ಸಲೂನ್‌ಗೆ ಬಂದ ಮಂಗನ ಸ್ಟೈಲ್: ಶಿಸ್ತಿನಿಂದ ಹೇರ್ ಸ್ಟೈಲ್ ಮಾಡಿಸಿಕೊಂಡ ದೃಶ್ಯ ವೈರಲ್!

ಸಲೂನ್‌ಗೆ ಬಂದ ಮಂಗನ ಸ್ಟೈಲ್: ಶಿಸ್ತಿನಿಂದ ಹೇರ್ ಸ್ಟೈಲ್ ಮಾಡಿಸಿಕೊಂಡ ದೃಶ್ಯ ವೈರಲ್!

ಚಾಮರಾಜನಗರದಲ್ಲಿ ಅಪರೂಪದ ದೃಶ್ಯ: ಕನ್ನಡಿಯಲ್ಲಿ ನೋಡಿಕೊಂಡು ಕೇಶ ವಿನ್ಯಾಸ ಮಾಡಿಸಿಕೊಂಡ ಮಂಗ

ಚಾಮರಾಜನಗರ:  ತಾಲೂಕಿನ ಸಂತೇಮರಳ್ಳಿ ಗ್ರಾಮದಲ್ಲಿ ನಡೆದ ಅಪರೂಪದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಗ್ರಾಮದ ದೇವರಾಜ್ ಎಂಬುವವರ ಸಲೂನ್‌ಗೆ ಪ್ರತಿದಿನ ಬರುತ್ತಿದ್ದ ಮಂಗವೊಂದು, ಈ ಬಾರಿ ಶಿಸ್ತಿನಿಂದ ಕುಳಿತು ಕೇಶ ವಿನ್ಯಾಸ ಮಾಡಿಸಿಕೊಂಡು ಜನರ ಅಚ್ಚರಿಗೆ ಕಾರಣವಾಗಿದೆ.

ಸ್ಥಳೀಯರ ಪ್ರಕಾರ, ಮಂಗ ಹಲವು ದಿನಗಳಿಂದ ಸಲೂನ್ ಬಳಿ ತಿರುಗಾಡುತ್ತಿದ್ದು, ಕೆಲವೊಮ್ಮೆ ಒಳಗೆ ಬಂದು ಕನ್ನಡಿಯಲ್ಲಿ ತನ್ನನ್ನೇ ನೋಡಿಕೊಳ್ಳುತ್ತಿತ್ತಂತೆ. ಸಲೂನ್‌ನಲ್ಲಿ ಗ್ರಾಹಕರಿಗೆ ಕ್ಷೌರ ನಡೆಯುವಾಗ ಅದು ಶಾಂತವಾಗಿ ಕುಳಿತು ಗಮನಿಸುತ್ತಿತ್ತು. ಎಷ್ಟೇ ಓಡಿಸಲು ಪ್ರಯತ್ನಿಸಿದರೂ ಅಲ್ಲಿಂದ ತೆರಳದೇ, ಕ್ಷೌರಿಕನ ಕೆಲಸ ಮುಗಿಯುವವರೆಗೂ ಕಾಯುತ್ತಿತ್ತಂತೆ.

ಮಂಗನ ಈ ವಿಚಿತ್ರ ವರ್ತನೆ ಗಮನಿಸಿದ ಸಲೂನ್ ಮಾಲೀಕ ದೇವರಾಜ್, ಅದನ್ನು ಪ್ರೀತಿಯಿಂದ ಹತ್ತಿರಕ್ಕೆ ಕರೆದು ತಲೆ ಬಾಚಲು ಆರಂಭಿಸಿದ್ದಾರೆ. ನಂತರ ಗ್ರಾಹಕರಿಗೆ ಮಾಡುವಂತೆ ಕೇಶ ವಿನ್ಯಾಸ ಮಾಡುವ ನಾಟಕವಾಡಿ ಮಂಗನ ತಲೆಯನ್ನು ಸವರಿ ಬಾಚಿದ್ದಾರೆ. ಆಶ್ಚರ್ಯವೆಂದರೆ, ಮಂಗ ಯಾವುದೇ ತೊಂದರೆ ಕೊಡದೇ ಗಂಭೀರವಾಗಿ ಕುಳಿತುಕೊಂಡೇ ‘ಹೇರ್ ಸ್ಟೈಲ್’ ಮಾಡಿಸಿಕೊಂಡಿದೆ.

ಈ ದೃಶ್ಯವನ್ನು ಅಲ್ಲಿದ್ದವರು ಮೊಬೈಲ್‌ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ವಿಡಿಯೋ ಇದೀಗ ಭಾರೀ ವೈರಲ್ ಆಗಿದೆ. ಮಂಗನ ಶಾಂತ ಸ್ವಭಾವ ಹಾಗೂ ಮನುಷ್ಯರೊಂದಿಗೆ ಬೆರೆತ ರೀತಿಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಪ್ರಾಣಿ ಮತ್ತು ಮನುಷ್ಯನ ನಡುವಿನ ಈ ಅಪರೂಪದ ಸ್ನೇಹ ಎಲ್ಲರ ಮನಗೆದ್ದಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *