ಬೆಂಗಳೂರು ಕೇಂದ್ರ ಪಾಲಿಕೆಯಲ್ಲಿ ಅಧಿಕಾರಿಗಳ ಸಭೆ.!

ಬೆಂಗಳೂರು ಕೇಂದ್ರ ಪಾಲಿಕೆಯಲ್ಲಿ ಅಧಿಕಾರಿಗಳ ಸಭೆ.!

ಬೆಂಗಳೂರು ಕೇಂದ್ರ ನಗರ ಪಾಲಿಕೆ.

ಬೆಂಗಳೂರು: ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಮಾನ್ಯ *ಆಯುಕ್ತರಾದ ಶ್ರೀ ರಾಜೇಂದ್ರ ಚೋಳನ್ ರವರು ಇಂದು ಕೇಂದ್ರ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಇದೇ ಏಪ್ರಿಲ್ 16 ರಿಂದ ನಡೆಯುವ ಭಾರತದ ಜನಗಣತಿ-2027 ರ ಕಾರ್ಯ ನಿರ್ವಹಿಸಲು ಉಸ್ತುವಾರಿಗಾಗಿ ನೇಮಿಸಿರುವ ಚಾರ್ಜ್ ಆಫೀಸರ್ ಗಳಿಗೆ, ಸಹಾಯಕ ಚಾರ್ಜ್ ಆಫೀಸರ್ ಗಳಿಗೆ, ಟೆಕ್ನಿಕಲ್ ಅಸಿಸ್ಟಂಟ್ ಗಳಿಗೆ, ಕಂದಾಯ ಅಧಿಕಾರಿಗಳು, ಸಹಾಯಕ ಕಂದಾಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ* ರಾಷ್ಟೀಯ ಮಹತ್ವದ ಜನಗಣತಿ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಲು, ಈ ಕಾರ್ಯವು ಸುಸೂತ್ರವಾಗಿ ನಡೆಯಲು ಸಹಾಯಕವಾಗಲು ಸ್ಥಳೀಯ ನಿವಾಸಿ ಕ್ಷೇಮಾಭಿವೃದ್ಧಿ ಸಂಘ ದವರು, ಹಿರಿಯ ನಾಗರೀಕರ ಕಲ್ಯಾಣ ಸಂಘದವರು ಇತರರೊಂದಿಗೆ ಸಭೆ ನಡೆಸಿ ಜನಗಣತಿ ಕಾರ್ಯಕ್ಕೆ ಸಹಕರಿಸುವಂತೆ ಕೋರಲು ತಿಳಿಸಿದರು.

ಈ ಸಂದರ್ಭದಲ್ಲಿ ಅಭಿವೃದ್ಧಿ ಅಪರ ಆಯುಕ್ತರಾದ ಶ್ರೀ ದಲ್ಜಿತ್ ಕುಮಾರ್, ಕಂದಾಯ ಅಪರ ಆಯುಕ್ತರಾದ ಶ್ರೀ ಕೆ. ರಂಗನಾಥ್, ಕಂದಾಯ ವಿಭಾಗ ಹಾಗೂ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಹಾಜರಿದ್ದರು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *