ಬುರುಡೆ ಕೇಸ್ ಬಳಿಕ ಗೊಂದಲ: ಬಿಲ್ ಪಾವತಿ ವಿಳಂಬದಿಂದ ವಾಹನ ಮಾಲೀಕರ ಅಸಮಾಧಾನ..
ಮಂಗಳೂರು : ನಗರದ Mangaluru ವ್ಯಾಪ್ತಿಯಲ್ಲಿ ನಡೆದಿದ್ದ ಧರ್ಮಸ್ಥಳ ಉತ್ಖನನ ಪ್ರಕರಣ ಮತ್ತೆ ಚರ್ಚೆಗೆ ಬಂದಿದೆ. Dharmasthala ಪ್ರದೇಶದಲ್ಲಿ ನೂರಾರು ಹೆಣಗಳನ್ನು ಹೂತಿರುವ ಆರೋಪದ ಹಿನ್ನೆಲೆಯಲ್ಲಿ ನಡೆದಿದ್ದ ವ್ಯಾಪಕ ಉತ್ಖನನ ಕಾರ್ಯಾಚರಣೆ ನಂತರ, ಈಗ ಕೆಲಸ ಮಾಡಿದ ಕಾರ್ಮಿಕರು ಹಾಗೂ ವಾಹನ ಮಾಲೀಕರು ಕೂಲಿ ಹಾಗೂ ಬಾಡಿಗೆ ಹಣ ಪಾವತಿಯಾಗಿಲ್ಲ ಎಂದು ಆರೋಪಿಸುತ್ತಿದ್ದಾರೆ.
2025ರ ಜುಲೈ 29ರಿಂದ ಆಗಸ್ಟ್ 13ರವರೆಗೆ ಸುಮಾರು 17 ಸ್ಥಳಗಳಲ್ಲಿ ಉತ್ಖನನ ಕಾರ್ಯ ನಡೆದಿದ್ದು, ಈ ಕಾರ್ಯಾಚರಣೆಯಲ್ಲಿ ಕೂಲಿಯಾಳುಗಳು ಮಳೆ-ಬಿಸಿಲು ಲೆಕ್ಕಿಸದೇ ಕೆಲಸ ಮಾಡಿದ್ದಾರೆ. ಆದರೆ ಸುಮಾರು 10 ತಿಂಗಳಾದರೂ ಕೂಲಿ ಹಾಗೂ ಯಂತ್ರೋಪಕರಣಗಳ ಬಾಡಿಗೆ ಬಾಕಿ ಉಳಿದಿದೆ ಎಂಬುದು ಪ್ರಮುಖ ಆರೋಪವಾಗಿದೆ. ಒಟ್ಟು 2 ಲಕ್ಷ ರೂಪಾಯಿಗೂ ಅಧಿಕ ಮೊತ್ತ ಪಾವತಿಯಾಗಿಲ್ಲ ಎಂದು ಹೇಳಲಾಗುತ್ತಿದೆ.
ಜೆಸಿಬಿ ಹಾಗೂ ಹಿಟಾಚಿ ಯಂತ್ರಗಳನ್ನು ಬಳಸಲಾಗಿದ್ದು, ಕೆಲ ದಿನ ಮಾತ್ರ ಕೆಲಸ ನಡೆದಿದ್ದರೂ ಸಂಪೂರ್ಣ ಬಿಲ್ ಪಾವತಿಗೆ ವಿಳಂಬವಾಗಿದೆ ಎಂದು ಮಾಲಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶಾಮಿಯಾನ, ಹಾರೆ-ಪಿಕಾಸು, ಕುಡಿಯುವ ನೀರು ಹಾಗೂ ವಾಹನಗಳ ಬಾಡಿಗೆಗೂ ಹಣ ಬಾಕಿ ಉಳಿದಿದೆ ಎಂದು ಆರೋಪಿಸಲಾಗಿದೆ.

ಬಿಲ್ ಪಾವತಿ ವಿಚಾರದಲ್ಲಿ ಗ್ರಾಮ ಪಂಚಾಯತ್ ಹಾಗೂ Special Investigation Team ನಡುವಿನ ಜವಾಬ್ದಾರಿ ಬಗ್ಗೆ ಗೊಂದಲ ಇದೆ ಎಂದು ಹೇಳಲಾಗುತ್ತಿದೆ. ಒಂದು ಕಡೆ ಬಿಲ್ ಪಾವತಿ ಆಗಿದೆ ಎಂಬ ಮಾಹಿತಿ ನೀಡಲಾಗುತ್ತಿದ್ದರೆ, ಮತ್ತೊಂದು ಕಡೆ ಹಣ ಇನ್ನೂ ಪಾವತಿಯಾಗಿಲ್ಲ ಎಂಬ ಆರೋಪ ಮುಂದುವರಿದಿದೆ.
ಪಂಚಾಯತ್ ಅಧಿಕಾರಿಗಳ ಬದಲಾವಣೆ ಹಾಗೂ ದಾಖಲೆಗಳ ಗೊಂದಲದಿಂದ ಸಮಸ್ಯೆ ಇನ್ನಷ್ಟು ಜಟಿಲವಾಗಿದೆ ಎಂದು ಕಾರ್ಮಿಕರು ಹೇಳುತ್ತಿದ್ದಾರೆ. ತಮ್ಮ ದುಡಿಮೆಯ ಹಣವನ್ನು ಶೀಘ್ರ ಪಾವತಿಸಬೇಕು ಎಂದು ಕೂಲಿ ಕಾರ್ಮಿಕರು ಹಾಗೂ ಯಂತ್ರ ಮಾಲಕರು ಒತ್ತಾಯಿಸುತ್ತಿದ್ದಾರೆ.
For More Updates Join our WhatsApp Group :




