ಶೃಂಗೇರಿ ಅಂಚೆ ಮತ ಮರುಎಣಿಕೆ ಗೊಂದಲ.!

ಶೃಂಗೇರಿ ಅಂಚೆ ಮತ ಮರುಎಣಿಕೆ ಗೊಂದಲ.!

ನಾಪತ್ತೆಯಾದ 9 ಮತಪತ್ರಗಳು ಪತ್ತೆ – ಅಧಿಕಾರಿಗಳ ಹೈರಾಣ.

ಚಿಕ್ಕಮಗಳೂರು : ನಗರದ IDSG ಕಾಲೇಜಿನಲ್ಲಿ ಇಂದು ಶೃಂಗೇರಿ ಕ್ಷೇತ್ರದ  ಅಂಚೆ ಮತಗಳ ಮರು ಮತ‌ ಎಣಿಕೆ ನಡೆದಿದೆ. ಕಾಂಗ್ರೆಸ್​ ಮತ್ತು ಬಿಜೆಪಿ ನಡುವೆ ಗೆಲುವಿನ ಫೈಟ್ ಶುರುವಾಗಿದ್ದು, ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಆದರೆ ಮತಗಳ ಮರು ಎಣಿಕೆ ಪ್ರಕ್ರಿಯೆ ವೇಳೆ ಗೊಂದಲ ಉಂಟಾಗಿತ್ತು. ಏಕೆಂದರೆ 279 ತಿರಸ್ಕೃತ ಮತಗಳಲ್ಲಿ 270 ಮತ ಪತ್ರಗಳಷ್ಟೇ ಪತ್ತೆಯಾಗಿದ್ದವು. ಬಾಕಿ 9 ತಿರಸ್ಕೃತ ಮತ ಪತ್ರಗಳು ನಾಪತ್ತೆಯಾಗಿದ್ದು, ಅಧಿಕಾರಿಗಳ ಸತತ ಹುಡುಕಾಟದ ಬಳಿಕ ಕೊನೆಗೂ 9 ಮತಪತ್ರಗಳು ಪತ್ತೆಯಾಗಿವೆ.

ನ್ಯಾಯಾಲಯದ ಆದೇಶದ ಮೇರೆಗೆ ಒಟ್ಟು 1822 ಅಂಚೆ ಮತಗಳ ಮರು ಎಣಿಕೆಗೆ ಅಧಿಕಾರಿಗಳು ಮುಂದಾಗಿದ್ದರೂ, ಇದೀಗ ಮತಪತ್ರಗಳ ಪತ್ತೆ ಕಾರ್ಯವೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ನ್ಯಾಯಾಲಯದ ನಿರ್ದೇಶನದಂತೆ, 2023ರ ಚುನಾವಣೆಯಲ್ಲಿ ಚಲಾವಣೆಯಾಗಿದ್ದ 1822 ಅಂಚೆ ಮತಗಳನ್ನು ಮರು ಎಣಿಕೆ ಮಾಡಬೇಕಿತ್ತು. ಈ ಪೈಕಿ 279 ಮತಗಳನ್ನು ಅಂದು ತಿರಸ್ಕೃತ ಮತಗಳೆಂದು ಪರಿಗಣಿಸಲಾಗಿತ್ತು. ಆದರೆ, ಈಗ ಮರು ಎಣಿಕೆಯ ಸಂದರ್ಭದಲ್ಲಿ 20 ಟ್ರಂಕ್‌ಗಳಲ್ಲಿ ಭದ್ರಪಡಿಸಲಾಗಿದ್ದ ಮತಪತ್ರಗಳನ್ನು ಪರಿಶೀಲಿಸಿದಾಗ, 279 ತಿರಸ್ಕೃತ ಮತಗಳ ಪೈಕಿ ಕೇವಲ 270 ಮತಪತ್ರಗಳು ಮಾತ್ರ ಲಭ್ಯವಾಗಿದ್ದವು. ಉಳಿದ 9 ಮತಪತ್ರಗಳು ನಾಪತ್ತೆಯಾಗಿದ್ದವು. ಸತತ ಹುಡುಕಾಟದ ಬಳಿಕ ಇದೀಗ ಮತಪತ್ರಗಳು ಪತ್ತೆಯಾಗಿವೆ.

ಬೆಳಗ್ಗೆಯಿಂದಲೇ ಅಧಿಕಾರಿಗಳು ಈ 9 ನಾಪತ್ತೆಯಾದ ಮತಪತ್ರಗಳಿಗಾಗಿ ತೀವ್ರ ಶೋಧ ನಡೆಸಿದ್ದರು. ಮತಪತ್ರಗಳ ಪತ್ತೆಗಾಗಿ ಅಧಿಕಾರಿಗಳು ಹುಡುಕಾಟ ನಡೆಸಿದ್ದರು, ಇದರಿಂದಾಗಿ ಮರು ಎಣಿಕೆ ಕಾರ್ಯ ನಿಗದಿತ ಸಮಯಕ್ಕಿಂತಲೂ ತೀವ್ರ ವಿಳಂಬವಾಗಿತ್ತು, ಆದರೆ ಇದೀಗ ಪತ್ತೆಯಾಗಿದ್ದು, ಮರು ಮತ ಎಣಿಕೆ ಕಾರ್ಯ ನಡೆಯುತ್ತಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *