ಒಬ್ಬ ಸಕ್ಸೆಸ್ಫುಲ್ ಬಿಸಿನೆಸ್ಮನ್ ಆಗುವುದು ಮತ್ತು ಬಿಸಿನೆಸ್ ಅನ್ನು ಸಕ್ಸೆಸ್ ಹಂತಕ್ಕೆ ಕೊಂಡೊಯ್ಯುವುದು ಅಷ್ಟು ಸುಲಭದ ಮಾತಲ್ಲಾ. ಸಕ್ಸೆಸ್ಫುಲ್ ಬಿಸಿನೆಸ್ಮನ್ ಯಾಗಲು ಕಠಿಣ ಪರಿಶ್ರಮ, ಮತ್ತು ಸಮರ್ಪಣೆ ಬೇಕಾಗುತ್ತದೆ. ಒಬ್ಬ ಯಶಸ್ವಿ ಬಿಸಿನೆಸ್ಮನ್ ಆಗಲು, ಸಕ್ಸೆಸ್ ಆಗಿರುವಂತಹವರ ಸಲಹೆಗಳನ್ನು ಅನುಸರಿಸುವುದು ಅತ್ಯಗತ್ಯ. ಹಾಗಾದ್ರೆ, ಅನುಭವಿ ಬಿಸಿನೆಸ್ಮನ್ ನ ಅನುಭವದ ನುಡಿಗಳೆನೆಂಬುದನ್ನು ತಿಳಿಯೊಣ ಬನ್ನಿ.
•ಗೂಟ ಹೊಡೆದುಕೊಳ್ಳಬೇಕಿಲ್ಲ – ನೀವು ಒಂದು ಬಿಸಿನೆಸ್ ಶುರು ಮಾಡಿದ್ರೆ ಕೊನೆಯವರೆಗೂ ಅದಕ್ಕೆ ಜೋತುಕೊಂಡಿರಬೇಕಿಲ್ಲ. ನಿಮಗೆ ಅಸಕ್ತಿ ಮೂಡಿಸುವ ಬೇರೆ ಬಿಸಿನೆಸ್ ಐಡಿಯಾ ಸಿಕ್ರೆ ಇದನ್ನು ಮಾರಿ ಅದನ್ನು ಶುರು ಮಾಡಿ.
•ಕತ್ತೆ ಥರ ಕೆಲಸ ಮಾಡೊದು ಬೇಡ – ಕೆಲಸ ಮಾಡಬೇಕೆಂದು ಕೆಲಸ ಮಾಡೋದು ಬೇಡಾ, ಅಗತ್ಯ ಇರುವಷ್ಟು ಸಮಯವನ್ನು ಕೆಲಸಕ್ಕೆ ಕೊಟ್ರೆ ಸಾಕು. ಸ್ವಂತ ಬಿಸಿನೆಸ್ ಎಂದು 24 ಗಂಟೆಯೂ ಕೆಲಸ ಮಾಡುವ ಅವಶ್ಯಕತೆ ಇಲ್ಲ. ಇದರಿಂದ ನಿಮ್ಮ ಆರೋಗ್ಯ ಕೆಡುವ ಲಕ್ಷಣಗಳು ಹೆಚ್ಚಾಗುತ್ತದೆ.
•ಕೆಲಸ ನಿಯೋಜನೆ – ಬಿಸಿನೆಸ್ ನಲ್ಲಿ ನಿಮ್ಮೊಂದಿಗೆ ಉದ್ಯೋಗಿಗಳಿದ್ದರೆ ಜಾಬ್ ಡೆಲಿಗೇಶನ್ ಸಮರ್ಪಕವಾಗಿ ಮಾಡಿ. ಇದರಿಂದ ನೀವು ಬಿಸಿನೆಸ್ ಡೆವಲಪ್ಮೆಂಟ್ ಗೆ ಹೊಸ ಐಡಿಯಾ ಹುಡುಕುವಷ್ಟು ಸಮಯಾವಕಾಶ ಪಡೆಯಬಹುದು.
•ಕ್ಲೈಂಟ್ ಗಳೇ ದೇವರಲ್ಲ – ಕ್ಲೈಂಟ್ ಗಳೇ ಒಂದು ಬಿಸಿನೆಸ್ ನ ಜೀವಾಳ ಎಂಬುದು ನಿಜ ಆದ್ರೆ ಕಿರಿಕಿರಿ ಉಂಟು ಮಾಡುವ ಕ್ಲೈಂಟ್ ಗಳನ್ನು ಸಹಿಸಿಕೊಂಡು ಹೋಗುವುದು ಸರಿಯಲ್ಲ. ಅಂತಹವರನ್ನು ದೂರ ಇಡುವುದರಿಂದ ನಿಮ್ಮ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ.
•ಕಲಿಕೆ ನಿರಂತರ – ನೀವು ಎಷ್ಟೆ ಅನುಭವಿಯಾಗಿದ್ದರೂ ಕಲಿಯುವುದು ಇದ್ದೇ ಇರುತ್ತದೆ. ಹೊಸ ಐಡಿಯಾಗಳಿಗೆ ಮನಸು ತೆರೆದಿಟ್ಟುಕೊಂಡಿರಿ. ಇದರಿಂದ ನೀವು ಕೂಡ ಹೊಸ ಪೀಳಿಗೆಯ ಹೊಸ ರೀತಿಗಳ ಐಡಿಯಾಗಳಿಂದ ಹೆಚ್ಚು ಯಶಸ್ವಿಯಾಗಬಹುದು.
•ಇತರರ ಮಾತಿಗೆ ಕಿವಿಕೊಡಿ – ಸಧ್ಯ ಬಿಸಿನೆಸ್ ನಲ್ಲಿ ನಿಮಗೆಲ್ಲಾ ತಿಳಿದಿರಬಹುದು ಆದರೆ ಬೇರೆಯವರ ಸಲಹೆ ಕೇಳಿ ತಿಳಿಯುವುದರಿಂದ ನಿಮಗೆ ಹೊಸ ಆಲೊಚನೆ ಜೋತೆಗೆ ಹೊಸ ಐಡಿಯಾಗಳು ಸಿಗಬಹುದು.
•ನಿಮ್ಮದೇ ವಿಶ್ಲೇಷಣೆ – ನಿಮ್ಮ ಬಿಸಿನೆಸ್ ಹೇಗೇ ಎಂಬುದು ನಿಮಗೆ ತಿಳಿದಿರುತ್ತದೆ. ಬೇರೆಯವರ ಮಾತನ್ನು ಅಥವಾ ಸಲಹೆಗಳನ್ನು ಕೇಳಿ ಆದರೆ ಅದನ್ನು ಅಳವಡಿಸಿಕೊಳ್ಳಬೇಕು ಎನ್ನುವ ಅನಿವಾರ್ಯತೆ ಏನು ಇಲ್ಲ. ಯಾವುದು ಸರಿ ಎಂಬುದು ಅರಿತು, ಪರಿಶೀಲಿಸಿ ಆನಂತರ ಅದನ್ನು ಅನುಸರಿಸಿ.