ಯುವಕರಿಗೆ ಜಾಗೃತಿ ಕರೆ – ದೇಶಪ್ರೇಮವೇ ಮುಖ್ಯ
ತಿಪಟೂರು; ಶ್ರೀಮದ್ ರಂಭಾಪುರಿ ಮಠದ ಆವರಣದಲ್ಲಿ ನಡೆಯುತ್ತಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತಿಪಟೂರಿನ ರಾಷ್ಟಿçÃಯ ಸೇವಾ ಯೋಜನೆಯ ಆರನೆಯ ದಿನದ ಕಾರ್ಯಕ್ರಮದಲ್ಲಿ ‘ದೇಶದ ರಕ್ಷಣೆಯಲ್ಲಿ ಯುವಕರ ಪಾತ್ರ’ ಎಂಬ ವಿಷಯದ ಬಗ್ಗೆ ಮಾತನಾಡುತ್ತ ದೇಶದ ರಕ್ಷಣೆಯಲ್ಲಿ ಮಿಲಿಟರಿಗೆ ಎಷ್ಟು ಜವಾಬ್ದಾರಿ ಇರುತ್ತದೆಯೋ ಹಾಗೆಯೇ ಯುವಕರಿಗೆ ದೇಶದ ರಕ್ಷಣೆಯ ಜವಾಬ್ದಾರಿಯನ್ನು ಅರಿತು ನಡೆಯಬೇಕಾಗುತ್ತದೆ. ತಾವು ಬದಲಾದರೆ ದೇಶದ ಬದಲಾವಣೆ ಸಾಧ್ಯವಾಗುತ್ತದೆ. ದೇಹ ಪ್ರೇಮಕ್ಕಿಂತ ದೇಶಪ್ರೇಮ ಮುಖ್ಯ. ರೀಲ್ಸ್ ಮಾಡುವುದರಿಂದ ಬದುಕು ಸಾರ್ಥಕವಾಗುವುದಿಲ್ಲ.
ಮತ್ತೊಬ್ಬ ಸಂಪನ್ಮೂಲ ವ್ಯಕ್ತಿಯಾದ ಡಾ. ವೆಂಕಟೇಶ್ ಎಲ್ ಎಂ ‘ಯುವ ಜನಾಂಗ ಮತ್ತು ಆಧುನಿಕ ಕೃಷಿ’ ಎಂಬ ವಿಷಯದ ಬಗ್ಗೆ ಮಾತನಾಡಿ ಕೃಷಿಯನ್ನು ಲಾಭದಾಯಕವಾಗಿ ಸುಸ್ಥಿರ ವೃತ್ತಿಯಾಗಿ ಮಾಡಿಕೊಳ್ಳುವಲ್ಲಿ ಯುವಜನಾಂಗದ ಪಾತ್ರ ಅತ್ಯಂತ ಮಹತ್ವದ್ದು. ಯುವಕರು ಆಧುನಿಕ ಕೃಷಿಯನ್ನು ಹೊಸ ಹೊಸ ಅನ್ವೇಷಣೆಗಳು, ತಂತ್ರಜ್ಞಾನಗಳು, ಸಾಹಸಮಯ ಪ್ರವೃತ್ತಿ, ಕೃಷಿಯಲ್ಲಿ ಹೊಸ ಪ್ರಯೋಗಗಳನ್ನು ಮಾಡುತ್ತ ಕೃಷಿಯನ್ನು ಮಾದರಿ ಉದ್ಯಮವಾಗಿ ಪರಿವರ್ತಿಸಿಕೊಂಡು ಕೃಷಿಕರ ಬದುಕನ್ನು ಸುಧಾರಿಸಬೇಕು. ಕೃಷಿ ಕೇವಲ ಜೀವನೋಪಾಯವಲ್ಲ, ಅದು ಒಂದು ಆದಾಯ ತರುವ ಉದ್ಯಮವಾಗಬೇಕು. ಕೃಷಿಯಲ್ಲಿ ಹೆಚ್ಚು ಹೆಚ್ಚು ತೊಡಗಿಕೊಂಡು ಹೊಸ ತಂತ್ರಜ್ಞಾನಗಳಾದ ಹನಿ ನೀರಾವರಿ, ಸ್ಪಿಂಕ್ಲರ್, ಯಂತ್ರಗಳು, ಮಾರುಕಟ್ಟೆಯನ್ನು ಆನ್‌ಲೈನ್ ಮೂಲಕ ವಿಕಸನಗೊಳಿಸುವುದು. ಹೈಡ್ರೋಫೋನಿಕ್ಸ್, ಫಾರಂ ಮ್ಯಾನೇಜ್‌ಮೆಂಟ್, ಡ್ರೋನ್ ತಂತ್ರಜ್ಞಾನದ ಮೂಲಕ ಕೃಷಿ ಕಡೆಗೆ ಗಮನ ಹರಿಸಬೇಕು. ನಮ್ಮಲ್ಲಿ ನಿಸರ್ಗದತ್ತವಾಗಿ ಸಿಗುವ ಸಂಪನಊಲಗಳನ್ನು ಶೂನ್ಯ ಬಂಡವಾಳದ ಮೂಲಕ ಹೆಚ್ಚು ಹೆಚ್ಚು ಬಳಕೆ ಮಾಡಿಕೊಂಡು ಕೃಷಿಯನ್ನು ಮಾಡಿದರೆ ಕೃಷಿ ಕ್ಷೇತ್ರವು ಅಭಿವೃದ್ಧಿ ಹೊಂದುತ್ತದೆ ಎಂದರು.
ಪ್ರಾಂಶುಪಾಲರಾದ ಡಾ. ಶಶಿಕುಮಾರ್ ಹೆಚ್.ಸಿ, ಶಿಬಿರಾಧಿಕಾರಿಗಳಾದ ಡಾ. ತುಕಾರಾಮ ವಿ, ಸ್ಮಿತಾ ಹೆಚ್.ಎಸ್ ಮತ್ತು ಸಹ ಶಿಬಿರಾಧಿಕಾರಿಗಳಾದ ಜಾಯಿದಾಬಿ ಖಾನಬೋಗಿ, ವೇದಮೂರ್ತಿ, ಜ್ಯೋತಿ ಎಸ್ ಸಹಾಯಕ ಪ್ರಾಧ್ಯಾಪಕರಾದ ಲಿಂಗರಾಜು, ಹಾಜರಿದ್ದರು.
For More Updates Join our WhatsApp Group :




