ಕುಣಿಗಲ್ : ಮಂಗಳವಾರ ಒಂದೇ ರಾತ್ರಿಯಲ್ಲಿ ಸರಣಿ ಕಳ್ಳತನವಾಗಿರುವುದು ತಾಲೂಕಿನ ಹುತ್ರಿದುರ್ಗ ಹೋಬಳಿ ಕೆಂಪನಹಳ್ಳಿ ಗ್ರಾಮಸ್ಥರನ್ನು ಬೆಚ್ಚಿ ಬೀಳಿಸಿದೆ. ಗ್ರಾಮದ ಸರ್ಕಾರಿ ಪ್ರೌಢಶಾಲೆ ಹಾಗೂ ಗ್ರಾಮ ಪಂಚಾಯ್ತಿಯ ಬಾಗಿಲು ಹಾಗೂ ಕಿಟಕಿ ಸರಳುಗಳನ್ನು ಮುರಿದು ಲಕ್ಷಾಂತ ರೂ. ಬೆಲೆ ಬಾಳುವ ಎಲೆಕ್ಟಾನಿಕ್ ಯಂತ್ರಗಳನ್ನು ಕಳ್ಳರು ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ.
ಮಂಗಳವಾರ ಶಾಲೆ ಮುಗಿದ ಬಳಿಕ ಎಂದಿನOತೆ ಶಾಲೆಯ ಶಿಕ್ಷಕರು ಶಾಲೆಗೆ ಬೀಗ ಹಾಕಿಕೊಂಡು ಹೋಗಿದ್ದರು. ಶಾಲೆಯ ಗಣಕಯಂತ್ರ ಕೊಠಡಿಯ ಬಾಗಿಲಿನ ಬೀಗ ಮುರಿದಿರುವ ಕಳ್ಳರು ಒಳ ನುಗ್ಗಿ ಎರಡು ಯುಪಿಎಸ್ ಬ್ಯಾಟರಿ ಕಳವು ಮಾಡಿದ್ದಾರೆ. ಬಳಿಕ ಶಾಲೆ ಸಮೀಪದಲ್ಲಿ ಇದ್ದ ಗ್ರಾಮ ಪಂಚಾಯ್ತಿ ಕಟ್ಟಡದ ಹಿಂಬದಿಯ ಕಿಟಕಿ ಸರಳುಗಳನ್ನು ಕತ್ತ್ತರಿಸಿ ಒಳ ನುಗ್ಗಿದ ಕಳ್ಳರು, ಯುಪಿಎಸ್ ಬ್ಯಾಟರಿ, ಎಲ್ಇಡಿ ಟಿವಿ, ಡೀವಿಆರ್ ಅನ್ನು ದೋಚಿಕೊಂಡು ಪರಾರಿಯಾಗಿದ್ದಾರೆ. ಪಂಚಾಯ್ತಿ ಪಿಡಿಓ, ಶಾಲಾ ಮುಖ್ಯ ಶಿಕ್ಷಕ ನೀಡಿದ ದೂರಿನನ್ವಯ ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.