ಅಪಘಾತವಲ್ಲ, ಇದು ಯೋಜಿತ ಕೊ*!
ಉತ್ತರ ಕನ್ನಡ: ಅರಬೈಲ್ ಘಟ್ಟದಲ್ಲಿ ಸಂಭವಿಸಿದ್ದ ಕಾರು ಬೆಂಕಿ ಪ್ರಕರಣ ಇದೀಗ ಕೊಲೆ ಎಂದು ಬಹಿರಂಗವಾಗಿದೆ.
50ಕ್ಕೂ ಹೆಚ್ಚು ಪ್ರಕರಣದ ಆರೋಪಿಯಾಗಿದ್ದ ನಿತೀಶ್!
ಮೃತನು ಬೆಳಗಾವಿ ಮೂಲದ ನಿತೀಶ್ ಡಾಪಳೆ ಎಂದು ಗುರುತಿಸಲಾಗಿದ್ದು, ಅವನು 50ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳಲ್ಲಿ ಬೇಕಾಗಿದ್ದ ಮೋಸ್ಟ್ ವಾಂಟೆಡ್ ಆರೋಪಿಯಾಗಿದ್ದ ಎಂಬುದು ಪೊಲೀಸರ ತನಿಖೆಯಲ್ಲಿ ಬಹಿರಂಗವಾಗಿದೆ. ಅವನನ್ನು ಹುಬ್ಬಳ್ಳಿಯಲ್ಲಿ ತನ್ನ ಸಹಚರರೇ ಕೊಲೆ ಮಾಡಿರುವುದು ಗೊತ್ತಾಗಿದೆ. ಕೊಲೆ ಮಾಡಿದ ಬಳಿಕ ನಿತೀಶ್ ಶವವನ್ನು ಕಾರಿನಲ್ಲಿ ಹಾಕಿ ಅರಬೈಲ್ ಘಟ್ಟಕ್ಕೆ ತಂದು, ಸಾಕ್ಷ್ಯ ನಾಶ ಮಾಡಲು ಕಾರಿಗೆ ಬೆಂಕಿ ಹಚ್ಚಿ ಸುಟ್ಟು ಹಾಕಿರುವುದು ತನಿಖೆಯಲ್ಲಿ ತಿಳಿದುಬಂದಿದೆ.
ಆರು ಆರೋಪಿಗಳಲ್ಲಿ ಮೂವರ ಬಂಧನ
ಈ ಪ್ರಕರಣದಲ್ಲಿ ಒಟ್ಟು ಆರು ಮಂದಿಯ ಹೆಸರು ಕೇಳಿಬಂದಿದ್ದು, ಈಗಾಗಲೇ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ನಯೀಮ್ ಮೌಲಾ, ದಾದಾ ಪೀರ್ ಮತ್ತು ಸೋಯಬ್ ಎಂದು ಗುರುತಿಸಲಾಗಿದ್ದು, ಇವರು ಹುಬ್ಬಳ್ಳಿ ಮೂಲದವರು. ಉಳಿದ ಶಾನು, ಜಮೀರ್ ಹಾಗೂ ಆಯುಬ್ ಎಂಬ ಆರೋಪಿಗಳಿಗಾಗಿ ಪೊಲೀಸರು ತೀವ್ರ ಹುಡುಕಾಟ ಮುಂದುವರೆಸಿದ್ದಾರೆ. ಈ ಪ್ರಕರಣ ಯಲ್ಲಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.
For More Updates Join our WhatsApp Group :




