ತುರ್ತು ಸಂದರ್ಭದಲ್ಲಿ ಜನರಿಗೆ ಸೂಕ್ತ ಮಾಹಿತಿ, ವೇಗದ ಸ್ಪಂದನೆಗೆ ಸಹಾಯಕ: ದಿನೇಶ್ ಗುಂಡೂರಾವ್

ತುರ್ತು ಸಂದರ್ಭದಲ್ಲಿ ಜನರಿಗೆ ಸೂಕ್ತ ಮಾಹಿತಿ, ವೇಗದ ಸ್ಪಂದನೆಗೆ ಸಹಾಯಕ: ದಿನೇಶ್ ಗುಂಡೂರಾವ್

ಬೆಂಗಳೂರು ಆರೋಗ್ಯಸೌಧದಲ್ಲಿ ಹೊಸ ಕಮಾಂಡ್ ಸೆಂಟರ್: ತುರ್ತು ಸಂದರ್ಭ ನಿರ್ವಹಣೆಗೆ ಮಹತ್ವದ ಹೆಜ್ಜೆ

ಬೆಂಗಳೂರು: ಬೆಂಗಳೂರಿನ ಆರೋಗ್ಯಸೌಧದಲ್ಲಿ ಆರೋಗ್ಯ ತುರ್ತು ಕಾರ್ಯಾಚರಣೆ ಕೇಂದ್ರ (HEOC) ಉದ್ಘಾಟಿಸಿ ಮಾತನಾಡಿದ ದಿನೇಶ್ ಗುಂಡೂರಾವ್ . Health Emergency Operations Centre ತುರ್ತು ಸಂದರ್ಭಗಳಲ್ಲಿ ಸಮಯೋಚಿತ ನಿರ್ಧಾರ, ಸಂಪನ್ಮೂಲಗಳ ಸರಿಯಾದ ಬಳಕೆಗೆ ಮತ್ತು ಜನರಿಗೆ ಸರಿಯಾದ ಮಾಹಿತಿಯನ್ನು ತಲುಪಿಸಿ, ಆತಂಕಕ್ಕೆ ಒಳಗಾಗದಂತೆ ಎಚ್ಚರಿಸಲು ಕೇಂದ್ರೀಯ ನಿಯಂತ್ರಣ ಘಟಕವಾಗಿ ಇದು ಕೆಲಸ ನಿರ್ವಹಿಸಲಿದೆ.

ಕೋವಿಡ್ ಸಂದರ್ಭದಲ್ಲಿ ಉಂಟಾದ ಸಮನ್ವಯದ ಕೊರತೆ ನೀಗಿಸಲು ಈ ವ್ಯವಸ್ಥೆ ಅತ್ಯವಶ್ಯಕ. ಸಾಂಕ್ರಾಮಿಕ‌ ರೋಗಗಳು, ಬೆಂಕಿ ಅವಘಡಗಳು, ಪ್ರಕೃತಿ ವಿಕೋಪ ಮುಂತಾದವುಗಳನ್ನು ಸಮರ್ಪಕವಾಗಿ ನಿರ್ವಹಿಸಲು WHO ಮಾರ್ಗದರ್ಶನದಂತೆ, ಪ್ರಧಾನಮಂತ್ರಿ ಆಯುಷ್ಮಾನ್ ಭಾರತ ಆರೋಗ್ಯ ಮೂಲಸೌಕರ್ಯ ಮಿಷನ್ ಅಡಿಯಲ್ಲಿ ಪ್ರತಿ ರಾಜ್ಯದಲ್ಲೂ ಕಮಾಂಡ್ ಕಂಟ್ರೋಲ್ ರೂಂ  ಮಾಡಲಾಗುತ್ತಿದೆ.

ಕೇವಲ ಆರೋಗ್ಯ ಇಲಾಖೆ ಮಾತ್ರವಲ್ಲ, ತುರ್ತು ಸಂದರ್ಭಗಳಲ್ಲಿ ಕಂದಾಯ, ವಿಪತ್ತು ನಿರ್ವಹಣಾ ಪ್ರಾದಿಕಾರ, ಪೋಲಿಸ್, ಅಗ್ನಿಶಾಮಕ ಸೇವೆ ಮುಂತಾದವುಗಳ ಸಮನ್ವಯದಿಂದ ಪರಿಸ್ಥಿತಿ ನಿರ್ವಹಿಸಲು ಇದು ಸಹಕಾರಿ ಆಗಲಿದೆ. 24/7 ಕಾರ್ಯಾನಿರ್ವಹಿಸುವ ಈ ಕೇಂದ್ರ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಸೇವೆಗಳು ಇವುಗಳೊಂದಿಗೆ ತಕ್ಷಣ ಸಂಪರ್ಕ ಸಾಧಿಸಿ ಮಾಹಿತಿ ವಿನಿಮಯ ಮತ್ತು ಸೂಕ್ತ ನಿರ್ದೇಶನ ನೀಡಲು ನೆರವಾಗಲಿದೆ.  ಒಟ್ಟಿನಲ್ಲಿ ಇದೊಂದು ಅತ್ಯಾಧುನಿಕ ಆರೋಗ್ಯ ತುರ್ತು ಪರಿಸ್ಥಿತಿ ನಿರ್ವಹಣಾ ಘಟಕವಾಗಿ ಕಾರ್ಯ ನಿರ್ವಹಿಸಲಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾರ್ಯದರ್ಶಿ ರಿತ್ವಿಕ್ ರಂಜನಂ ಪಾಂಡೆ, ಆಯುಕ್ತ ಗುರುದತ್ ಹೆಗಡೆ, NHM ನಿರ್ದೇಶಕ ಅವಿನಾಶ್ ಮೆನನ್, ಆರೊಗ್ಯ ಇಲಾಖೆ ನಿರ್ದೇಶಕಿ ಡಾ. ರಜನಿ ಉಪಸ್ಥಿತರಿದ್ದರು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *