ಬಿಸಿಲ ಬೇಗೆ ಹೆಚ್ಚಳಕ್ಕೆ ಆರೋಗ್ಯ ಇಲಾಖೆ ಎಚ್ಚರಿಕೆ.!

ಬಿಸಿಲ ಬೇಗೆ ಹೆಚ್ಚಳಕ್ಕೆ ಆರೋಗ್ಯ ಇಲಾಖೆ ಎಚ್ಚರಿಕೆ.!

ಸಾರ್ವಜನಿಕರಿಗೆ ತಕ್ಷಣ ಪಾಲಿಸಬೇಕಾದ ಮಾರ್ಗಸೂಚಿ ಪ್ರಕಟ.

ಬೆಂಗಳೂರು: ಸಿಲಿಕಾನ್‌ ಸಿಟಿ ಬೆಂಗಳೂರು  ಸೇರಿದಂತೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ತಾಪಮಾನವು ದಾಖಲೆ ಮಟ್ಟಕ್ಕೆ ಏರಿಕೆಯಾಗುತ್ತಿದ್ದು, ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಅಧಿಕೃತ ಮಾರ್ಗಸೂಚಿಗಳನ್ನು ಹೊರಡಿಸಿದೆ.

ಇನ್ನು ಕೂಲ್ ಸಿಟಿ ಎಂದು ಕರೆಸಿಕೊಳ್ಳುವ ರಾಜಧಾನಿ ಬೆಂಗಳೂರು ಸದ್ಯ ಹಾಟ್ ಸಿಟಿಯಾಗಿ  ಬದಲಾಗಿದೆ.

ಆರೋಗ್ಯ ಇಲಾಖೆಯ ಪ್ರಮುಖ ಸೂಚನೆಗಳು

ಹೈಡ್ರೇಟೆಡ್ ಆಗಿರಿ: ಬಾಯಾರಿಕೆ ಇಲ್ಲದಿದ್ದರೂ ಆಗಾಗ ನೀರು ಕುಡಿಯಿರಿ. ಎಳನೀರು, ಮಜ್ಜಿಗೆ, ನಿಂಬೆ ಹಣ್ಣಿನ ರಸ ಅಥವಾ ಓಆರ್‌ಎಸ್ (ORS) ದ್ರಾವಣವನ್ನು ಸೇವಿಸುವ ಮೂಲಕ ದೇಹದ ದ್ರವಾಂಶವನ್ನು ಕಾಪಾಡಿಕೊಳ್ಳಿ.

ಹೊರಗೆ ಹೋಗುವ ಸಮಯ: ಮಧ್ಯಾಹ್ನ 11:00 ರಿಂದ ಸಂಜೆ 4:00 ರವರೆಗೆ ಬಿಸಿಲು ಪ್ರಖರವಾಗಿರುವುದರಿಂದ, ಅನಿವಾರ್ಯವಲ್ಲದಿದ್ದರೆ ಈ ಸಮಯದಲ್ಲಿ ಹೊರಹೋಗುವುದನ್ನು ತಪ್ಪಿಸಿ.

ಉಡುಗೆ ತೊಡುಗೆ: ಹೊರಗೆ ಹೋಗುವಾಗ ತಿಳಿ ಬಣ್ಣದ, ಸಡಿಲವಾದ ಹತ್ತಿ ಬಟ್ಟೆಗಳನ್ನು ಧರಿಸಿ. ತಲೆಯನ್ನು ರಕ್ಷಿಸಿಕೊಳ್ಳಲು ಛತ್ರಿ, ಟೋಪಿ ಅಥವಾ ಸ್ಕಾರ್ಫ್ ಬಳಸಿ.

ಆಹಾರ ಕ್ರಮ: ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಿ. ಕೆಫೀನ್ ಹೊಂದಿರುವ ಪಾನೀಯಗಳು (ಚಹಾ, ಕಾಫಿ), ಆಲ್ಕೋಹಾಲ್ ಮತ್ತು ಅತಿಯಾದ ಸಕ್ಕರೆ ಅಂಶವಿರುವ ಪಾನೀಯಗಳಿಂದ ದೂರವಿರಿ, ಏಕೆಂದರೆ ಇವು ನಿರ್ಜಲೀಕರಣಕ್ಕೆ ಕಾರಣವಾಗುತ್ತವೆ.

ವಿಶೇಷ ಕಾಳಜಿ: ಮಕ್ಕಳು, ವೃದ್ಧರು, ಗರ್ಭಿಣಿಯರು ಮತ್ತು ದೀರ್ಘಕಾಲದ ಕಾಯಿಲೆ ಇರುವವರು ಬಿಸಿಲಿನಿಂದ ಹೆಚ್ಚಿನ ಅಪಾಯ ಎದುರಿಸುವುದರಿಂದ ಅವರಿಗೆ ವಿಶೇಷ ರಕ್ಷಣೆ ನೀಡಿ.

ಗರ್ಭಿಣಿಯರು, ಮಕ್ಕಳ ಬಗ್ಗೆ ಎಚ್ಚರ

ಬೆಂಗಳೂರಿನಲ್ಲಿ ಇಂದು 36ರ ಗರಿಷ್ಠ ತಾಪಮಾನ ದಾಖಲಾಗಿದೆ. ಕ್ಷಣಕ್ಷಣಕ್ಕೂ ಏರಿಕೆ ಆಗುತ್ತಿರುವ ರಾಜಧಾನಿಯ ವಾತಾವರಣ ಬೆಂಗಳೂರಿಗರನ್ನ ಹೈರಾಣಾಗಿಸಿದೆ. ಮುಂಜಾನೆ ಸೂರ್ಯನ ಉದಯವಾಗುತ್ತಿದ್ದಂತೆ ಬಿರುಬಿಸಿಲು, ರಾತ್ರಿ ಆದರೆ ಬಿಸಿ ಗಾಳಿ, ಈ ವರ್ಷದ ತಾಪಮಾನ ಹಾಗೂ ಸೆಕೆಯಿಂದ ಜನರು ಕಂಗಾಲಾಗಿದ್ದರೆ ಗರ್ಭಿಣಿಯರು, ವೃದ್ಧರು, ಮಕ್ಕಳ ಬಗ್ಗೆ ವೈದ್ಯರು ತುಸು ಎಚ್ಚರ ಎನ್ನುತ್ತಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *