ಮುಖ್ಯೋಪಾಧ್ಯಾಯರ ಕನಸು; ಸ್ವಂತ ಖರ್ಚಿನಲ್ಲಿ ಬೆಂಗಳೂರು ಟೂರ್.
ಕೊಪ್ಪಳ : ಬಹದ್ದೂರಬಂಡಿ ಗ್ರಾಮದ ಸರಕಾರಿ ಶಾಲೆಯ ಮುಖ್ಯೋಪಾಧ್ಯಾಯ ಬೀರಪ್ಪ ಅಂಡಗಿ ಸ್ವಂತ ಖರ್ಚಿನಲ್ಲಿ 24 ವಿದ್ಯಾರ್ಥಿಗಳನ್ನು ಜಿಂದಾಲ್ ಏರ್ಪೋರ್ಟ್ನಿಂದ ವಿಮಾನದಲ್ಲಿ ಬೆಂಗಳೂರಿಗೆ ಪ್ರವಾಸಕ್ಕೆ ಕರೆದೊಯ್ದಿದ್ದಾರೆ. ವಿದ್ಯಾರ್ಥಿಗಳ ಜೊತೆಗೆ ಶಿಕ್ಷಕರು, ಎಸ್ಡಿಎಂಸಿ ಸದಸ್ಯರು, ಬಿಸಿಯೂಟ ಅಡುಗೆ ತಯಾರಕರು ಸೇರಿ ಒಟ್ಟು 40 ಜನರು ವಿಮಾನ ಪ್ರಯಾಣ ಮಾಡಿದ್ದಾರೆ. ವಿಶೇಷ ವಿಮಾನಕ್ಕೆ 3.50 ಲಕ್ಷ ರೂಪಾಯಿ ವೆಚ್ಚವನ್ನು ಬೀರಪ್ಪ ಭರಿಸಿದ್ದಾರೆ. ಊಟ ವಸತಿ ಸೇರಿ ಎರಡು ದಿನಗಳ ಪ್ರವಾಸದ ವೆಚ್ಚ ಸುಮಾರು 5 ಲಕ್ಷ ರೂ. ಆಗಲಿದೆ.
For More Updates Join our WhatsApp Group :



