BJP ವಿರುದ್ಧ ಸಚಿವ ಸಂತೋಷ್ ಲಾಡ್ ವಾಗ್ದಾಳಿ..!

BJP ವಿರುದ್ಧ ಸಚಿವ ಸಂತೋಷ್ ಲಾಡ್ ವಾಗ್ದಾಳಿ..!

ವ್ಯಾಪಂ ಹಗರಣದ ಬಗ್ಗೆಯೂ ಆದಿತ್ಯ ಧಾರ್ ಸಿನಿಮಾ ಮಾಡಲಿ : ಧುರಂಧರ್ ನಿರ್ದೇಶಕನಿಗೆ ಲಾಡ್ ಸಲಹೆ

ಧಾರವಾಡ : ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಸಂತೋಷ್ ಲಾಡ್ ಮತ್ತೆ ಗುಡುಗಿದ್ದಾರೆ. ನೀಟ್ ಪರೀಕ್ಷೆ ಹಗರಣ ಹಾಗೂ ಪರೀಕ್ಷೆ ರದ್ದತಿ ಬಗ್ಗೆ ಆಕ್ರೋಶ ವ್ಯಕ್ತ ಪಡಿಸಿದ ಸಂತೋಷ್ ಲಾಡ್, ನರೇಂದ್ರ ಮೋದಿ ಸರ್ಕಾರ ದೇಶದ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಗುಡುಗಿದರು.

ವ್ಯಾಪಂ ಹಗರಣದ ಬಗ್ಗೆ ಸಿನಿಮಾ ಮಾಡುವಂತೆ ಧುರಂಧರ್ ನಿರ್ದೇಶಕ ಧರ್ ಗೆ ಲಾಡ್ ಸಲಹೆಧುರಂಧರ್ ಸಿನಿಮಾಗಳ ಮೂಲಕ ಖ್ಯಾತಿಗಳಿಸಿರುವ ನಿರ್ದೇಶಕ ಆದಿತ್ಯ ಧರ್ ಅವರಿಗೆ ವ್ಯಾಪಂ ಹಗರಣದ ಬಗ್ಗೆಯೂ ಒಂದು ಸಿನಿಮಾ ಮಾಡಿ ಎಂದು ಸಚಿವ ಸಂತೋಷ್ ಲಾಡ್ ಅವರು ಸಲಹೆ ನೀಡಿದರು. ವ್ಯಾಪಂ ಹಗರಣ ಮುಚ್ಚಲು ಈ ವರೆಗೆ ಬರೊಬ್ಬರಿ 44 ಜನರ ಕಗ್ಗೊಲೆ ಮಾಡಲಾಗಿದೆ.

ಬಿಜೆಪಿಯ ಹಗರಣ ಮುಚ್ಚಿಹಾಕಲು ಇಷ್ಟೆಲ್ಲ ಜನರನ್ನ ಕೊಲೆ ಮಾಡಿ, ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಹಾಳು ಮಾಡಿದ್ದರೂ ಸಹ ಈ ಬಗ್ಗೆ ಬಿಜೆಪಿಯವರು ಮಾತನಾಡುವುದೇ ಇಲ್ಲ. ಈ ಬಗ್ಗೆ ಧುರಂಧರ್ ರೀತಿ ಸಿನಿಮಾ ಮಾಡಿ ದೇಶದ ಜನರಿಗೆ ವ್ಯಾಪಂ ಹಗರಣದ ಬಗ್ಗೆ ಬೆಳಕು ಚೆಲ್ಲುವಂತೆ ಸಂತೋಷ್ ಲಾಡ್ ನಿರ್ದೆಶಕ ಧರ್ ಗೆ ಸಲಹೆ ನೀಡಿದರು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

                                    

Leave a Reply

Your email address will not be published. Required fields are marked *