ರಿವಾಲ್ವಾರ್‌ನಿಂದ ಆಕಸ್ಮಿಕ ಫೈರ್ : ಶಿವಸೇನ ನಾಯಕ ಗಾಯ

ರಿವಾಲ್ವಾರ್ನಿಂದ ಆಕಸ್ಮಿಕ ಫೈರ್ : ಶಿವಸೇನ ನಾಯಕ ಗಾಯ

ಮುಂಬೈ: ತಮ್ಮದೇ ರಿವಾಲ್ವಾರ್‌ನಿಂದ ಆಕಸ್ಮಿಕವಾಗಿ ಫೈರ್ ಆದ ಗುಂಡು ಕಾಲಿಗೆ ತಗುಲಿ ನಟ ಮತ್ತು ಶಿವಸೇನಾ ನಾಯಕ ಗೋವಿಂದ ಗಾಯಗೊಂಡಿರುವ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ.

ಇಂದು ಬೆಳಗ್ಗೆ ಮುಂಬೈನ ತಮ್ಮ ನಿವಾಸದಲ್ಲಿ ಹಿರಿಯ ನಟ ಗೋವಿಂದ ಅವರ ಕಾಲಿಗೆ ಆಕಸ್ಮಿಕವಾಗಿ ಗುಂಡು ತಗುಲಿದೆ. ಗಾಯಗೊಂಡಿರುವ ನಟನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮುಂಬೈ ಪೊಲೀಸರು ಮಾಹಿತಿ ನೀಡಿದ್ದಾರೆ.

ಇಂದು ಕೋಲ್ಕತ್ತಾಗೆ ಪ್ರಯಾಣಿಸಬೇಕಿದ್ದ ಹಿನ್ನೆಲೆಯಲ್ಲಿ ತಮ್ಮ ರಿವಾಲ್ವರ್ ಅನ್ನು ಗೋವಿಂದ ಸ್ವಚ್ಛಗೊಳಿಸುತ್ತಿದ್ದರು. ಈ ವೇಳೆ ಕೈಯಿಂದ ಆಕಸ್ಮಿಕವಾಗಿ ರಿವಾಲ್ವಾರ್ ಜಾರಿದ ಪರಿಣಾಮ ಗುಂಡು ಹಾರಿದೆ. ಈ ಗುಂಡು ಅವರ ಕಾಲಿಗೆ ತಗುಲಿದ್ದರಿಂದ ಗಾಯಗೊಂಡಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಸದ್ಯ ಕಾಲಿನಿಂದ ಗುಂಡು ಹೊರತೆಗೆಯಲಾಗಿದೆ. ಆರೋಗ್ಯ ಸ್ಥಿರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಗೋವಿಂದ ಅವರ ಮ್ಯಾನೇಜರ್ ಶಶಿ ಸಿನ್ಹಾ ಸ್ಪಷ್ಟಪಡಿಸಿದ್ದಾರೆ. ಘಟನೆ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Leave a Reply

Your email address will not be published. Required fields are marked *