MEG ತರಬೇತಿ ಬೆಟಾಲಿಯನ್‌ಗೆ ಮೊದಲ ಮಹಿಳಾ ಕಮಾಂಡರ್.!

MEG ತರಬೇತಿ ಬೆಟಾಲಿಯನ್‌ಗೆ ಮೊದಲ ಮಹಿಳಾ ಕಮಾಂಡರ್.!

ಬೆಂಗಳೂರು ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್‌ನಲ್ಲಿ ಅಗ್ನಿವೀರ್ ತರಬೇತಿಗೆ ಮುನ್ನಡೆ

ಬೆಂಗಳೂರು: Bengaluru ನ ಪ್ರತಿಷ್ಠಿತ ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್ (MEG) ತರಬೇತಿ ಕೇಂದ್ರದ ತರಬೇತಿ ಬೆಟಾಲಿಯನ್ ಅನ್ನು ಮೊದಲ ಬಾರಿಗೆ ಮಹಿಳಾ ಅಧಿಕಾರಿ ಕರ್ನಲ್ ನೊರೀನ್ ಶಾನೆಟ್ ಜಾನ್ ಅವರು ಮುನ್ನಡೆಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.

ಭಾರತೀಯ ಸೇನೆಯ ಪ್ರಮುಖ ಇಂಜಿನಿಯರಿಂಗ್ ಘಟಕವಾದ ‘ಮದ್ರಾಸ್ ಸಪ್ಪರ್ಸ್’ ತರಬೇತಿ ಬೆಟಾಲಿಯನ್ ಕಮಾಂಡ್ ಮಾಡುವ ಮೊದಲ ಮಹಿಳಾ ಅಧಿಕಾರಿ ಎಂಬ ಗೌರವಕ್ಕೆ ಅವರು ಪಾತ್ರರಾಗಿದ್ದಾರೆ.

ಕೇರಳದ ಕ್ಯಾಲಿಕಟ್‌ನ ಪ್ರಾವಿಡೆನ್ಸ್ ಮಹಿಳಾ ಕಾಲೇಜಿನಲ್ಲಿ ಓದುತ್ತಿದ್ದ ವೇಳೆ ಎನ್ಸಿಸಿ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ನೊರೀನ್, ಅತ್ಯುತ್ತಮ ಕೆಡೆಟ್ ಹಾಗೂ ಪರೇಡ್ ಕಮಾಂಡರ್ ಗೌರವಗಳನ್ನು ಪಡೆದಿದ್ದರು.

1998ರಲ್ಲಿ ಕಾರ್ಪ್ಸ್ ಆಫ್ ಇಂಜಿನಿಯರ್ಸ್‌ಗೆ ಸೇರಿದ್ದ ಅವರು 26 ವರ್ಷಗಳ ಸೇವೆಯಲ್ಲಿ ಹಲವು ಪ್ರಮುಖ ಹುದ್ದೆಗಳನ್ನು ನಿರ್ವಹಿಸಿದ್ದಾರೆ. 2023ರಲ್ಲಿ ಕರ್ನಲ್ ಹುದ್ದೆಗೆ ಪದೋನ್ನತಿ ಪಡೆದರು.ಈಗ ಅವರು ಅಗ್ನಿಪಥ್ ಯೋಜನೆಯಡಿ ಆಯ್ಕೆಯಾದ ಅಗ್ನಿವೀರ್‌ಗಳಿಗೆ ತರಬೇತಿ ನೀಡುವ ಪ್ರಮುಖ ಜವಾಬ್ದಾರಿಯನ್ನು ಹೊತ್ತಿದ್ದಾರೆ.ಎನ್ಸಿಸಿ ಕೆಡೆಟಿನಿಂದ ಆರಂಭವಾದ ಅವರ ಪಯಣವು, ಸಾಮರ್ಥ್ಯಕ್ಕೆ ಲಿಂಗದ ಅಡ್ಡಿಯಿಲ್ಲ ಎಂಬುದನ್ನು ಸಾಬೀತುಪಡಿಸಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *