ಬೆಂಗಳೂರು: ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಕೋರ್ಟ್ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ
ಪ್ರಜ್ವಲ್ ರೇವಣ್ಣ ಅವರ 10 ದಿನಗಳ ಪೊಲೀಸ್ ಕಸ್ಟಡಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ಸೋಮವಾರ ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ಈ ವೇಳೆ 42ನೇ ಎಸಿಎಂಎಂ ನ್ಯಾಯಾಲಯವು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಪ್ರಜ್ವಲ್ ವಿರುದ್ಧ ಇನ್ನೂ ಎರಡು ಪ್ರಕರಣಗಳ ತನಿಖೆ ಬಾಕಿ ಹಿನ್ನೆಲೆ ಪುನಃ ಕಸ್ಟಡಿಗೆ ಕೇಳುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು. ಪ್ರತಿ ಪ್ರಕರಣದ ತನಿಖೆಯನ್ನ ಪ್ರತ್ಯೇಕವಾಗಿ ನಡೆಸುತ್ತಿರುವ ಎಸ್‌ಐಟಿ ಟೀಂ, ಸದ್ಯ ಈಗ ಹೊಳೆನರಸೀಪುರ ಟೌನ್ ಠಾಣೆ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿತ್ತು. ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಸಂಬಂಧ ಕಳೆದ 14 ದಿನಗಳಿಂದ ಪ್ರಜ್ವಲ್ ವಿಚಾರಣೆ ನಡೆಸಲಾಗಿತ್ತು