ದಿನಾಂಕ : 20.09.2024
ವಾರ: ಶುಕ್ರವಾರ
ನಕ್ಷತ್ರ : ರೇವತಿ
ತಿಥಿ : ತೃತೀಯಾ
ಇಂದಿನ ವಿಶೇಷ : ಭೃಗು ತೃತೀಯಾ
ಅದೃಷ್ಟ ಸಂಖ್ಯೆ : 7
ಇಂದಿನ ನಿಮ್ಮ ಜಾಥಕ
ಮೇಷ: ಕಬ್ಬಿಣ ವಸ್ತುಗಳ ತಯಾರಕರಿಗೆ ಲಾಭ. ಪುಸ್ತಕ ವ್ಯಾಪಾರದಲ್ಲಿ ಮಂದಗತಿ. ವಾಹನ ಖರೀದಿಸುವಾಗ ಅಗತ್ಯ ಎಚ್ಚರಿಕೆ ಇರಲಿ.
ವೃಷಭ: ಮಕ್ಕಳಿಂದ ಅಗೌರವ. ಕೃಷಿಕರಿಗೆ ಶುಭ. ಸಹೋದರರಿಂದ ಸಹಾಯ. ಖರೀದಿ ಭರಾಟೆಯಲ್ಲಿ ಅಮೂಲ್ಯ ವಸ್ತು ಕಳೆದುಕೊಳ್ಳುವಿರಿ.
ಮಿಥುನ: ಹಲ್ಲು ನೋವಿನ ಸಮಸ್ಯೆ ಉಂಟಾಗಬಹುದು. ಗಣ್ಯರ ಭೇಟಿಯಿಂದ ಸಂತಸ. ವ್ಯಾಯಾಮದ ಕಡೆ ಗಮನಹರಿಸಿ. ನೆಮ್ಮದಿ.
ಕಟಕ: ನಾಟ್ಯ ಸ್ಪರ್ಧೆಯಲ್ಲಿ ಯಶಸ್ಸು. ಪದವೀಧರರಿಗೆ ನೌಕರಿ ಸಿಗಲಿದೆ. ಬರಬೇಕಾದ ಹಣ ಸಕಾಲಕ್ಕೆ ಕೈಸೇರಿ ಮಾನಸಿಕ ಸಮಾಧಾನ.
ಸಿಂಹ: ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ಲಾಭ. ಸಾಂಸ್ಕೃತಿಕ ಕ್ಷೇತ್ರದಲ್ಲಿ ಹೆಚ್ಚಿನ ಪ್ರಗತಿ. ರೇಷ್ಮೆ ಉತ್ಪನ್ನಗಳ ವ್ಯಾಪಾರಿಗಳಿಗೆ ಶುಭ.
ಕನ್ಯಾ: ಉನ್ನತ ಅಧಿಕಾರಿಗಳ ವರ್ಗಾವಣೆ ಸಾಧ್ಯತೆ. ಧಾರ್ಮಿಕ ಕಾರ್ಯಗಳನ್ನು ಮಾಡುವಿರಿ. ಪಿತ್ರಾರ್ಜಿತ ಆಸ್ತಿ ದೊರೆಯುವ ಸಂಭವ.
ತುಲಾ: ಕೌಟುಂಬಿಕ ಸಮಸ್ಯೆಗೆ ಪರಿಹಾರ. ದಾಂಪತ್ಯದಲ್ಲಿ ಸಣ್ಣ ವಿಷಯ ಬೆಳೆದೀತು. ಪಾಲುದಾರಿಕೆ ವ್ಯವಹಾರದಲ್ಲಿ ಹೊಸ ಜವಾಬ್ದಾರಿ.
ವೃಶ್ಚಿಕ: ಅಧಿಕ ಶ್ರಮದಿಂದ ಜಯವಿದೆ. ಸಾಲ ಬಾಧೆಯಿಂದ ಮುಕ್ತಿ. ಹೈನುಗಾರಿಕೆ ತರಬೇತಿ ಕಾರ್ಯಕ್ರಮ ಯಶಸ್ವಿಯಾಗಿ ಸನ್ಮಾನ.
ಧನಸ್ಸು: ಗೃಹ ಕೆಲಸಗಳನ್ನು ವೇಗವಾಗಿ ಮುಗಿಸಲಿದ್ದೀರಿ. ಬಿಡುವಿಲ್ಲದ ಕೆಲಸದಿಂದಾಗಿ ಅನಾರೋಗ್ಯ. ತೆರಿಗೆ ತಜ್ಞರಿಗೆ ಹೆಚ್ಚು ಆದಾಯ.
ಮಕರ: ಇಂದು ಸಂತೋಷದಿAದ ದಿನ ಕಳೆಯುತ್ತಿರಿ. ವಾಣಿಜ್ಯ ವಿದ್ಯಾರ್ಥಿಗಳಿಗೆ ಯಶಸ್ಸು. ನೀವು ಮಾಡುವ ಕೆಲಸಗಳಲ್ಲಿ ಶ್ರಮವಿರುತ್ತದೆ.
ಕುಂಭ: ಉಪನ್ಯಾಸಕರಿಗೆ ಭಡ್ತಿ. ಸಾಲ ಮರುಪಾವತಿಯಿಂದ ನೆಮ್ಮದಿ. ಆಹಾರ ಉದ್ಯಮದವರಿಗೆ ಲಾಭ. ಹೊಸ ವ್ಯಾಪಾರ ಪ್ರಾರಂಭ. ಮೀನ: ವಾಹನ ಮಾರಾಟದಲ್ಲಿ ಅಭಿವೃದ್ಧಿ. ಕೃಷಿ ವಿಸ್ತರಣೆ ಕುರಿತು ಚಿಂತನೆ. ಪದವಿ ಲಭ್ಯವಾಗುವ ಯೋಗ. ಕಲಾವಿದರಿಗೆ ನಿರಾಸೆ.