ಶಾಸಕ S.T ಸೋಮಶೇಖರ್ ಗೆ ನಿಖಿಲ್ ಕುಮಾರಸ್ವಾಮಿ ಟಾಂಗ್.!

ಶಾಸಕ S.T ಸೋಮಶೇಖರ್ ಗೆ ನಿಖಿಲ್ ಕುಮಾರಸ್ವಾಮಿ ಟಾಂಗ್.!

ಕುಮಾರಣ್ಣ ಮತ್ತೆ ಚನ್ನಪಟ್ಟಣದಿಂದ ಸ್ಪರ್ಧೆ ಮಾಡಬೇಕೆಂಬುವುದು ಕ್ಷೇತ್ರದ ಜನರ ಅಭಿಲಾಷೆ

ರಾಮನಗರ : ಕುಮಾರಣ್ಣನವರು ಮತ್ತೆ ಚನ್ನಪಟ್ಟಣದಿಂದ ಸ್ಪರ್ಧೆ ಮಾಡಬೇಕೆಂದು ಕ್ಷೇತ್ರದ ಕಾರ್ಯಕರ್ತರು ಮತ್ತು ಮುಖಂಡರು ಬೇಡಿಕೆ ಇಟ್ಟಿದ್ದಾರೆ. ಮತ್ತೆ ರಾಜ್ಯ ರಾಜಕಾರಣಕ್ಕೆ ಒಂದಲ್ಲ ಒಂದು ದಿನ  ಬರಲೇಬೇಕಾಗುತ್ತದೆ ಎಂದು ಚನ್ನಪಟ್ಟಣದಲ್ಲಿ ನಿಖಿಲ್ ಕುಮಾರಸ್ವಾಮಿ ಅವರು ತಿಳಿಸಿದರು.

ಚನ್ನಪಟ್ಟಣದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಕುಮಾರಣ್ಣ ಅವರು ನಿರೀಕ್ಷಿತವಾಗಿ ಸಂಸತ್ ಚುನಾವಣೆಯಲ್ಲಿ ಮಂಡ್ಯದಿಂದ ಸ್ಪರ್ಧೆ ಮಾಡಬೇಕಾಯ್ತು. ಕುಮಾರಣ್ಣನಿಗೆ ಕಾರ್ಯಕರ್ತರು ಇಲ್ಲೇ ಸ್ಪರ್ಧೆ ಮಾಡಿ ಅಂತ ಬೇಡಿಕೆ ಇಟ್ಟಿರೋದಕ್ಕೆ ನಾನೇ ಸಾಕ್ಷಿ. ಇದು ಚನ್ನಪಟ್ಟಣ ಜನರ ಅಭಿಲಾಷೆ ಎಂದು ಹೇಳಿದರು.

ಈ ವಿಚಾರದ ಬಗ್ಗೆ ಮುಂದಿನ ದಿನಗಳಲ್ಲಿ ಕಾಲವೇ ತಿರ್ಮಾನ ಮಾಡುತ್ತದೆ. ನಾವು ಎನ್‌ಡಿಎ ಮೈತ್ರಿ ಕೂಟದಲ್ಲಿದ್ದೇವೆ. ಯಾವ ಕ್ಷೇತ್ರವನ್ನ ಜೆಡಿಎಸ್‌ಗೆ ಬಿಟ್ಟು ಕೊಡುತ್ತಾರೆ. ಯಾರ್ಯಾರು ಎಲ್ಲಿಂದ ಸ್ಪರ್ಧೆ ಮಾಡಬೇಕು ಎಂಬುದು 2028 ಕ್ಕೆ ತಿರ್ಮಾನ ಆಗುತ್ತದೆ ಎಂದು ಅವರು ಹೇಳಿದರು.

*ಶಾಸಕ ಎಸ್‌.ಟಿ. ಸೋಮಶೇಖರ್ ಗೆ ನಿಖಿಲ್ ಕುಮಾರಸ್ವಾಮಿ ಟಾಂಗ್*

ಚನ್ನಪಟ್ಟಣ ಕ್ಷೇತ್ರವನ್ನ ಹೆಚ್‌ಡಿಕೆ ಅಭಿವೃದ್ಧಿ ಮಾಡಿಲ್ಲ ಎಂದು ಎಸ್‌.ಟಿ. ಸೋಮಶೇಖರ್ ಟೀಕೆ ವಿಚಾರಕ್ಕೆ ಮಾತನಾಡಿದ ಅವರು ; ಅವರಿಗೆ ಯಶವಂತಪುರ ಕ್ಷೇತ್ರದ ಕಾರ್ಯಕರ್ತರೇ ಉತ್ತರ ಕೊಡುತ್ತಾರೆ. ಅಭಿವೃದ್ಧಿ ಆಧಾರ ಮೇಲೆ ಓಟ್ ಹಾಕುತ್ತಿಲ್ಲ.  ಒಂದು ವರ್ಗದ ಮುಗ್ದ ಜನರಿಗೆ ರಾತ್ರೋರಾತ್ರಿ ಕೂಪನ್, ಫುಡ್‌ಕಿಟ್ ಕೊಟ್ಟು ದಾರಿತಪ್ಪಿಸಿ ಓಟ್ ಹಾಕಿಸಿಕೊಳ್ಳುತ್ತಿದ್ದಾರೆ ಎಂದು ಶಾಸಕರ ಸೋಮಶೇಖರ್ ವಿರುದ್ಧ ಕಿಡಿಕರಿದರು

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಹೆಚ್.ಸಿ ಜಯಮುತ್ತು ಅವರು, ಗೋವಿಂದಳ್ಳಿ ನಾಗರಾಜು, ಹಾಪ್ ಕಾಮ್ಸ್ ದೇವರಾಜು, ಕುಕ್ಕೂರುದೊಡ್ಡಿ ಜಯರಾಮು, ಅಜಯ್ ಕುಮಾರ್ , ಗರಕಳ್ಳಿ ಕೃಷ್ಣೆಗೌಡ,  ನಿಡಗೋಡಿ ಬಾಬು, ಬೋರ್ ವೆಲ್ ರಾಮಚಂದ್ರು, ಏಲಕ್ಕಿ ಗೌಡ  ಸೇರಿದಂತೆ. BLA-2 ಮುಖಂಡರು, ಕಾರ್ಯಕರ್ತರು  ಉಪಸ್ಥಿತರಿದ್ದರು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *