ಚಿಕ್ಕಮಗಳೂರು: ಜಮೀನು ಸರ್ವೆ ವೇಳೆ ಕೈಯಲ್ಲಿ ಬೆಂಕಿ ಹಿಡಿದು ಕಾಂತಾರ ಸಿನಿಮಾದಲ್ಲಿ ಬರುವ ದೈವದ ರೀತಿಯಲ್ಲೇ ವರ್ತಿಸಿ ವ್ಯಕ್ತಿಯೋರ್ವ ಹೈಡ್ರಾಮಾ ನಡೆಸಿರುವ ಪ್ರಸಂಗ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕು ಚಿಕ್ಕನಗುಂಡಿ ಗ್ರಾಮದಲ್ಲಿ ನಡೆದಿದೆ. ಜಮೀನು ಸರ್ವೆ ಮಾಡುವ ಸ್ಥಳಕ್ಕೆ ದೈವ ಮೈಮೇಲೆ ಬಂದಿದೆ ಎಂದು ಹೈಡ್ರಾಮಾ ಮಾಡಿ ಬಂದ ವ್ಯಕ್ತಿ ಸುರೇಶ್, ಓಡಿಬಂದು ನಿಂತಿದ್ದ ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾರೆ.
ಘಟನೆ ಕಂಡು ಜಮೀನು ಸರ್ವೆಗೆ ಬಂದಿದ್ದ ಅಧಿಕಾರಿಗಳು, ಪೊಲೀಸರು ಶಾಕ್ ಆಗಿದ್ದಾರೆ. ಸುರೇಶ್ ಅಣ್ಣ ತಮ್ಮರ ನಡುವೆ ಪಿತ್ರಾರ್ಜಿತ ಆಸ್ತಿಗಾಗಿ ಗಲಾಟೆ ನಡೆದಿದ್ದು,ಸರ್ವೆ ನಡೆಸುವಂತೆ ಕೊಪ್ಪ JMFC ಕೋರ್ಟ್ ಆದೇಶಿಸಿದೆ. ಹೀಗಾಗಿ ಜಮೀನು ಸರ್ವೆ ನಡೆಸಲಾಗುತ್ತಿದ್ದ ವೇಳೆ ಬೆಂಕಿ ಹಿಡಿದು ಬಂದ ಸುರೇಶ್, ತನ್ನ ತಮ್ಮನ ಹೆಂಡತಿ ರಮ್ಯಾ ಮೇಲೆ ಹಲ್ಲೆ ಮಾಡಿದ್ದಾರೆ.
For More Updates Join our WhatsApp Group :
