ಮೆಟ್ರೋದಲ್ಲಿ ಅಸಭ್ಯ ವರ್ತನೆ.

ಮೆಟ್ರೋದಲ್ಲಿ ಅಸಭ್ಯ ವರ್ತನೆ.

ಯುವತಿಯ ಮೈಮುಟ್ಟಿ ಕಿರುಕುಳ; ಭದ್ರತಾ ಸಿಬ್ಬಂದಿಯಿಂದ ತಕ್ಷಣ ಕ್ರಮ.

ಬೆಂಗಳೂರುಯುವತಿಯ ಮೈ-ಕೈ ಮುಟ್ಟಿ ಅಪರಿಚಿತ ವ್ಯಕ್ತಿ ಅಸಭ್ಯವಾಗಿ ವರ್ತಿಸಿರುವಂತಹ ಘಟನೆ ನಮ್ಮ ಮೆಟ್ರೋದಲ್ಲಿ ನಡೆದಿದೆ. ವಿಧಾನಸೌಧ ಮೆಟ್ರೋದಿಂದ ತೆರಳುತ್ತಿದ್ದ ವೇಳೆ  ಘಟನೆ ನಡೆದಿದೆ. ಈ ವೇಳೆ ಯುವತಿ ಅಲ್ಲಿದ್ದ ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಕೂಡಲೇ ಆ ವ್ಯಕ್ತಿಯನ್ನು ಭದ್ರತಾ ಸಿಬ್ಬಂದಿ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಬೆಂಗಳೂರಿನ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಎನ್​​​ಸಿಆರ್ ದಾಖಲಿಸಿ ವ್ಯಕ್ತಿಗೆ ವಾರ್ನ್ ಮಾಡಿ ಪೊಲೀಸರು ಕಳುಹಿಸಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *