ತಪ್ಪು ಯಾರದು? ಮಾಲಿಕನಾ ಅಥವಾ ಸವಾರನಾ?
ಬಿಹಾರ: ಬಿಶುನ್ಪುರ ವ್ಯಾಪ್ತಿಯ ದೇವೀಪುರದಲ್ಲಿ ಅತಿ ವೇಗವಾಗಿ ಬಂದ ಬೈಕ್ ಸವಾರನೊಬ್ಬ ರಸ್ತೆ ದಾಟುತ್ತಿದ್ದ ಹಸುವಿಗೆ ಬಂದು ಡಿಕ್ಕಿ ಹೊಡೆದಿರುವ ಘಟನೆ ನಡೆದಿದೆ. ಅಪಘಾತದ ತೀವ್ರತೆಗೆ ಹಸು ಮತ್ತು ಬೈಕ್ ಸವಾರ ಇಬ್ಬರಿಗೂ ಗಂಭೀರ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಸ್ಥಳೀಯ ಮೂಲಗಳ ಪ್ರಕಾರ, ದೇವೀಪುರ ಗ್ರಾಮದ ವ್ಯಕ್ತಿಯೊಬ್ಬರು ತಮ್ಮ ಹಸುವನ್ನು ಕರೆದುಕೊಂಡು ರಸ್ತೆ ದಾಟುತ್ತಿದ್ದರು.
ಈ ವೇಳೆ ಬಿಶುನ್ಪುರ ಕಡೆಯಿಂದ ಅತಿ ವೇಗವಾಗಿ ಬಂದ ಮೋಟಾರು ಸೈಕಲ್ ಸವಾರ, ರಸ್ತೆಯಲ್ಲಿದ್ದ ಹಸುವನ್ನು ಗಮನಿಸದೆ ನೇರವಾಗಿ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯ ರಭಸಕ್ಕೆ ಹಸು ರಸ್ತೆಯ ಮೇಲೆ ಬಿದ್ದಿದ್ದು, ತೀವ್ರವಾಗಿ ರಕ್ತಸ್ರಾವವಾಗಿದೆ. ಗಾಯಾಳು ಸವಾರನನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.
For More Updates Join our WhatsApp Group :




