ಕೇಂದ್ರ ರೈಲ್ವೇ ಇಲಾಖೆ ಅಡಿಯಲ್ಲಿ ವಿವಿಧ ಘಟಕಗಳಲ್ಲಿ ಖಾಲಿ ಇರುವ 2,424 ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲು ಮುಂಬೈ ರೈಲ್ವೇ ರಿಕ್ರೂಟ್ಮೆಂಟ್ ಸೆಲ್ ಅಧಿಸೂಚನೆ ಬಿಡುಗಡೆ ಮಾಡಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಗಡುವಿನೊಳಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು.
ಅಪ್ರೆಂಟಿಸ್ ಹುದ್ದೆಗಳ ವಿವರ:
ಮುಂಬೈ ಕ್ಲಸ್ಟರ್
- ಕ್ಯಾರೇಜ್ ಮತ್ತು ವ್ಯಾಗನ್ (ಕೋಚಿಂಗ್), ವಾಡಿ ಬಂದರ್ – 258
- ಕಲ್ಯಾಣ್ ಡೀಸೆಲ್ ಶೆಡ್ – 50
- ಕುರ್ಲಾ ಡೀಸೆಲ್ ಶೆಡ್ – 60
- ಸೀನಿಯರ್ DEE (TRS) ಕಲ್ಯಾಣ್ – 124
- ಸೀನಿಯರ್ DEE (TRS) ಕುರ್ಲಾ – 192
- ಪರೇಲ್ ಕಾರ್ಯಾಗಾರ – 303
- ಮಾತುಂಗಾ ಕಾರ್ಯಾಗಾರ – 547
- ಎಸ್ & ಟಿ ಕಾರ್ಯಾಗಾರ, ಬೈಕುಲ್ಲಾ – 60
ಭೂಸಾವಲ್ ಕ್ಲಸ್ಟರ್
- ಕ್ಯಾರೇಜ್ ಮತ್ತು ವ್ಯಾಗನ್ ಡಿಪೋ – 122
- ಎಲೆಕ್ಟ್ರಿಕ್ ಲೋಕೋ ಶೆಡ್, ಭುಸಾವಲ್ – 80
- ಎಲೆಕ್ಟ್ರಿಕ್ ಲೋಕೋಮೋಟಿವ್ ಕಾರ್ಯಾಗಾರ – 118
- ಮನ್ಮಾಡ್ ಕಾರ್ಯಾಗಾರ – 51
- TMW ನಾಸಿಕ್ ರಸ್ತೆ – 47
ನಾಗ್ಪುರ ಕ್ಲಸ್ಟರ್
- ಎಲೆಕ್ಟ್ರಿಕ್ ಲೋಕೋ ಶೆಡ್, ಅಜ್ನಿ – 48
- ಕ್ಯಾರೇಜ್ ಮತ್ತು ವ್ಯಾಗನ್ ಡಿಪೋ – 63
ಸೋಲಾಪುರ ಕ್ಲಸ್ಟರ್
- ಕ್ಯಾರೇಜ್ ಮತ್ತು ವ್ಯಾಗನ್ ಡಿಪೋ – 55
- ಕುರ್ದುವಾಡಿ ಕಾರ್ಯಾಗಾರ – 21
ಪುಣೆ ಕ್ಲಸ್ಟರ್
- ಕ್ಯಾರೇಜ್ ಮತ್ತು ವ್ಯಾಗನ್ ಡಿಪೋ – 31
- ಡೀಸೆಲ್ ಲೋಕೋ ಶೆಡ್ – 121
- ಎಲೆಕ್ಟ್ರಿಕ್ ಲೋಕೋ ಶೆಡ್, ಡಾಂಡ್ – 40
ಹುದ್ದೆಗಳು: ಫಿಟ್ಟರ್, ವೆಲ್ಡರ್, ಎಲೆಕ್ಟ್ರಿಷಿಯನ್, ಕಾರ್ಪೆಂಟರ್, ಮೆಕ್ಯಾನಿಕ್, ಪೇಂಟರ್, ಮಷಿನಿಸ್ಟ್, ಶೀಟ್ ಮೆಟಲ್ ವರ್ಕರ್, ಮೆಕ್ಯಾನಿಕ್ ಮೆಷಿನ್ ಟೂಲ್ಸ್ ನಿರ್ವಹಣೆ, ಕಂಪ್ಯೂಟರ್ ಆಪರೇಟರ್ ಮತ್ತು ಪ್ರೋಗ್ರಾಂ ಅಸಿಸ್ಟೆಂಟ್.
ವಿದ್ಯಾರ್ಹತೆ: ಅಭ್ಯರ್ಥಿಗಳು ಕನಿಷ್ಠ 50% ಅಂಕಗಳೊಂದಿಗೆ 10ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಸಂಬಂಧಪಟ್ಟ ವಿಷಯದಲ್ಲಿ ಐಟಿಐ ಪಾಸಾಗಿರಬೇಕು.
ವಯಸ್ಸಿನ ಮಿತಿ: ಅಭ್ಯರ್ಥಿಗಳ ವಯಸ್ಸು 15ನೇ ಜುಲೈ 2024ರಂತೆ 15 ವರ್ಷದಿಂದ 24 ವರ್ಷಗಳ ನಡುವೆ ಇರಬೇಕು.
ಅರ್ಜಿ ಶುಲ್ಕ: ಅರ್ಜಿ ಶುಲ್ಕ ರೂ.100.
ಆಯ್ಕೆ ಪ್ರಕ್ರಿಯೆ: 10ನೇ ತರಗತಿ, ಐಟಿಐ ಅಂಕಗಳು, ಮೀಸಲಾತಿ ದಾಖಲೆಗಳ ಪರಿಶೀಲನೆ, ವೈದ್ಯಕೀಯ ಪರೀಕ್ಷೆಯ ಆಧಾರದ ಮೇಲೆ ಅರ್ಹ ಅಭ್ಯರ್ಥಿಗಳನ್ನು ಅಪ್ರೆಂಟಿಸ್ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ.
ತರಬೇತಿ ಅವಧಿ: ಆಯ್ಕೆಯಾದ ಅಭ್ಯರ್ಥಿಗೆ ಒಂದು ವರ್ಷ ತರಬೇತಿ ನೀಡಲಾಗುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ?
- ಅಭ್ಯರ್ಥಿಗಳು RRCಯ ಅಧಿಕೃತ ವೆಬ್ಸೈಟ್ ತೆರೆಯಬೇಕು.
- ಅಲ್ಲಿ ಕಾಣಿಸುವಂತಹ RRC CR ಅಪ್ರೆಂಟಿಸ್ ಅರ್ಜಿ ಆನ್ಲೈನ್ ಲಿಂಕ್ ಕ್ಲಿಕ್ ಮಾಡಿ.
- RRC ಪೋರ್ಟಲ್ನಲ್ಲಿ ನಿಮ್ಮ ವೈಯಕ್ತಿಕ ವಿವರ ನಮೂದಿಸಿ ಮತ್ತು ನೋಂದಾಯಿಸಿ.
- ನೋಂದಣಿ ಐಡಿ ಮತ್ತು ಪಾಸ್ವರ್ಡ್ ಜನರೇಟ್ ಆಗುತ್ತದೆ.
- ಇವುಗಳೊಂದಿಗೆ ನೀವು RRC ಪೋರ್ಟಲ್ಗೆ ಲಾಗಿನ್ ಆಗಬೇಕು.
- ಅರ್ಜಿ ನಮೂನೆಯಲ್ಲಿ ನಿಮ್ಮ ವೈಯಕ್ತಿಕ ಮತ್ತು ಶೈಕ್ಷಣಿಕ ವಿವರ ನಮೂದಿಸಬೇಕು.
- ಅರ್ಜಿ ಶುಲ್ಕವನ್ನು ಆನ್ಲೈನ್ನಲ್ಲಿ ಪಾವತಿಸಬೇಕು.
- ಎಲ್ಲ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಅರ್ಜಿ ಸಲ್ಲಿಸಿ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15 ಆಗಸ್ಟ್ 2024.