ದ್ವಿಚಕ್ರ – KSRTC ಬಸ್ ಡಿಕ್ಕಿ: ಒಂದೇ ಕುಟುಂಬದ ನಾಲ್ವರು ಸಾವು

ದ್ವಿಚಕ್ರ – KSRTC ಬಸ್ ಡಿಕ್ಕಿ: ಒಂದೇ ಕುಟುಂಬದ ನಾಲ್ವರು ಸಾವು

ತೆಲಂಗಾಣ : ಜಹೀರಾಬಾದ್-ಬೀದರ್ ರಸ್ತೆಯಲ್ಲಿ ಇಂದು ಸಂಜೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ನ್ಯಾಲ್ಕಲ್ ಮಂಡಲದ ಗಣೇಶಪುರದ ಬಳಿ ಕೆಎಸ್ಆರ್ಟಿಸಿ ಬಸ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ.

ಗಣೇಶಪುರದ ಸಿದ್ದರಾಮಪ್ಪ (71), ಅವರ ಪುತ್ರಿ ರೇಣುಕಾ (36), ಅಳಿಯ ಜಗನ್ನಾಥ್ (41) ಮತ್ತು ಮೊಮ್ಮಗ ವಿನಯ್ ಕುಮಾರ್ (15) ಮೃತರು.

ಸಿದ್ದರಾಮಪ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದು, ಉಳಿದ ಮೂವರು ಬೀದರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಅಸುನೀಗಿದ್ದಾರೆ. ಘಟನೆ ಸಂಬಂಧ ಹದ್ನೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *