“ಭಾರತದ ರಕ್ಷಣಾ ಉತ್ಪಾದನೆ 1.54 ಲಕ್ಷ ಕೋಟಿ ರೂ ದಾಖಲೆಯತ್ತ – ರಫ್ತು ಹೊಸ ಮೈಲುಗಲ್ಲು”

 “ಭಾರತದ ರಕ್ಷಣಾ ಉತ್ಪಾದನೆ 1.54 ಲಕ್ಷ ಕೋಟಿ ರೂ ದಾಖಲೆಯತ್ತ – ರಫ್ತು ಹೊಸ ಮೈಲುಗಲ್ಲು”

ನವದೆಹಲಿ: ಕಳೆದ ಹಣಕಾಸು ವರ್ಷದಲ್ಲಿ ಭಾರತದ ರಕ್ಷಣಾ ಕ್ಷೇತ್ರ ಸಾಧಿಸಿದ ಒಟ್ಟೂ ಉತ್ಪಾದನೆ ಒಂದೂವರೆ ಲಕ್ಷ ಕೋಟಿ ರೂ ದಾಟಿದೆ. ಸರ್ಕಾರವೇ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ 2024-25ರಲ್ಲಿ ಭಾರತದ ಡಿಫೆನ್ಸ್ ಪ್ರೊಡಕ್ಷನ್ 1.54 ಲಕ್ಷ ಕೋಟಿ ರೂ ದಾಖಲಾಗಿದೆ. ಈ ಒಂದೂವರೆ ಲಕ್ಷ ಕೋಟಿ ರೂ ಗಡಿ ಮುಟ್ಟಿದ್ದು ಇದೇ ಮೊದಲು ಎನ್ನಲಾಗಿದೆ. ರಕ್ಷಣಾ ಕ್ಷೇತ್ರದಿಂದ ರಫ್ತು ಕೂಡ ಹೊಸ ದಾಖಲೆ ಸ್ಥಾಪಿಸಿದೆ. ದತ್ತಾಂಶದ ಪ್ರಕಾರ 2024-25ರಲ್ಲಿ 23,622 ಕೋಟಿ ರೂನಷ್ಟು ರಫ್ತಾಗಿದೆ.

ಹಿಂದಿನ ವರ್ಷದಲ್ಲಿ (2023-24) ರಕ್ಷಣಾ ವಲಯದ ಒಟ್ಟು ಉತ್ಪಾದನೆ 1,27,434 ಕೋಟಿ ರೂ ಇತ್ತು. 2014-15ರ ವರ್ಷದಕ್ಕೆ ಹೋಲಿಸಿದರೆ 2023-24ರಲ್ಲಿ ಡಿಫೆನ್ಸ್ ಪ್ರೊಡಕ್ಷನ್ ಶೇ. 174ರಷ್ಟು ಹೆಚ್ಚಾಗಿತ್ತು. ಒಟ್ಟಾರೆ ಉತ್ಪಾದನೆಯಲ್ಲಿ ಸರ್ಕಾರಿ ಉದ್ದಿಮೆಗಳ ಪಾಲು ಶೇ. 77ರಷ್ಟಿದೆ. ಖಾಸಗಿ ಉದ್ದಿಮೆಗಳ ಕೊಡುಗೆ ಶೇ 23ರಷ್ಟಿದೆ.

ಉತ್ಪಾದನೆಯಲ್ಲಿ ಸರ್ಕಾರಿ ಉದ್ದಿಮೆಗಳು ಮೇಲುಗೈ ಸಾಧಿಸಿದರೆ, ರಫ್ತಿನಲ್ಲಿ ಖಾಸಗಿ ವಲಯದ ಕೈ ಮೇಲಾಗಿದೆ. ರಕ್ಷಣಾ ಕ್ಷೇತ್ರದಿಂದ ರಫ್ತಾದ 23,622 ಕೋಟಿ ರೂ ಪೈಕಿ ಪ್ರೈವೇಟ್ ಸೆಕ್ಟರ್ ಕಂಪನಿಗಳು 15,233 ಕೋಟಿ ರೂ ನಷ್ಟು ರಫ್ತು ಮಾಡಿದೆ. ಈ ಕ್ಷೇತ್ರದ ಸರ್ಕಾರಿ ಉದ್ದಿಮೆಗಳು ಮಾಡಿದ ರಫ್ತು 8,389 ಕೋಟಿ ರೂ.

2024-25ರಲ್ಲಿ 193 ಡಿಫೆನ್ಸ್ ಒಪ್ಪಂದಗಳು

2024-25ರಲ್ಲಿ ಅತಿಹೆಚ್ಚು ಡಿಫೆನ್ಸ್ ಕಾಂಟ್ರಾಕ್ಟ್​ಗಳಾಗಿವೆ. 2,09,050 ಕೋಟಿ ರೂ ಮೌಲ್ಯದ 193 ಒಪ್ಪಂದಗಳು ಡಿಫೆನ್ಸ್ ಕ್ಷೇತ್ರದಲ್ಲಿ ಆಗಿವೆ. ಈ ಪೈಕಿ ಭಾರತದ ಉದ್ದಿಮೆಗಳೇ 177 ಗುತ್ತಿಗೆಗಳನ್ನು ಪಡೆದಿವೆ. ಈ ಡೀಲ್​ಗಳ ಒಟ್ಟುಮೌಲ್ಯ 1.69 ಲಕ್ಷ ಕೋಟಿ ರೂ ಎನ್ನಲಾಗಿದೆ.

ಸರ್ಕಾರಕ್ಕೆ 3 ಲಕ್ಷ ಕೋಟಿ ರೂ ಉತ್ಪಾದನೆಯ ಗುರಿ

2024-25ರಲ್ಲಿ ಡಿಫೆನ್ಸ್ ಕ್ಷೇತ್ರದ ಉತ್ಪಾದನೆ ಒಂದೂವರೆ ಲಕ್ಷ ಕೋಟಿ ರೂ ಇದೆ. ಮುಂದಿನ ನಾಲ್ಕೈದು ವರ್ಷದಲ್ಲಿ ಇದನ್ನು ಎರಡು ಪಟ್ಟು ಹೆಚ್ಚಿಸುವ ಗುರಿ ಸರ್ಕಾರದ್ದಾಗಿದೆ. 2029ರೊಳಗೆ ಭಾರತದ ಡಿಫೆನ್ಸ್ ಉತ್ಪಾದನೆ 3 ಲಕ್ಷ ಕೋಟಿ ರೂ ಆಗಬೇಕೆನ್ನುವ ನಿರೀಕ್ಷೆ ಇಡಲಾಗಿದೆ. ರಫ್ತು ಕೂಡ 50,000 ಕೋಟಿ ರೂ ದಾಟಿಸುವ ಗುರಿ ಇದೆ.

ಎಚ್​ಎಎಲ್, ಬಿಇಎಲ್, ಭಾರತ್ ಡೈನಾಮಿಕ್ಸ್, ಭಾರತ್ ಫೋರ್ಜ್, ಪಾರಸ್ ಡಿಫೆನ್ಸ್ ಮೊದಲಾದ ಸಂಸ್ಥೆಗಳು ಈ ಕ್ಷೇತ್ರದಲ್ಲಿ ಮಿಂಚುತ್ತಿವೆ. ಷೇರು ಮಾರುಕಟ್ಟೆಯೂ ಇವು ಸ್ಟಾರ್​ಗಳಾಗಿವೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *