ತುಮಕೂರು:- ಟಿಕೆಟ್ ಕೈತಪ್ಪಿದ್ದರ ಹಿಂದೆ ಕಾಣದ ಕೈಗಳ ಪಿತೂರಿ ನಡೆದಿದೆ. ಒಳ ಒಪ್ಪಂದ ಆಗಿದೆ ಎಂದು ಜನ ಮಾತಾಡಿಕೊಳ್ಳುತ್ತಿದ್ದಾರೆ. ಗೂಂಡಾಗಿರಿ ಮಾಡಿದವನಿಗೆ, ಸೋಲೋರಿಗೆ ಟಿಕೆಟ್ ಕೊಟ್ಟಿದ್ದಾರೆ ಎಂದು ಶಿಗ್ಗಾವಿ ಉಪಚುನಾವಣೆ ಕಾಂಗ್ರೆಸ್ ಟಿಕೆಟ್ ವಂಚಿತ ಸೈಯದ್ ಅಜ್ಜಂಪೀರ್ ಖಾದ್ರಿ ಬೇಸರ ವ್ಯಕ್ತಪಡಿಸಿದ್ದಾರೆ.
ತುಮಕೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಗ ಹಾನಗಲ್ಲಿನ ಪಠಾಣ್ ಗೆ ಟಿಕೆಟ್ ಕೊಟ್ಟಿದ್ದಾರೆ. ಅವನೊಬ್ಬ ರೌಡಿಶೀಟರ್, 17 ಕೇಸ್ ಇದೆ ಆತನ ಮೇಲಿದೆ. ಕ್ಷೇತ್ರದ ಜನ ಸ್ಥಳೀಯ ಅಭ್ಯರ್ಥಿ ಬಯಸುತ್ತಾರೆ. ನಾನು ಸ್ಥಳೀಯನಾಗಿದ್ದೇನೆ. ಮುಂದಿನ ದಿನದಲ್ಲಿ ಪಿತೂರಿಯ ಎಲ್ಲಾ ವಿಚಾರ ಬಹಿರಂಗವಾಗಲಿದೆ ಎಂದಿದ್ದಾರೆ.
ನಾನು ಮುಖ್ಯಮಂತ್ರಿ ಸಿದ್ಧರಾಮಯ್ಯರ ಅಭಿಮಾನಿ. ಅವರ ವಿರುದ್ದ ಮಾತನಾಡುವಷ್ಟು ದೊಡ್ಡ ವ್ಯಕ್ತಿ ಅಲ್ಲ. ನನನ್ನು ಪಕ್ಷೇತರವಾಗಿ ನಿಲ್ಲಲು ಕಾರ್ಯಕರ್ತರ ಒತ್ತಡ ಹೆಚ್ಚಾಗಿದೆ. ಟಿಕೆಟ್ ತಪ್ಪಿದ ವಿಚಾರವಾಗಿ ನನ್ನ ಕಾರ್ಯಕರ್ತರು ವಿಷ ಕುಡಿಯಲು ಹೋಗಿದ್ದಾರೆ. ಪಕ್ಷೇತರವಾಗಿ ನಿಲ್ಲುವಂತೆ ಹಲವರು ಸೂಚನೆ ಕೊಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ಬೊಮ್ಮಾಯಿ ತಿರಸ್ಕೃತ;- ಬೊಮ್ಮಾಯಿ ಅವರು ಶಿಗ್ಗಾವಿಯಲ್ಲಿ ತಿರಸ್ಕೃತವಾಗಿದ್ದಾರೆ. ಅವರ ವಿರುದ್ದ ವಿರೋಧಿ ಅಲೆ ಜೋರಾಗಿದೆ. ಈಗಾಗಲೇ ನನ್ನನ್ನ ಎಮ್ ಐ ಎಮ್ ಪಕ್ಷದವರು ಸಂಪರ್ಕ ಮಾಡಿದ್ದಾರೆ. ಅದೊಂದು ಅಪಾಯಕಾರಿ ಪಕ್ಷ, ಅದಕ್ಕಾಗಿ ನಾನು ತಿರಸ್ಕರಿಸಿದ್ದೇನೆ ಎಂದಿದ್ದಾರೆ.
ನನ್ನ ಶಿಗ್ಗಾವಿ ಕ್ಷೇತ್ರದ ಜನಕ್ಕೆ ನಾನು ಕೈ ಮುಗಿದು ಕೇಳಿಕೊಳ್ಳುತ್ತೇನೆ. ಯಾರು ಅಹಿತಕರ ಘಟನೆ ಮಾಡಬೇಡಿ. ಯಾರು ವಿರೋಧಿ ಘೋಷಣೆಗಳನ್ನ ಕೂಗಬೇಡಿ. ಎಲ್ಲರು ನಮ್ಮವರೇ, ಯಾರು ಯಾರು ನಮಗೆ ಮೋಸ ಮಾಡಿದ್ದಾರೆ ದೇವರು ಅವರಿಗೆ ಒಳ್ಳೆದು ಮಾಡಲಿ ಎಂದು ತಿಳಿಸಿದ್ದಾರೆ.
23 ವರ್ಷದಿಂದ ಕಾಂಗ್ರೆಸ್ ಕಟ್ಟಿದ್ದೇನೆ: ಕಳೆದ 23 ವರ್ಷದಿಂದ ಕಾಂಗ್ರೆಸ್ ಕಟ್ಟಿದ್ದೇನೆ. ಒಮ್ಮೆ ಶಾಸಕನಾಗಿದ್ದೇನೆ. ಮೂರು ಬಾರಿ ಬಸವರಾಜ ಬೊಮ್ಮಾಯಿ ವಿರುದ್ದ ಅತ್ಯಂತ ಕಡಿಮೆ ಅಂತರದಿಂದ ಸೋತಿದ್ದೇನೆ. ಬೊಮ್ಮಾಯಿ ವಿರುದ್ದ ಯಾರೂ ಟಿಕೆಟ್ ತೆಗೆದುಕೊಳ್ಳಲು ತಯಾರು ಇರಲಿಲ್ಲ. ಅಂಥ ಸಂದರ್ಭದಲ್ಲಿ ನಾನು ನಿಂತಿದ್ದೇನೆ.
ನಾನು ಸ್ಪರ್ಧೆ ಮಾಡಿದಾಗ ಬೊಮ್ಮಾಯಿ ವಿರುದ್ದ ಕಾಂಗ್ರೆಸ್ ನ ಯಾವ ಮುಖಂಡರು ಪ್ರಚಾರಕ್ಕೆ ಬರಲಿಲ್ಲ. ಬೊಮ್ಮಾಯಿ ನಿಂತಿದ್ದಾರೆ ಹೇಗೆ ಪ್ರಚಾರ ಮಾಡಲಿ ಅಂದಿದ್ದರು.
ಕೈ ಮುಗಿದು ಕೇಳಿದರೂ ಯಾರೂ ಪ್ರಚಾರಕ್ಕೆ ಬಂದಿಲ್ಲ. ಲಿಂಗಾಯತ ನಾಯಕರು, ಕುರುಬ, ನಾಯಕ ಸಮುದಾಯದ ಯಾವೊಬ್ಬ ನಾಯಕರೂ ಬಂದಿರಲಿಲ್ಲ. ಅವರೆಲ್ಲ ಬಂದು ಪ್ರಚಾರ ಮಾಡಿದ್ದರೆ ನಾನು ಗೆದ್ದು ಬಸವರಾಜ ಬೊಮ್ಮಾಯಿ ಸೋಲುತ್ತಿದ್ದರು. ನಾನು ಒಬ್ಬ ಅಲ್ಪ ಸಂಖ್ಯಾತ ಎನ್ನುವ ಕಾರಣಕ್ಕೆ ಬೇರೆ ಸಮುದಾಯದ ಯಾರೂ ಬಂದೂ ಪ್ರಚಾರ ಮಾಡಿಲ್ಲ. ಅಡ್ಜೆಸ್ಟ್ ಮೆಂಟ್ ರಾಜಕಾರಣ ಮಾಡಿ ಬೊಮ್ಮಾಯಿಯನ್ನು ಗೆಲ್ಲಿಸಿಕೊಂಡು ಬಂದಿದ್ದಾರೆ ಎಂದು ಹೇಳಿದ್ದಾರೆ.ತುಮಕೂರು:- ಟಿಕೆಟ್ ಕೈತಪ್ಪಿದ್ದರ ಹಿಂದೆ ಕಾಣದ ಕೈಗಳ ಪಿತೂರಿ ನಡೆದಿದೆ. ಒಳ ಒಪ್ಪಂದ ಆಗಿದೆ ಎಂದು ಜನ ಮಾತಾಡಿಕೊಳ್ಳುತ್ತಿದ್ದಾರೆ. ಗೂಂಡಾಗಿರಿ ಮಾಡಿದವನಿಗೆ, ಸೋಲೋರಿಗೆ ಟಿಕೆಟ್ ಕೊಟ್ಟಿದ್ದಾರೆ ಎಂದು ಶಿಗ್ಗಾವಿ ಉಪಚುನಾವಣೆ ಕಾಂಗ್ರೆಸ್ ಟಿಕೆಟ್ ವಂಚಿತ ಸೈಯದ್ ಅಜ್ಜಂಪೀರ್ ಖಾದ್ರಿ ಬೇಸರ ವ್ಯಕ್ತಪಡಿಸಿದ್ದಾರೆ.
ತುಮಕೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಗ ಹಾನಗಲ್ಲಿನ ಪಠಾಣ್ ಗೆ ಟಿಕೆಟ್ ಕೊಟ್ಟಿದ್ದಾರೆ. ಅವನೊಬ್ಬ ರೌಡಿಶೀಟರ್, 17 ಕೇಸ್ ಇದೆ ಆತನ ಮೇಲಿದೆ. ಕ್ಷೇತ್ರದ ಜನ ಸ್ಥಳೀಯ ಅಭ್ಯರ್ಥಿ ಬಯಸುತ್ತಾರೆ. ನಾನು ಸ್ಥಳೀಯನಾಗಿದ್ದೇನೆ. ಮುಂದಿನ ದಿನದಲ್ಲಿ ಪಿತೂರಿಯ ಎಲ್ಲಾ ವಿಚಾರ ಬಹಿರಂಗವಾಗಲಿದೆ ಎಂದಿದ್ದಾರೆ.
ನಾನು ಮುಖ್ಯಮಂತ್ರಿ ಸಿದ್ಧರಾಮಯ್ಯರ ಅಭಿಮಾನಿ. ಅವರ ವಿರುದ್ದ ಮಾತನಾಡುವಷ್ಟು ದೊಡ್ಡ ವ್ಯಕ್ತಿ ಅಲ್ಲ. ನನನ್ನು ಪಕ್ಷೇತರವಾಗಿ ನಿಲ್ಲಲು ಕಾರ್ಯಕರ್ತರ ಒತ್ತಡ ಹೆಚ್ಚಾಗಿದೆ. ಟಿಕೆಟ್ ತಪ್ಪಿದ ವಿಚಾರವಾಗಿ ನನ್ನ ಕಾರ್ಯಕರ್ತರು ವಿಷ ಕುಡಿಯಲು ಹೋಗಿದ್ದಾರೆ. ಪಕ್ಷೇತರವಾಗಿ ನಿಲ್ಲುವಂತೆ ಹಲವರು ಸೂಚನೆ ಕೊಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ಬೊಮ್ಮಾಯಿ ತಿರಸ್ಕೃತ;- ಬೊಮ್ಮಾಯಿ ಅವರು ಶಿಗ್ಗಾವಿಯಲ್ಲಿ ತಿರಸ್ಕೃತವಾಗಿದ್ದಾರೆ. ಅವರ ವಿರುದ್ದ ವಿರೋಧಿ ಅಲೆ ಜೋರಾಗಿದೆ. ಈಗಾಗಲೇ ನನ್ನನ್ನ ಎಮ್ ಐ ಎಮ್ ಪಕ್ಷದವರು ಸಂಪರ್ಕ ಮಾಡಿದ್ದಾರೆ. ಅದೊಂದು ಅಪಾಯಕಾರಿ ಪಕ್ಷ, ಅದಕ್ಕಾಗಿ ನಾನು ತಿರಸ್ಕರಿಸಿದ್ದೇನೆ ಎಂದಿದ್ದಾರೆ.
ನನ್ನ ಶಿಗ್ಗಾವಿ ಕ್ಷೇತ್ರದ ಜನಕ್ಕೆ ನಾನು ಕೈ ಮುಗಿದು ಕೇಳಿಕೊಳ್ಳುತ್ತೇನೆ. ಯಾರು ಅಹಿತಕರ ಘಟನೆ ಮಾಡಬೇಡಿ. ಯಾರು ವಿರೋಧಿ ಘೋಷಣೆಗಳನ್ನ ಕೂಗಬೇಡಿ. ಎಲ್ಲರು ನಮ್ಮವರೇ, ಯಾರು ಯಾರು ನಮಗೆ ಮೋಸ ಮಾಡಿದ್ದಾರೆ ದೇವರು ಅವರಿಗೆ ಒಳ್ಳೆದು ಮಾಡಲಿ ಎಂದು ತಿಳಿಸಿದ್ದಾರೆ.
23 ವರ್ಷದಿಂದ ಕಾಂಗ್ರೆಸ್ ಕಟ್ಟಿದ್ದೇನೆ: ಕಳೆದ 23 ವರ್ಷದಿಂದ ಕಾಂಗ್ರೆಸ್ ಕಟ್ಟಿದ್ದೇನೆ. ಒಮ್ಮೆ ಶಾಸಕನಾಗಿದ್ದೇನೆ. ಮೂರು ಬಾರಿ ಬಸವರಾಜ ಬೊಮ್ಮಾಯಿ ವಿರುದ್ದ ಅತ್ಯಂತ ಕಡಿಮೆ ಅಂತರದಿಂದ ಸೋತಿದ್ದೇನೆ. ಬೊಮ್ಮಾಯಿ ವಿರುದ್ದ ಯಾರೂ ಟಿಕೆಟ್ ತೆಗೆದುಕೊಳ್ಳಲು ತಯಾರು ಇರಲಿಲ್ಲ. ಅಂಥ ಸಂದರ್ಭದಲ್ಲಿ ನಾನು ನಿಂತಿದ್ದೇನೆ.
ನಾನು ಸ್ಪರ್ಧೆ ಮಾಡಿದಾಗ ಬೊಮ್ಮಾಯಿ ವಿರುದ್ದ ಕಾಂಗ್ರೆಸ್ ನ ಯಾವ ಮುಖಂಡರು ಪ್ರಚಾರಕ್ಕೆ ಬರಲಿಲ್ಲ. ಬೊಮ್ಮಾಯಿ ನಿಂತಿದ್ದಾರೆ ಹೇಗೆ ಪ್ರಚಾರ ಮಾಡಲಿ ಅಂದಿದ್ದರು.
ಕೈ ಮುಗಿದು ಕೇಳಿದರೂ ಯಾರೂ ಪ್ರಚಾರಕ್ಕೆ ಬಂದಿಲ್ಲ. ಲಿಂಗಾಯತ ನಾಯಕರು, ಕುರುಬ, ನಾಯಕ ಸಮುದಾಯದ ಯಾವೊಬ್ಬ ನಾಯಕರೂ ಬಂದಿರಲಿಲ್ಲ. ಅವರೆಲ್ಲ ಬಂದು ಪ್ರಚಾರ ಮಾಡಿದ್ದರೆ ನಾನು ಗೆದ್ದು ಬಸವರಾಜ ಬೊಮ್ಮಾಯಿ ಸೋಲುತ್ತಿದ್ದರು. ನಾನು ಒಬ್ಬ ಅಲ್ಪ ಸಂಖ್ಯಾತ ಎನ್ನುವ ಕಾರಣಕ್ಕೆ ಬೇರೆ ಸಮುದಾಯದ ಯಾರೂ ಬಂದೂ ಪ್ರಚಾರ ಮಾಡಿಲ್ಲ. ಅಡ್ಜೆಸ್ಟ್ ಮೆಂಟ್ ರಾಜಕಾರಣ ಮಾಡಿ ಬೊಮ್ಮಾಯಿಯನ್ನು ಗೆಲ್ಲಿಸಿಕೊಂಡು ಬಂದಿದ್ದಾರೆ ಎಂದು ಹೇಳಿದ್ದಾರೆ.