ಬೆಂಗಳೂರು ‘ಐಸ್ಕ್ರೀಂ ರಾಜಧಾನಿ’: ಬೇಸಿಗೆಯಲ್ಲಿ ದಾಖಲೆ ಆರ್ಡರ್.!

ಬೆಂಗಳೂರು ‘ಐಸ್ಕ್ರೀಂ ರಾಜಧಾನಿ’: ಬೇಸಿಗೆಯಲ್ಲಿ ದಾಖಲೆ ಆರ್ಡರ್

ತಣ್ಣಗಿನ ಪದಾರ್ಥಗಳಿಗೆ ಭರ್ಜರಿ ಬೇಡಿಕೆ, ಸಿಲಿಕಾನ್ ಸಿಟಿ ಈಗ ದೇಶದ ‘ಐಸ್‌ಕ್ರೀಂ ರಾಜಧಾನಿ’

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಬೇಸಿಗೆಯ ತಾಪ ಏರುತ್ತಿದ್ದಂತೆ, ಬೆಂಗಳೂರಿಗರು ತಂಪು ತಂಪಾದ ಐಸ್‌ಕ್ರೀಂ  ಸವಿಯುವಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಸ್ವಿಗ್ಗಿ, ಇನ್‌ಸ್ಟಾಮಾರ್ಟ್ ಬಿಡುಗಡೆ ಮಾಡಿರುವ ‘ಸಮ್ಮರ್ ಟ್ರೆಂಡ್ಸ್ 2026’  ವರದಿಯ ಪ್ರಕಾರ, ಇಡೀ ದೇಶದಲ್ಲೇ ಅತಿ ಹೆಚ್ಚು ಐಸ್‌ಕ್ರೀಂ ಆರ್ಡರ್ ಮಾಡುವ ಮೂಲಕ ಬೆಂಗಳೂರು ‘ಭಾರತದ ಐಸ್‌ಕ್ರೀಂ ರಾಜಧಾನಿ’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಭಾರತದ ಒಟ್ಟು ಐಸ್‌ಕ್ರೀಂ ಬೇಡಿಕೆಯಲ್ಲಿ ಶೇಕಡಾ 14% ರಷ್ಟು ಪಾಲು ಕೇವಲ ಬೆಂಗಳೂರು ನಗರವೊಂದರಿಂದಲೇ ದಾಖಲಾಗಿದ್ದು, ಸಂಜೆ 6 ಗಂಟೆಯ ನಂತರ ಐಸ್‌ಕ್ರೀಂ ಬೇಡಿಕೆ ದುಪ್ಪಟ್ಟಾಗುತ್ತಿದ್ದು, ವಿಶೇಷವಾಗಿ ರಾತ್ರಿ 9 ಗಂಟೆಗೆ ಅತಿ ಹೆಚ್ಚು ಜನರು ಐಸ್‌ಕ್ರೀಂ ಆರ್ಡರ್ ಮಾಡುತ್ತಿದ್ದಾರೆ.

ಇನ್ನು ವಿವಿಧ ಫ್ಲೇವರ್‌ಗಳ ನಡುವೆ ಶೇ. 28% ರಷ್ಟು ಜನರು ‘ಚಾಕೊಲೇಟ್’ ಫ್ಲೇವರ್ ಅನ್ನು ಇಷ್ಟಪಡುವ ಮೂಲಕ ಇದನ್ನು ದೇಶದ ನಂಬರ್ ಒನ್ ಫ್ಲೇವರ್ ಆಗಿ ಆಯ್ಕೆ ಮಾಡಿದ್ದಾರೆ. ಬಿಸಿಲಿನ ತಾಪ ತಾಳಲಾರದೆ ಜನ ಕೇವಲ ಐಸ್‌ಕ್ರೀಂ ಮಾತ್ರವಲ್ಲದೆ, ಫ್ಯಾನ್‌ಗಳ ಖರೀದಿ (280% ಏರಿಕೆ) ಹಾಗೂ ಸನ್‌ಗ್ಲಾಸ್‌ಗಳ (650% ಏರಿಕೆ) ಖರೀದಿಯಲ್ಲೂ ತೊಡಗಿದ್ದಾರೆ.

ಬೇಸಿಗೆಯ ಈ ಸಮಯದಲ್ಲಿ ಐಸ್‌ಕ್ರೀಂ ಜೊತೆಗೆ ಎಳನೀರು, ಮಜ್ಜಿಗೆಯಂತಹ ದೇಶಿ ಪಾನೀಯಗಳಿಗೂ ಹೆಚ್ಚಿನ ಬೇಡಿಕೆ ವ್ಯಕ್ತವಾಗುತ್ತಿದೆ ಎಂದು ವರದಿ ತಿಳಿಸಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *