ಮಂಜುನಾಥ್ ಹೆಚ್ ಆರ್, ಹಿಂಡಿಸಿಗೆರೆ
ವಿಶ್ವದ ಅತ್ಯಂತ ಸುಂದರವಾದ ದೇಶ ಭಾರತ. ಇಲ್ಲಿನ ಸಂಸ್ಕೃತಿ, ಆಚಾರ ವಿಚಾರ ಎಲ್ಲವೂ ಕೂಡ ವಿಭಿನ್ನ. ಭಾರತದ ಬಗ್ಗೆ ಭಾರತೀಯರ ಬಗ್ಗೆ ಎಷ್ಟು ಮಾತನಾಡಿದರು ಕೂಡ ಕಡಿಮೆ. ಇತ್ತೀಚಿನ ದಿನಗಳಲ್ಲಿ ಭಾರತದ ಸ್ನೇಹಜೀವಿ ಜನರ ಬಗ್ಗೆ ವಿದೇಶಿಯರು ಕೂಡ ಮಾತನಾಡುತ್ತಿದ್ದಾರೆ. ಇಂತಹ ಮಾತುಗಳಿಗೆ ಶಬ್ಬಾಶ್ಗಿರಿಗೆ ಕಳಶಪ್ರಾಯ ಹಲವಾರು ವಿಶೇಷತೆಗಳನ್ನು ಹೊಂದಿರುವ ಮಣಿಪುರ.
ದೇಶದ ಈಶಾನ್ಯ ಭಾಗದ ಪ್ರವಾಸಿ ತಾಣಗಳಲ್ಲಿ ಮಣಿಪುರವು ಕೂಡ ಒಂದು. ಇಲ್ಲಿನ ಪ್ರವಾಸಿ ತಾಣಗಳು, ಹಬ್ಬ ಹರಿದಿನಗಳು, ಪ್ರಾಕೃತಿಕ ಸೌಂದರ್ಯ, ವನ್ಯಜೀವಿಗಳ ಚಲನವಲನ ಎಲ್ಲವನ್ನು ನೋಡುತ್ತಿದ್ದರೆ ಭೂಲೋಕದ ಸ್ವರ್ಗ ಎಂದೇ ಭಾಸವಾಗುತ್ತದೆ. ಲಕ್ಷ ಲಕ್ಷ ಕೊಟ್ಟು ದೂರದ ಸ್ವಿಜರ್ಲ್ಯಾಂಡ್ಗೆ ಹೋಗುವ ಪ್ರವಾಸಿಗರು ನಮ್ಮದೇ ದೇಶದ ಮಣಿಪುರಕ್ಕೆ ಬಂದು ಸೌಂದರ್ಯವನ್ನು ಆಸ್ವಾಧಿಸುತ್ತಾರೆ. ಇದನ್ನು ಸ್ವಿಜರ್ಲ್ಯಾಂಡ್ ಆಫ್ ಇಂಡಿಯಾ ಎಂದರೆ ತಪ್ಪಾಗುವುದಿಲ್ಲ. ಉತ್ತರಕ್ಕೆ ನಾಗಲ್ಯಾಂಡ್, ದಕ್ಷಿಣಕ್ಕೆ ಮಿಜೋರಾಂ, ಹಾಗೂ ಪಶ್ಚಿಮಕ್ಕೆ ಅಸ್ಸಾಂ, ಪೂರ್ವಕ್ಕೆ ಬರ್ಮಾದ ಅಂತರಾಷ್ಟಿçÃಯ ಗಡಿ ರೇಖೆ ಹೊಂದಿರುವ ಮಣಿಪುರ ರಾಜ್ಯ ಹಲವಾರು ವಿಭಿನ್ನ ಮತ್ತು ವಿಶೇಷತೆಗಳಿಗೆ ಹೆಸರುವಾಸಿ.
ಸುಂದರವಾದ ಪ್ರಾಕೃತಿಕ ಸೌಂದರ್ಯವನ್ನು ಹೊರಗಿನ ಪ್ರಪಂಚಕ್ಕೆ ತೋರ್ಪಡಿಸುವ ಮಣಿಪುರ ತನ್ನ ಒಡಲಾಳದಲ್ಲಿ ಜನಾಂಗೀಯ ಹಿಂಸಾಚಾರವನ್ನು ಬಚ್ಚಿಟ್ಟುಕೊಂಡು ನಲುಗುತ್ತಿದೆ. ಅದು ೨೦೨೩ರ ಮೇ ೩ ಮಣಿಪುರ ರಾಜ್ಯದಲ್ಲಿ ಆರಂಭವಾದ ಜನಾಂಗೀಯ ದಳ್ಳೂರಿಗೆ ಭೌಗೋಳಿಕವಾಗಿ ಮತ್ತು ಮಾನಸಿಕವಾಗಿ ಇಡೀ ರಾಜ್ಯವೇ ತತ್ತರಿಸಿ ಹೋಗಿತ್ತು. ಒಂದು ಕಡೆ ಮಣಿಪುರದ ಹಿಂಸಾಚಾರದಿAದ ಸುಮಾರು ೬೦ ಸಾವಿರ ಜನರು ನೆಲೆ ಕಳೆದುಕೊಂಡು ನಿರಾಶ್ರಿತರಾಗಿದ್ದರು. ಇದೀಗ ಮತ್ತೊಂದು ಕಡೆ ಇತ್ತೀಚಿನ ವರುಣನ ಆರ್ಭಟಕ್ಕೆ ತತ್ತರಿಸಿ ಹೋಗಿ ಸಂಕಷ್ಟವನ್ನು ಎದುರಿಸುತ್ತಿದ್ದಾರೆ.
೨೦೨೩ರ ಮೇ ೩ ರಂದು ಮೈಥೇಯಿ ಮತ್ತು ಕುಕಿ ಸಮುದಾಯಗಳ ನಡುವೆ ಘರ್ಷಣೆಗಳು ನಡೆದಿದ್ದವು. ಇದಾದ ಒಂದು ದಿನದ ನಂತರ ಅಂದರೆ ಮೇ ೪ ರಂದು ಕಾಂಗ್ಪೊಕ್ಬಿಯ ಬಿ ಫೈನೋಮ್ ಎಂಬ ಗ್ರಾಮದಲ್ಲಿ ಕುಕಿ ಸಮುದಾಯದ ಮೂವರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವನ್ನು ನಡೆಸಿ. ಆ ಇಬ್ಬರೂ ಕುಕಿ ಮಹಿಳೆಯರನ್ನು ಗುಂಪೊAದು ಬೆತ್ತಲೆಗೊಳಿಸಿ ಮೆರವಣಿಗೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲೂ ಕೂಡ ವೈರಲ್ ಆಗಿತ್ತು. ಯಾರೂ ಕೂಡ ಇದನ್ನು ಮರೆಯಲು ಸಾಧ್ಯವಿಲ್ಲ. ಕುಕಿ ಮತ್ತು ಮೈಥೇಯಿ ಸಮುದಾಯಗಳ ಈ ಘರ್ಷಣೆ ಹಿಂಸಾಚಾರಕ್ಕೆ ತಿರುಗಿ ಅದು ಇಂದು ಕೂಡ ಮುಂದುವರೆಯುತ್ತಾ ಬರುತ್ತಿದೆ.
ಪ್ರಪಂಚದ ಯಾವುದೇ ಭಾಗದಲ್ಲಿ ಯಾವುದೇ ಸಮಸ್ಯೆಗಳಾದರೂ ಮುಂದೆ ನಿಲ್ಲುವ ಪ್ರಧಾನಿ ನರೇಂದ್ರ ಮೋದಿಯವರು ಸೌಜನ್ಯಕ್ಕಾದರೂ ಮಣಿಪುರದ ಗುಂಪು ಘರ್ಷಣೆಯನ್ನ ತಡೆಯುವ, ಅಲ್ಲಿರುವ ಸಮುದಾಯಕ್ಕೆ ಧೈರ್ಯ ತುಂಬುವ ಕೆಲಸ ಮಾಡಲಿಲ್ಲ. ಕನಿಷ್ಠ ಈ ಘಟನೆ ಬಗ್ಗೆ ಒಂದು ಮಾತು ಕೂಡ ಆಡಲಿಲ್ಲ ಎನ್ನುವುದು ಸೂಜಿಗದ ಸಂಗತಿಯೇ ಸರಿ. ಇಡೀ ದೇಶಾದ್ಯಂತ ಆಕ್ರೋಶ ವ್ಯಕ್ತವಾದ ನಂತರ ಸತತ ೭೯ ದಿನಗಳ ಬಳಿಕ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಮೌನವನ್ನು ಮುರಿದು ಮಾತನಾಡಿದ್ದರು. “ಘಟನೆ ಬಗ್ಗೆ ನನ್ನ ಹೃದಯದಲ್ಲಿ ನೋವಿದೆ, ಕೋಪ ಇದೆ”. ಎಂದು ವಿಷಾದ ವ್ಯಕ್ತಪಡಿಸಿದ್ದರು.
ಪ್ರಧಾನಿ ನರೇಂದ್ರ ಮೋದಿಯವರ ಬಹುದಿನಗಳ ಈ ಒಂದು ಹೇಳಿಕೆಗೆ ರಾಷ್ಟಿçÃಯ ದೈನಿಕ “ದಿ ಟೆಲಿಗ್ರಾಫ್” ೨೦೨೩ರ ಜುಲೈ ೨೧ರಂದು ತನ್ನ ಪತ್ರಿಕೆಯ ಮುಖಪುಟದಲ್ಲಿಯೇ ಪ್ರಧಾನಿ ನರೇಂದ್ರ ಮೋದಿಗೆ ಪರೋಕ್ಷವಾಗಿ ಚಾಟಿ ಏಟು ನೀಡುವ ಕೆಲಸ ಮಾಡಿತ್ತು. ೫೬ ಇಂಚಿನ ಎದೆಗೆ ನೋವು ಮತ್ತು ಅವಮಾನ ತಿಳಿಯಲು ೭೯ ದಿನಗಳ ಬೇಕಾಯಿತು ಎಂಬ ಶೀರ್ಷಿಕೆ ನೀಡಿ ಗ್ರಾಫಿಕ್ ಬಳಸಿ ೭೯ ದಿನಗಳ ನಂತರ ಮೊಸಳೆ ಕಣ್ಣೀರು ಎಂದು ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ನಡೆಯನ್ನ ಖಂಡಿಸಿತ್ತು.
ಕಳೆದ ಲೋಕಸಭೆ ಚುನಾವಣೆ ವೇಳೆಯಲ್ಲಿ ಕೂಡ ಪ್ರಧಾನಿ ಮೋದಿ ಮಣಿಪುರಕ್ಕೆ ಹೋಗಲಿಲ್ಲ ಮಣಿಪುರದಲ್ಲಿ ಪ್ರಚಾರ ಮಾಡಲಿಲ್ಲ ಇಡೀ ದೇಶಾದ್ಯಂತ ಪ್ರಚಾರ ಮಾಡಿದರು ಮಣಿಪುರದ ಹಿಂಸಾಚಾರದ ಬಗ್ಗೆ ಒಂದೇ ಒಂದು ಮಾತನ್ನು ಕೂಡ ಆಡಿರಲಿಲ್ಲ. ಬಹುಶಹ ಮಣಿಪುರ ಎಂಬ ರಾಜ್ಯ ಭಾರತ ದೇಶದಲ್ಲಿ ಇದೆ ಎನ್ನುವುದನ್ನು ನರೇಂದ್ರ ಮೋದಿಯವರು ಮರೆತುಬಿಟ್ಟಿದ್ದ ಹಾಗೆ ಕಾಣಿಸುತ್ತದೆ ಎಂಬ ಮಾತುಗಳು ಬಹುತೇಕ ಪ್ರಜ್ಞಾವಂತರಲ್ಲಿ ಕೇಳಿಬಂದಿತ್ತು.
ಇದೀಗ ಸತತ ಒಂದು ವರ್ಷಗಳ ಬಳಿಕ ಮಣಿಪುರ ಹಿಂಸಾಚಾರದ ಬಗ್ಗೆ ನರೇಂದ್ರ ಮೋದಿ ಸಂಸತ್ನಲ್ಲಿ ವಿರೋಧ ಪಕ್ಷದ ಎದುರು ಮಾತನಾಡಿದ್ದಾರೆ. ಮಣಿಪುರದ ಬಗ್ಗೆ ಮಾತನಾಡಲು ಮೋದಿ ಅವರಿಗೆ ಬರೋಬ್ಬರಿ ಒಂದು ವರ್ಷ ಎರಡು ತಿಂಗಳು ಬೇಕಾಯಿತು. ಅದು ಸಂಸತ್ತಿನಲ್ಲಿ ವಿಪಕ್ಷ ಪ್ರಬಲವಾಗಿರುವ ಕಾರಣಕ್ಕಾಗಿ, ಮೋದಿ ಈಗ ಮಣಿಪುರ ಹಿಂಸಾಚಾರದ ಬಗ್ಗೆ ಪ್ರತಿಕ್ರಿಯೆ ನೀಡುತ್ತಿದ್ದಾರೆ ಇಲ್ಲದಿದ್ದರೆ ಬಹುಶಹ ಈಗಲೂ ಕೂಡ ಅದರ ಬಗ್ಗೆ ಪ್ರಸ್ತಾಪ ಮಾಡುತ್ತಿರಲಿಲ್ಲವೇನೋ.
ವಿಪಕ್ಷ ನಾಯಕರಾಗಿ ರಾಹುಲ್ ಗಾಂಧಿ ಅವರು ಅಧಿಕಾರವನ್ನು ಪಡೆದು ಎನ್ಡಿಎ ನಾಯಕರನ್ನು ಕುಟುಕುವ ಕೆಲಸ ಮಾಡುತ್ತಿದ್ದಾರೆ. ಕಳೆದ ಬಾರಿ ಹೇಳುವವರು ಇಲ್ಲ ಕೇಳುವವರು ಇಲ್ಲ ಎನ್ನುವ ಹಾಗೆ ಇಡೀ ಬಿಜೆಪಿ ನಾಯಕರು ವರ್ತನೆ ಮಾಡುತ್ತಿದ್ದರು. ಇದೀಗ ಅದೆಲ್ಲವೂ ಕೂಡ ಬಂದ್ ಆಗಿದೆ. ವಿಪಕ್ಷ ನಾಯಕರು ಕೇಳುವ ಪ್ರಶ್ನೆಗಳಿಗೆ ಆಡಳಿತ ಪಕ್ಷ ಉತ್ತರವನ್ನು ನೀಡಲೇಬೇಕು. ಆ ಪ್ರಶ್ನೆ ಕೇಳುವ ಕೆಲಸವನ್ನು ವಿಪಕ್ಷ ನಾಯಕನಾಗಿ ರಾಹುಲ್ ಗಾಂಧಿ ಮಾಡುತ್ತಿದ್ದಾರೆ.
ರಾಹುಲ್ ಗಾಂಧಿಯವರು ಮಣಿಪುರದ ಹಿಂಸಾಚಾರದ ಬಗ್ಗೆ ಸಂಸತ್ತಿನಲ್ಲಿ ಕೇಳಿದ ಪ್ರಶ್ನೆಗೆ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದು “ಹಿಂಸಾಚಾರ ಪೀಡಿತ ಪ್ರದೇಶದಲ್ಲಿ ಸಹಜ ಪರಿಸ್ಥಿತಿಯನ್ನು ತರಲು ಸರ್ಕಾರ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದೆ. ಹಿಂಸಾಚಾರ ಕ್ಷೀಣಿಸುತ್ತಿದ್ದು ರಾಜ್ಯದ ಹಲವು ಭಾಗಗಳಲ್ಲಿ ಶಾಲೆಗಳು ಪುನರ್ ಆರಂಭವಾಗಿವೆ. ಮರಳಿ ಸಂಪೂರ್ಣ ಶಾಂತ ಪರಿಸ್ಥಿತಿಗೆ ತರಲು ಎಲ್ಲಾ ಪ್ರಯತ್ನ ಮಾಡಲಾಗುತ್ತದೆ. ಇಂದು ಹಿಂಸಾಚಾರಕ್ಕೆ ಸಂಬAಧಪಟ್ಟAತೆ ೫೦೦ಕ್ಕೂ ಹೆಚ್ಚು ಜನರನ್ನ ಬಂಧಿಸಲಾಗಿದೆ. ೧೧,೦೦೦ ಎಫರ್ ದಾಖಲಿಸಲಾಗಿದೆ. ಮಣಿಪುರದ ಬಹುತೇಕ ಕಡೆಗಳಲ್ಲಿ ಸಹಜ ಪರಿಸ್ಥಿತಿ ಏರ್ಪಟ್ಟಿದೆ” ಎಂದು ಹೇಳಿದ್ದಾರೆ.
ಮಣಿಪುರದಲ್ಲಿ ಉಂಟಾಗಿದ್ದ ಅಶಾಂತಿ, ಗಲಭೆ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಪಕ್ಷ ಮತ್ತು ಕೇಂದ್ರ ಸರ್ಕಾರವನ್ನು ಮಣಿಪುರದ ಜನರು ಸಾರಾ ಸಗಟಾಗಿ ತಳ್ಳಿ ಹಾಕುವಂತೆ ಮಾಡಿತ್ತು. ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಬೀಗಿದ್ದ ಬಿಜೆಪಿ ಇದೀಗ ಮಣಿಪುರ ರಾಜ್ಯದಲ್ಲಿರುವ ಎರಡು ಲೋಕಸಭಾ ಕ್ಷೇತ್ರದಲ್ಲೂ ಕೂಡ ಮಖಾಡೆ ಮಲಗಿದೆ. ಇಷ್ಟು ಸಾಕಲ್ಲವೆ ಮಣಿಪುರದ ಜನರು ನರೇಂದ್ರ ಮೋದಿಯವರಿಗೆ ಕೊಟ್ಟ ಗೌರವವನ್ನು ಅಥವಾ ಅವರ ಪಕ್ಷಕ್ಕೆ ನೀಡಿದ ಬೆಂಬಲದ ಬೆಲೆ ತಿಳಿಯಲು.
ಈಗಲೂ ಕೂಡ ನರೇಂದ್ರ ಮೋದಿಯವರು ಮಣಿಪುರದಲ್ಲಿ ಸಹಜ ಸ್ಥಿತಿ ಬರುತ್ತಿದೆ. ಎಂದು ಹೇಳಿದ್ದು ಸುಳ್ಳು ಅಲ್ಲಿಯ ವಾಸ್ತವದ ಉದಾಹರಣೆ ಹೇಳಿದ್ದಾರೆ. ಮಣಿಪುರದ ಪರಿಸ್ಥಿತಿ ಇಂದು ಕೂಡ ಗಂಭೀರವಾಗಿಯೇ ಇದ್ದರೂ ಎಲ್ಲವೂ ಸರಿಯಾಗಿದೆ ಎಂದು ಅಲ್ಲಿನ ವಾಸ್ತವ ಅಂಶವನ್ನು ಮರೆಮಾಚಲು ಮುಂದಾಗಿದೆ.
ಪ್ರಶಾಂತವಾದ ನಗರವಾಗಿದ್ದ ಮಣಿಪುರ ಸಂಘರ್ಷದ ನಗರವಾಗಿ ನಿರ್ಮಾಣವಾದರೂ ಕೂಡ ಈವರೆಗೂ ಮಣಿಪುರಕ್ಕೆ ಪ್ರಧಾನಿ ನರೇಂದ್ರ ಮೋದಿ ಕಾಲಿಟ್ಟಿಲ್ಲ. ಮಣಿಪುರ ಜನತೆಯ ಕೂಗನ್ನು ಅರ್ಥ ಮಾಡಿಕೊಂಡಿಲ್ಲ. ಇಷ್ಟು ದಿನ ಸರ್ವಾಧಿಕಾರ ಆಡಳಿತ ನಡೆಸಿದ ಮೋದಿ ಅವರಿಗೆ ಸೆಡ್ಡು ಹೊಡೆಯಲು ಪ್ರಧಾನಿ ಹುದ್ದೆಯ ತಾಯಿಯಾದ ವಿರೋಧ ಪಕ್ಷದ ನಾಯಕನ ಸ್ಥಾನವು ಬಂದಿದೆ ಇವರ ಲೋಪ ದೋಷಗಳನ್ನು ಎತ್ತಿ ತೋರಿಸಿ ಸಂಸತ್ನಲ್ಲಿ ಸಂಕಷ್ಟಕ್ಕೆ ಒಳಗಾದವರ ಧ್ವನಿಯಾಗಬೇಕಿದೆ.
ಇದೀಗ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಮಣಿಪುರಕ್ಕೆ ಭೇಟಿಯನ್ನು ನೀಡಿದ್ದಾರೆ ಇದು ರಾಜಕೀಯ ಮಾಡುವ ಸಮಯವಲ್ಲ ನೊಂದ ಮನಸ್ಸುಗಳಿಗೆ ಧೈರ್ಯ ತುಂಬುವ ಸಮಯ, ಹೀಗಾಗಿ ಮಣಿಪುರದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿರುವುದಾಗಿ ಅವರೇ ಹೇಳಿಕೊಂಡಿದ್ದಾರೆ. ಭಾರತದ ಒಕ್ಕೂಟದ ಹೆಮ್ಮೆಯ ರಾಜ್ಯ ಯಾವುದೇ ದುರಂತ ಅನುಭವಿಸಿದರು. ಪ್ರಧಾನಿ ನರೇಂದ್ರ ಮೋದಿ ಮಣಿಪುರಕ್ಕೆ ಬರಬೇಕಿತ್ತು.
ಅದೆಲ್ಲ ಏನೇ ಇರಲಿ ಮಣಿಪುರವೆಂಬ ರಾಜ್ಯದಲ್ಲಿ ಆಗುತ್ತಿರುವಂತಹ ಗಲಭೆ ಸಮಸ್ಯೆಗಳನ್ನ ನಿವಾರಣೆ ಮಾಡಲು ಪ್ರಧಾನಿ ಅಂತಹ ದೇಶದ ನಾಯಕ ಮುಂದೆ ಬರಬೇಕಿತ್ತು. ಅದು ಆಗಿಲ್ಲ ಇನ್ನು ಮುಂದೆಯಾದರೂ ತಮ್ಮ ಇಬ್ಬದಿಯ ನೀತಿಯನ್ನ ಬದಿಗಿಟ್ಟು ಇಡೀ ದೇಶವನ್ನು ಒಟ್ಟಿಗೆ ತೆಗೆದುಕೊಂಡು ಹೋಗುತ್ತಾರ ಅಥವಾ ಇದೆ ಮೊಂಡು ವಾದವನ್ನು ಮುಂದುವೆಸುತ್ತಾರ ಕಾದು ನೋಡಬೇಕು.