವದಲ್ಲಿ ಮತ್ತೊಂದು ಆಯೋಗ ಆಯ್ತು. ಅವುಗಳ ವರದಿ ಆದಾರದ ಮೇಲೆ ಹಿಂದಿನ ಬಿಜೆಪಿ ಸರ್ಕಾರ ಮೀಸಲಾತಿ ಹೆಚ್ಚಳ ಮಾಡ್ತು. ಆದರೆ ಇಲ್ಲಿವರೆಗೆ ಆ ಮೀಸಲಾತಿ ಕಾನೂನನ್ನು ಶೆಡ್ಯೂಲ್ 9 ಗೆ ಸೇರಿಸಿಲ್ಲ. ಇದು ವಿಪರ್ಯಾಸ. ಆದರೆ ಈಗ ಹೈಕೋರ್ಟ್ ನಲ್ಲಿ ತಡೆಯಾಜ್ಞೆ ಬಂದಿದೆ! ಅದಾದ ಬಳಿಕ ಯಾವ ಪಕ್ಷದ ನಾಯಕರೂ ಮಾತಾಡ್ತಿಲ್ಲ. ನಿಮಗೆ ಬದ್ದತೆ ಇದ್ರೆ ದಯಮಾಡಿ ಬಾಯಿ ಬಿಡಿ, ಇದನ್ನು ಶೆಡ್ಯೂಲ್ 9ಗೆ ಸೇರಿಸಲು ಒತ್ತಾಯಿಸಬೇಕು ಎಂದು ಆಗ್ರಹಿಸಿದರು.

For More Updates Join our WhatsApp Group :  

https://chat.whatsapp.com/JVoHqE476Wn3pVh1gWNAcH

                                  

Leave a Reply

Your email address will not be published. Required fields are marked *