ಅಕ್ರಮ ಸಂಬಂಧಕ್ಕೆ ಅಡ್ಡಿ : ಹೆತ್ತ ಮಕ್ಕಳನ್ನೇ ಕೊಂದ ತಾಯಿ

ಬೆಂಗಳೂರು: ಲಾಡ್ಜ್ನಲ್ಲಿ ಮಾಲ್ಡೀವ್ಸ್ ಪ್ರಜೆಯ ಶವ ಪತ್ತೆ

ಬೆಂಗಳೂರು: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದಾರೆಂದು ಪ್ರಿಯಕರನೊಂದಿಗೆ ಸೇರಿ ಹೆತ್ತ ಮಕ್ಕಳನ್ನು ತಾಯಿ ಹತ್ಯೆ ಮಾಡಿರುವ ಘಟನೆ ರಾಮನಗರದ ಐಜೂರುನಲ್ಲಿ ನಡೆದಿದೆ.

ಹತ್ಯೆಯಾದ ಮಕ್ಕಳನ್ನು ಕಬಿಲಾ (3) ಮತ್ತು 11 ತಿಂಗಳ ಮಗು ಕಬೀರನ್ ಎಂದು ಗುರುತಿಸಲಾಗಿದ್ದು. ಪ್ರಕರಣ ಸಂಬಂಧ ಪೊಲೀಸರು ಆರೋಪಿಗಳಾದ ಸ್ವೀಟಿ (24), ಮನೆಕೆಲಸಗಾರ್ತಿ ಮತ್ತು ಆಕೆಯ ಪ್ರಿಯಕರ ಗ್ರೆಗೊರಿ ಫ್ರಾನ್ಸಿಸ್ (27)ನನ್ನು ಬಂಧಿಸಿದ್ದಾರೆ

ಆರೋಪಿ ಮಹಿಳೆ ಸ್ವೀಟಿಗೆ ಬೆಂಗಳೂರಿನ ಟ್ಯಾನಿ ರೋಡ್”ನ ಎಕೆ ಕಾಲೋನಿ ವಾಸಿ ಶಿವು ಎಂಬುವವರ ಜೊತೆ 4 ವರ್ಷಗಳ ಹಿಂದೆ ಮದುವೆಯಾಗಿತ್ತು. ಕಳೆದ ಜುಲೈ.30ರಂದು ಸ್ವೀಟಿ ಪತಿ ಶಿವು ಅವರನ್ನು ಬಿಟ್ಟು ಮಕ್ಕಳೊಂದಿಗೆ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಳು. 1.5 ತಿಂಗಳ ಬಳಿಕ ಒಬ್ಬಳೆ ಮನೆಗೆ ಹಿಂತಿರುಗಿದ ಸ್ವೀಟಿ, ಮಕ್ಕಳನ್ನು ಹಾಸ್ಟೆನಲ್ಲಿ ಇರಿಸಿದ್ದೀನಿ ಎಂದು ಹೇಳಿದ್ದಳು. ಮನೆಯಿಂದ ಹೋಗಿದ್ದೇಕೆಂದು ಪ್ರಶ್ನಿಸಿದಾಗ ಬ್ಯಾಂಕಿನಟ್ಟಿಲ್ಲ ಹಣ ಖರ್ಚು ಮಾಡಿದ್ದೇನೆ. ನೀವು ಏನಾದರೂ ಮಾಡುತ್ತೀರಿ ಎಂಬ ಭಯದಿಂದ ರಾಮನಗರಕ್ಕೆ ಹೋಗಿದ್ದೆ. ಇನ್ನು ಮುಂದೆ ಈ ರೀತಿ ಮಾಡುವುದಿಲ್ಲ ಎಂದು ಹೇಳಿದ್ದಾಳೆ. ಬಳಿಕ ಶಿವು ಅವರು ಮಕ್ಕಳನ್ನು ಮನೆಗೆ ಕರೆತಂದಿದ್ದಾರೆ.

ಈ ನಡುವೆ ಸ್ವೀಟಿಯ ಬ್ಯಾಗ್‌ನಲ್ಲಿ ಜಾರ್ಜ್‌ ಪ್ರಾನ್ಸಿಸ್‌ ಎಂಬುವನ ಆಧಾರ್‌ ಕಾರ್ಡ್‌ ಸಿಕ್ಕಿದ್ದು, ಆಧಾರ್‌ ನಂಬರ್‌ಗೆ ಕರೆ ಮಾಡಿದಾಗ ಆತ ಸ್ವೀಟಿಯನ್ನು ಪ್ರೀತಿಸುತ್ತಿರುವುದಾಗಿ ಹೇಳಿದ್ದಾನೆ. ಮತ್ತೆ ಆ.19 ರಂದು ಮಹಿಳೆ ಸ್ವೀಟಿ ಮಕ್ಕಳ ಜತೆ ಮನೆಯಿಂದ ಕಾಣೆಯಾಗಿದ್ದು, ಈ ಸಂಬಂಧ ಬೆಂಗಳೂರಿನ ಡಿ.ಜೆ.ಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು

Leave a Reply

Your email address will not be published. Required fields are marked *