‘ಪುಷ್ಪ 2’ ಹಾಡಿಗೆ ಸೊಂಟ ಬಳುಕಿಸಿದ ಆಶಿಕಾ ರಂಗನಾಥ್

ಟಾಲಿವುಡ್ : ಬಹುನಿರೀಕ್ಷಿತ ‘ಪುಷ್ಪ 2’ ಸಿನಿಮಾದ ಹಾಡುಗಳು ಸಖತ್ ಸದ್ದು ಮಾಡುತ್ತಿವೆ. ಅದರಲ್ಲೂ ಇತ್ತೀಚೆಗೆ ರಿಲೀಸ್ ಆದ ಸೂಸೇನೆ ಎಂಬ ಹಾಡಿಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಈ ಹಾಡಿಗೆ ನಟಿ ಆಶಿಕಾ ರಂಗನಾಥ್ ಕೂಡ ಹೆಜ್ಜೆ ಹಾಕಿದ್ದಾರೆ

ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ನಟನೆಯ ಪುಷ್ಪ 2 ಸಿನಿಮಾ ಸೂಸೇನೆ ಸಾಂಗ್‌ಗೆ ಈಗಾಗಲೇ ಸಾಕಷ್ಟು ಜನ ರೀಲ್ಸ್ ಮಾಡುವ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ. ಇದರ ನಡುವೆ ಆಶಿಕಾ ಕೂಡ ಮಸ್ತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಸೊಂಟ ಬಳುಕಿಸಿದ ಆಶಿಕಾಗೆ ಬಗೆ ಬಗೆಯ ಕಾಮೆಂಟ್ಸ್ ಹರಿದು ಬರುತ್ತಿವೆ

ಅಂದಹಾಗೆ, ನಟಿ ಆಶಿಕಾ ಕೂಡ ಕನ್ನಡದ ಜೊತೆ ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅವರಿಗೂ ಉತ್ತಮ ಅವಕಾಶಗಳು ಅರಸಿ ಬರುತ್ತಿವೆ

Leave a Reply

Your email address will not be published. Required fields are marked *