ಗುಡ್ ನ್ಯೂಸ್ ಕೊಟ್ಟ ಕಿರುತೆರೆ ದಂಪತಿಗಳು : ಗಂಡು ಮಗುವಿಗೆ ಜನ್ಮ ನೀಡಿದ ಕವಿತಾ ಗೌಡ

ಗುಡ್ ನ್ಯೂಸ್ ಕೊಟ್ಟ ಕಿರುತೆರೆ ದಂಪತಿಗಳು : ಗಂಡು ಮಗುವಿಗೆ ಜನ್ಮ ನೀಡಿದ ಕವಿತಾ ಗೌಡ

ಕಿರುತೆರೆ ನಟಿ ಕವಿತಾ ಗೌಡ ಹಾಗೂ ಚಂದನ್ ಕುಮಾರ್ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಲಾಕ್ಡೌನ್ ವೇಳೆ 2021ರ ಮೇ 14ರಂದು ಚಂದನ್ ಕುಮಾರ್ ಮತ್ತು ಕವಿತಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇಬ್ಬರೂ `ಲಕ್ಷ್ಮಿ ಬಾರಮ್ಮ’ಎಂಬ ಸೀರಿಯಲ್ನ ಮೂಲಕ  ಹೀರೋ, ಹೀರೋಯಿನ್ ಆಗಿ ನಟಿಸಿದ್ದರು. ಚಿನ್ನು ಪಾತ್ರದ ಮೂಲಕ ಲಕ್ಷ್ಮೀ ಬಾರಮ್ಮದಲ್ಲಿ  ಖ್ಯಾತಿ ಪಡೆದಿದ್ದ ನಟಿ ಕವಿತಾ ಗೌಡ ಮತ್ತು ಪತಿ ಚಂದನ್ ಗೌಡ ಅವರ ದಂಪತಿಗೆ ಮುದ್ದಾದ ಗಂಡು ಮಗು ಜನಿಸಿದೆ.

ಚಂದನ್ ಇದೀಗ ತಮ್ಮ ಅಭಿಮಾನಿಗಳೊಂದಿಗೆ ಖುಷಿ ಸುದ್ದಿಯನ್ನು ಹಂಚಿಕೊAಡಿದ್ದಾರೆ. “ನಮ್ಮ ಮುದ್ದು ಕಂದಮ್ಮ ಧರೆಗಿಳಿದಿದ್ದಾನೆ” ಅನ್ನೋ ಮೂಲಕ ಮಗನ ಮೊದಲ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ಸಂಭ್ರಮಿಸಿದ್ದಾರೆ.

ಇನ್ನು ಗಂಡು ಮಗು ಹುಟ್ಟಿರುವ ವಿಚಾರವನ್ನು ಸ್ವತಃ ಕವಿತಾ ಗೌಡ ಫೇಸ್ಬುಕ್ನಲ್ಲಿ ಹಂಚಿಕೊAಡಿದ್ದಾರೆ. ‘ಯುವರಾಜನ ಆಗಮನ’ ಎಂದು ಅವರು ಪೋಸ್ಟ್ ಕೂಡ ಮಾಡಿದ್ದಾರೆ.

ನಟಿಯರಾದ ಮಿಲನಾ ನಾಗರಾಜ್ ಹಾಗೂ ಪ್ರಣೀತಾ ಸುಭಾಷ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಮಿಲನಾ ನಾಗರಾಜ್ ಹಾಗೂ ಕವಿತಾ ಗೌಡ ಅವರಿಗೆ ಇದು ಮೊದಲ ಮಗುವಾಗಿದ್ದರೆ, ಪ್ರಣೀತಾ ಸುಭಾಷ್ ಗೆ ಇದು 2ನೇ ಮಗು. ಕೆಲ ಸಮಯದ ಹಿಂದೆ ಕವಿತಾ ಗೌಡ ತಮ್ಮ ಫೇಸ್ಬುಕ್ ಅಕೌಂಟ್ ಮೂಲಕ ಶುಭ ಸುದ್ದಿಯನ್ನು ಅಭಿಮಾನಿಗಳಿಗೆ ತಿಳಿಸಿದ್ದರು.

Leave a Reply

Your email address will not be published. Required fields are marked *