ಬೆಳಗಾವಿ : ಬಸನಗೌಡ ಪಾಟೀಲ್ ಯತ್ನಾಳ್ ನೀವು ನಿಮ್ಮನ್ನ ತಿದ್ದುಕೊಳ್ಳದಿದ್ರೆ, ನಿಮಗೆ ರಾಜಕೀಯ ಭವಿಷ್ಯವಿಲ್ಲ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ. ಬೆಳಗಾವಿಯಲ್ಲಿ ಮಾತಾಡಿದ ಅವರು,ಗೃಹ ಲಕ್ಷ್ಮೀ ಹಣ ಕೇವಲ ಒಂದೇ ಕೋಮಿಗೆ ಹೋಗುತ್ತಿಲ್ಲ.
ಯತ್ನಾಳ್ ಅದನ್ನ ತಿಳಿದುಕೊಳ್ಳಬೇಕು. ಯತ್ನಾಳ್ ಅವರಿಗೆ ರಾಜಕೀಯ ಭವಿಷ್ಯವಿಲ್ಲ. ಹಗುರವಾಗಿ ಮಾತಾಡೋದನ್ನ ನಿಲ್ಲಿಸಬೇಕು ಎಂದು ಹೇಳಿದ್ದಾರೆ.
ಸ್ನೇಹಮಯಿ ಕೃಷ್ಣ ಹಾಗೂ ಅಬ್ರಹಂ ಹಿನ್ನೆಲೆ ಏನು ಎಂಬುದನ್ನು ಮೊದಲು ನೋಡಿ. ರಾಜ್ಯದಲ್ಲಿ ಈಗ ದುರುದ್ದೇಶದ ಪರಿಸ್ಥಿತಿ ಬಂದೊದಗಿದೆ. ಇಂತಹ ಪರಿಸ್ಥಿತಿ ನಮಗೆ ಬೇಕಾಗಿರಲಿಲ್ಲ. ಮುಖ್ಯಮಂತ್ರಿಗಳಿಗೆ ಎಲ್ಲದರ ಬಗ್ಗೆಯೂ ಪರಿಕಲ್ಪನೆ ಇದೆ. ಇನ್ನು ಬಸನಗೌಡ ಪಾಟೀಲ ಯತ್ನಾಳ್ ಬಸವಣ್ಣನವರ ಅನುಯಾಯಿಗಳಾದರೂ, ಬಸವಣ್ಣನವರ ಸರ್ವ ಧರ್ಮ- ಸಮಪಾಲು ತತ್ವಗಳನ್ನು ಮರೆತು ಒಂದು ಕೋಮಿನ ವಿರುದ್ಧ ಯಾಕೆ ದ್ವೇಷ ಕಾರುತ್ತಿದ್ದಾರೆ ಎಂಬುದು ವಿಚಿತ್ರವೆನಿಸುತ್ತಿದೆ. ಇಡೀ ರಾಜ್ಯದ 1 ಕೋಟಿ 22 ಲಕ್ಷ ಬಡ ಕುಟುಂಬಗಳಿಗೆ ಗೃಹಲಕ್ಷ್ಮಿ ಹಣ ಸೇರುತ್ತಿದೆ.ಇದು ಸಿದ್ದರಾಮಯ್ಯ ಸರ್ಕಾರದ ಸಾಧನೆ ಎಂದು ತಿಳಿಸಿದರು.
ಮುರುಗೇಶ್ ನಿರಾಣಿಗೆ ಟಾಂಗ್..!
ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ಕೊಡಿಸಿದರೇ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ 1 ಕೆ.ಜಿ.ಚಿನ್ನ ಕೊಡಿಸುವುದಾಗಿ ಹೇಳಿದ್ದ, ಮಾಜಿ ಸಚಿವ ಮುರುಗೇಶ್ ನಿರಾಣಿಗೆ ಲಕ್ಷ್ಮೀ ಹೆಬ್ಬಾಳ್ಕರ್ ಟಾಂಗ್ ನೀಡಿದ್ದಾರೆ.
ಮೊದಲು ಪಂಚಮಸಾಲಿಗರ ಋಣ ತೀರಿಸಬೇಕಿದೆ. ಸ್ವಂತ ಸಮಾಜಕ್ಕೆ ಏನು ಮಾಡಿದ್ದಾರೆ ಎಂಬುದನ್ನು ಮೊದಲು ತಿಳಿಸಲು ಆಮೇಲೆ ನನಗೆ ಬಂಗಾರ ಕೊಡಿಸಲಿ. ಮೀಸಲಾತಿಗಾಗಿ ಯಾರಿಗೂ ಹೆದರುವ ಪ್ರಶ್ನೆಯೇ ಇಲ್ಲ. ಸಮಾಜದ ಮಗಳಾಗಿ 2 ಎ ಮೀಸಲಾತಿ ಹೋರಾಟದಲ್ಲಿ ಸದಾ ಸಕ್ರಿಯರಾಗಿದ್ದು, ಮೀಸಲಾತಿ ಪರವಾಗಿದ್ದೇನೆ. ಮಾಜಿ ಸಚಿವ ಮುರುಗೇಶ ನಿರಾಣಿ ಅವರಿಗೆ ಈ ಕುರಿತು ಕಾಳಜಿ ಮಾಡುವ ಸಮಯವೊಂದಿತ್ತು. ಆವಾಗ ಅವರು ಏನು ಮಾಡಲಿಲ್ಲ. ಈಗ ಈ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿರುವುದು ಅಪಹಾಸ್ಯವಾಗಿದೆ ಎಂದರು.