ಆನೇಕಲ್‌ನಲ್ಲಿ ಭೀಕರ ಕೊ*: ಅಳಿಯನಿಗೆ ಬೆ*ಕಿ ಹಚ್ಚಿ ಹ*, ಮಾವ-ಭಾವ ಬಂಧನ.!

ಆನೇಕಲ್‌ನಲ್ಲಿ ಭೀಕರ ಕೊ*: ಅಳಿಯನಿಗೆ ಬೆ*ಕಿ ಹಚ್ಚಿ ಹ*, ಮಾವ-ಭಾವ ಬಂಧನ.!

ಕುಟುಂಬ ಕಲಹ ಅಂತ್ಯಕ್ಕೆ ಕೊ*: ಆನೇಕಲ್‌ನಲ್ಲಿ 19 ದಿನಗಳ ಹೋರಾಟದ ಬಳಿಕ ನವೀನ್ ಸಾ*.

ಬೆಂಗಳೂರು:  ಹೊರವಲಯದ ಆನೇಕಲ್‌ನಲ್ಲಿ ಕೌಟುಂಬಿಕ ಕಲಹವು ಭೀಕರ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ನಡೆದಿದೆ. ಪತ್ನಿ ಮತ್ತು ಮಕ್ಕಳನ್ನು ಮನೆಗೆ ಕಳುಹಿಸಿಕೊಡುವಂತೆ ಕೇಳಲು ಅತ್ತೆ ಮನೆಗೆ ತೆರಳಿದ್ದ 25 ವರ್ಷದ ನವೀನ್ ಮೇಲೆ ಮಾವ ಮತ್ತು ಭಾವ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಆರೋಪ ಕೇಳಿಬಂದಿದೆ. ಗಂಭೀರವಾಗಿ ಸುಟ್ಟ ಗಾಯಗಳಿಂದ 19 ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನವೀನ್ ಕೊನೆಗೂ ಸಾವನ್ನಪ್ಪಿದ್ದಾನೆ.

ಚೂಡೇನಹಳ್ಳಿ ನಿವಾಸಿ ನವೀನ್ ತೆಂಗಿನಕಾಯಿ ವ್ಯಾಪಾರಿಯಾಗಿದ್ದು, ಏಪ್ರಿಲ್ 13ರಂದು ಪತ್ನಿ ಸುಚಿತ್ರಾ ಹಾಗೂ ಮಕ್ಕಳೊಂದಿಗೆ ಅತ್ತೆ ಮನೆಗೆ ತೆರಳಿದ್ದನು. ನಂತರ ಮನೆಗೆ ಮರಳುವಂತೆ ಕೇಳಿದಾಗ ಪತ್ನಿ ನಿರಾಕರಿಸಿದ್ದರಿಂದ ವಾಗ್ವಾದ ಉಂಟಾಗಿ ಜಗಳ ವಿಕೋಪಕ್ಕೆ ತಿರುಗಿದೆ ಎಂದು ತಿಳಿದುಬಂದಿದೆ. ಈ ವೇಳೆ ಮಾವ ಸಂಪಂಗಿ ಪೆಟ್ರೋಲ್ ಸುರಿದು, ಭಾವ ಮುನೇಷ್ ಬೆಂಕಿ ಹಚ್ಚಿದರೆಂಬ ಆರೋಪವಿದೆ. ದಾರಿಹೋದುವರು ತಕ್ಷಣ ನೀರು ಸುರಿದು ಬೆಂಕಿ ನಂದಿಸಿ ನವೀನ್‌ನನ್ನು ರಕ್ಷಿಸಿದ್ದರು.

ಚಿಕಿತ್ಸೆ ವೇಳೆ ಮ್ಯಾಜಿಸ್ಟ್ರೇಟ್ ಎದುರು ನೀಡಿದ ಹೇಳಿಕೆಯಲ್ಲಿ ನವೀನ್ ತನ್ನ ಪತ್ನಿ, ಮಾವ, ಅತ್ತೆ ಹಾಗೂ ಭಾವ ಸೇರಿ ಹಲ್ಲೆ ನಡೆಸಿದ್ದಾರೆ ಎಂದು ಹೇಳಿದ್ದಾನೆ. ಆರಂಭದಲ್ಲಿ ಪ್ರಕರಣವನ್ನು ಕೊಲೆ ಯತ್ನವೆಂದು ದಾಖಲಿಸಿದ್ದ ಪೊಲೀಸರು, ಬಳಿಕ ನವೀನ್ ಸಾವಿನ ಹಿನ್ನೆಲೆಯಲ್ಲಿ ಕೊಲೆ ಪ್ರಕರಣವಾಗಿ ಬದಲಾಯಿಸಿದ್ದಾರೆ. ಮಾವ ಮತ್ತು ಭಾವರನ್ನು ಬಂಧಿಸಲಾಗಿದ್ದು, ಇತರರ ಪಾತ್ರದ ಕುರಿತು ತನಿಖೆ ಮುಂದುವರಿದಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *