ಸೆಂಚುರಿ ಸ್ಟಾರ್ ಇಂಟ್ರೊಡಕ್ಷನ್ ಟೀಸರ್ ಬೊಂಬಾಟ್​ : I am coming ಅಂತಿದ್ದಾರೆ ಶಿವಣ್ಣ

ಕರುನಾಡ ಚಕ್ರವರ್ತಿ ಶಿವರಾಜ್​​ಕುಮಾರ್ ಕನ್ನಡ ಚಿತ್ರರಂಗದಲ್ಲಿ ಬ್ಯಾಕ್ ಟು ಬ್ಯಾಕ್ ಚಿತ್ರಗಳನ್ನು ಕೊಡುತ್ತಿರುವ ನಟ. ನಿನ್ನೆಯಷ್ಟೇ ಕೇರಳದಲ್ಲಿ ಸರಳವಾಗಿ ಕುಟುಂಬಸ್ಥರೊಂದಿಗೆ ಬರ್ತ್ ಡೇ ಸೆಲೆಬ್ರೇಟ್​​​ ಮಾಡಿಕೊಂಡಿದ್ದು, ಜನ್ಮದಿನದ ವಿಶೇಷವಾಗಿ ಉಡುಗೊರೆಗಳು ಶಿವಸೈನ್ಯಕ್ಕೆ ಸಿಕ್ಕಿದೆ. ಆ ಸ್ಪೆಷಲ್ ಗಿಫ್ಟ್​​ಗಳ ಪೈಕಿ ತುಂಬಾನೇ ಸ್ಪೆಷಲ್ ಎನಿಸಿಕೊಂಡಿರುವುದು ಶಿವಣ್ಣನ 131ನೇ ಚಿತ್ರದ ಝಲಕ್

ಶಿವಣ್ಣನ ಜನ್ಮದಿನದ ನಿಮಿತ್ತ ಈ 131ನೇ ಚಿತ್ರದ ಮೊದಲ ತುಣುಕನ್ನು ಬಿಡುಗಡೆ ಮಾಡಲಾಗಿದೆ. 3 ನಿಮಿಷ 49 ಸೆಕೆಂಡ್ ಇರುವ ವಿಡಿಯೋ ತುಣುಕಿನಲ್ಲಿ ಪೊಲೀಸ್ ಸ್ಟೇಷನ್​​ನಲ್ಲಿ ರಗಡ್ ಡೈಲಾಗ್ ಮೂಲಕ ಹೀರೋನ ಇಂಟ್ರೊಡ್ಯೂಸ್ ಮಾಡಲಾಗುತ್ತದೆ. ಶಿವಣ್ಣನನ್ನು ಅಚ್ಯುತ್ ಕುಮಾರ್ ವರ್ಣನೆ ಮಾಡುವ ರೀತಿ ಅದ್ಭುತವಾಗಿದೆ. ಆದರೆ ಶಿವಣ್ಣ ಈ ವಿಡಿಯೋದಲ್ಲಿ ಕಾಣಿಸಿಕೊಳ್ಳಲ್ಲ. ಐ ಆಮ್ ಕಮಿಂಗ್ ಎನ್ನುವ ಕರುನಾಡ ಕಿಂಗ್​ನ ಫೋಟೋ ಒಂದು ಬಿಟ್ಟು ಚಿತ್ರತಂಡ ಥ್ರಿಲ್ ಹೆಚ್ಚಿಸಿದೆ. ಅಚ್ಯುತ್ ಕುಮಾರ್, ರವೀಂದ್ರ ವಿಜಯ್ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ

ತಮಿಳಿನಲ್ಲಿ ವಿಕ್ರಂ ಪ್ರಭು ಅಭಿನಯದ ಪಾಯುಮ್ ಒಲಿ ನೀ ಎನಕ್ಕು ಚಿತ್ರವನ್ನು ನಿರ್ದೇಶಿಸಿದ್ದ ಕಾರ್ತಿಕ್ ಅದ್ವೈತ್, ಈ ಚಿತ್ರದ ಮೂಲಕ ಸ್ಯಾಂಡಲ್​ವುಡ್​​ ಅಂಗಳಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಅಂದ ಹಾಗೇ ಇವರಿಗೆ ಇದು ನಿರ್ದೇಶಕನಾಗಿ ಎರಡನೇ ಸಿನಿಮಾ. ಇದೊಂದು ಆ್ಯಕ್ಷನ್ ಥ್ರಿಲ್ಲರ್ ಸಿನಿಮಾವಾಗಿದ್ದು, ಶಿವಣ್ಣ ಡಿಫ್ರೆಂಟ್ ಲುಕ್​​​ನಲ್ಲಿ, ವಿಭಿನ್ನ ಪಾತ್ರದಲ್ಲಿ ಕಾಣಸಿಕೊಳ್ಳಲಿದ್ದಾರೆ. ಆಗಸ್ಟ್ ತಿಂಗಳಲ್ಲಿ ಮುಹೂರ್ತ ನಡೆಯಲಿದೆ.

Leave a Reply

Your email address will not be published. Required fields are marked *