ರಾಹುಲ್ ಗಾಂಧಿ ಬಿಜೆಪಿಯ ಗೊಡ್ಡು ಬೆದರಿಕೆಗೆ ಹೆದರುವವರಲ್ಲ – ಸಿಎಂ ಸಿದ್ದರಾಮಯ್ಯ

ರಾಹುಲ್ ಗಾಂಧಿ ಬಿಜೆಪಿಯ ಗೊಡ್ಡು ಬೆದರಿಕೆಗೆ ಹೆದರುವವರಲ್ಲ - ಸಿಎಂ ಸಿದ್ದರಾಮಯ್ಯ

ಬೆಂಗಳೂರು : ರಾಹುಲ್ ಗಾಂಧಿ ಅವರ ಮೇಲೆ ಬಿಜೆಪಿಯವರು ಗಧಾ ಪ್ರಹಾರ ಮಾಡ್ತಿದ್ದಾರೆ.. ಟೀಕೆಗಳನ್ನು ಮಾತ್ರವಲ್ಲದೆ ಕೊಲೆ ಬೆದರಿಕೆಯಂಥಹ ಗಂಭೀರ ಆರೋಪ ಮಾಡ್ತಿದ್ದಾರೆ. ರಾಹುಲ್ ಗಾಂಧಿ ಅವರ ಜನಪ್ರಿಯತೆ ಕುಗ್ಗಿಸಲು, ಹಣಿಯಲು ಬಿಜೆಪಿ ಪ್ರಯತ್ನ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದ್ದಾರೆ. 

ರಾಹುಲ್ಗಾಂಧಿಯವರು ಕೊಲೆಗೆ, ಗೊಡ್ಡು ಬೆದರಿಕೆ ಹೆದರುವುದಿಲ್ಲ. ಅವರು ಇಂದಿರಾ ಗಾಂಧಿ ಕುಟುಂಬದಿಂದ ಬಂದಿದ್ದು ಅಜ್ಜಿ ಮತ್ತು ತಂದೆ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ರು. ಬಿಜೆಪಿ ನಾಯಕರು ಥಾರ್ ವಿಂದರ್ ಸಿಂಗ್ ಮಾರ್ವಾ ಹೇಳಿಕೆ ನೀಡಿ ರಾಹುಲ್ ಗಾಂಧಿಗೆ ಬೆದರಿಕೆ ಒಡ್ಡಿದ್ದಾರೆ. ಸರಿಯಾಗಿ ನಡೆದುಕೊಳ್ಳದಿದ್ದಲ್ಲಿ ಇಂದಿರಾ ಗಾಂಧಿ ರೀತಿ ನಿಮಗೂ ಆಗಲಿದೆ ಎಂದು ಕೊಲೆ ಬೆದರಿಕೆ ಹಾಕಿದ್ದಾರೆ. ರೈಲ್ವೆ ಖಾತೆ ರಾಜ್ಯ ಸಚಿವ ರವನೀತ್ ಬಿಟ್ಟು ಅವರು ರಾಹುಲ್ ಗಾಂಧಿಗೆ ಭಯೋತ್ಪಾದಕ ಎಂದು ಹೇಳುವ ಮೂಲಕ ಪ್ರಚೋದನೆ ಮಾತುಗಳನ್ನು ಹೇಳಿ ಎತ್ತಿಕಟ್ಟುವ ಕೆಲಸ ಮಾಡ್ತಿದ್ದಾರೆ ಎಂದರು.

ಈ ತಿಂಗಳ 16 ರಂದು ಬಿಜೆಪಿಯ ಮಿತ್ರಪಕ್ಷವಾದ ಶಿವಸೇನೆ ಶಾಸಕ, ಸಿಎಂ ಏಕನಾಥ್ ಸಿಂಧೆ (ಬಣದ). ಸಂಜಯ್ ಗಾಯಕ್ವಾಡ್ ರಾಹುಲ್ ಗಾಂಧಿ ನಾಲಿಗೆ ಕತ್ತರಿಸಿದರೆ 11 ಲಕ್ಷ ಕೊಡ್ತೇನೆ ಎಂದು ಹೇಳಿಕೆ ಕೊಡುತ್ತಾರೆ. ಇದು ಕೂಡ ಕೊಲೆ ಬೆದರಿಕೆಯಾಗಿದೆ. ಈ ಕೂಡಲೆ ದುಷ್ಟ ಶಾಸಕನ ವಿರುದ್ದ ಕೊಲೆ ಬೆದರಿಕೆ ಕೇಸು ದಾಖಲಿಸಿ ಜೈಲಿಗೆ ಕಳುಜಿಸಿ ಎಂದು ಒತ್ತಾಯಿಸಿದರು.  ಉತ್ತರ ಪ್ರದೇಶದ ಮಂತ್ರಿ ರಘುರಾಜ್ ಸಿಂಗ್.. 16 ರಂದು ರಾಹುಲ್ ಗಾಂಧಿ ನಂಬರ್ 1 ಭಯೋತ್ಪಾದಕ ಎಂದು ಹೇಳಿದ್ದಾರೆ. ಇವೆಲ್ಲಾ ಕೊಲೆ ಬೆದರಿಕೆ ಆಗಿದ್ದರು ಇದುವರೆಗೂ ಯಾರೂ ಕ್ರಮ ಕೈಗೊಂಡಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.

Leave a Reply

Your email address will not be published. Required fields are marked *