ಮೇ 3ರಿಂದ 10ರವರೆಗೆ ಪಂದ್ಯಾವಳಿ; 70ಕ್ಕೂ ಹೆಚ್ಚು ವಿದೇಶಿ ಆಟಗಾರ್ತಿಯರ ಭಾಗವಹಿಸಿದ್ದೇವು.
ತುಮಕೂರು: ಕಲ್ಪತರು ನಾಡಿನಲ್ಲಿ ಕ್ರೀಡಾ ಸಂಭ್ರಮ ಮೇಳೈಸಿದ್ದು, “ತುಮಕೂರು ಓಪನ್ ಅಂತರಾಷ್ಟ್ರೀಯ ಮಹಿಳಾ ಟೆನ್ನಿಸ್ ಟೂರ್ನಿ” ಭರ್ಜರಿಯಾಗಿ ಆರಂಭವಾಗಿದೆ. ಮೇ 3ರಿಂದ ಮೇ 10ರವರೆಗೆ ನಡೆಯಲಿರುವ ಈ ಟೂರ್ನಿಯಲ್ಲಿ ವಿವಿಧ ದೇಶಗಳಿಂದ 70ಕ್ಕೂ ಹೆಚ್ಚು ಖ್ಯಾತ ಮಹಿಳಾ ಟೆನ್ನಿಸ್ ಆಟಗಾರ್ತಿಯರು ಭಾಗವಹಿಸಿದ್ದಾರೆ.
ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಟೂರ್ನಿಗೆ ಚಾಲನೆ ನೀಡಿ, ತುಮಕೂರು ನಗರ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಿಗೆ ಆತಿಥ್ಯ ವಹಿಸುತ್ತಿರುವುದು ಹೆಮ್ಮೆಯ ವಿಚಾರ ಎಂದು ಹೇಳಿದರು.
ಟೂರ್ನಿಯ ಆರಂಭದಿಂದಲೇ ಕ್ರೀಡಾಭಿಮಾನಿಗಳಲ್ಲಿ ಉತ್ಸಾಹ ಹೆಚ್ಚಿದ್ದು, ಪ್ರತಿದಿನ ಪಂದ್ಯಗಳನ್ನು ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುತ್ತಿದ್ದಾರೆ.ಈ ಕ್ರೀಡಾಕೂಟವು ಸ್ಥಳೀಯ ಕ್ರೀಡಾಪಟುಗಳಿಗೆ ಪ್ರೇರಣೆ ನೀಡುವುದರ ಜೊತೆಗೆ, ತುಮಕೂರಿನ ಕ್ರೀಡಾ ಮೂಲಸೌಕರ್ಯವನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವ ಮಹತ್ವದ ಹೆಜ್ಜೆಯಾಗಿದೆ.
For More Updates Join our WhatsApp Group :



