ತುಮಕೂರು: 12 ವರ್ಷದ ಬಾಲಕಿಯೊಬ್ಬಳು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾಳೆ. ತನ್ನ ಅಂಗಾಂಗಳನ್ನು ದಾನ ಮಾಡುವ ಮೂಲಕ 6 ಜನರ ಜೀವಕ್ಕೆ ಬೆಳಕಾಗಿದ್ದಾಳೆ.
ತಿಪಟೂರು ನಗರದ ಹಳೇಪಾಳ್ಯದ ನಿವಾಸಿಯಾಗಿರುವ ಚಂದನ ಅಲ್ಲಿನ ಶ್ರೀ ವಿವೇಕಾನಂದ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಓದುತ್ತಿದ್ದಳು. ಜು.23ರಂದು ಶಾಲೆಗೆ ಹೋಗಿ ವಾಪಸ್ ಬರುವಾಗ ತಿಪಟೂರಿನಲ್ಲಿ ಅಪಘಾತವಾಗಿದೆ.
ರಸ್ತೆ ದಾಟುವಾಗ ಚಂದನಗೆ ಲಾರಿ ಡಿಕ್ಕಿ ಹೊಡೆದು ತಲೆಗೆ ಪೆಟ್ಟಾಗಿತ್ತು. ಪರಿಣಾಮ ಮೆದುಳು ನಿಷ್ಕ್ರಿಯಗೊಂಡಿತ್ತು. ಅಪಘಾತದ ಬಳಿಕ ಹಾಸನ ಮೆಡಿಕಲ್ ಕಾಲೇಜಿನಲ್ಲಿ ಚಂದನಾಗೆ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆತ ಆಕೆ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಳು. ಕೊನೆಗೆ ಚಿಕಿತ್ಸೆ ಫಲಕಾರಿಯಾಗದೆ ಚಂದನ ಸಾವನಪ್ಪಿದ್ದಾಳೆ.
ಇದೀಗ ಸಾವನ್ನಪ್ಪಿದ ಮಗಳ ಅಂಗಾಂಗ ದಾನ ಮಾಡಿ ಚಂದನ ಪೋಷಕರು ಮಾದರಿಯಾಗಿದ್ದಾರೆ. ಪೋಷಕರ ದಿಟ್ಟ ನಿರ್ಧಾರಕ್ಕೆ ಆಸ್ಪತ್ರೆಯ ಸಿಬ್ಬಂದಿ ಗೌರವ ಸಲ್ಲಿಸಿದ್ದಾರೆ.