ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ವಿಸ್ಮಯಗಳು ಸಂಭವಿಸುತ್ತದೆ. ಶವಪೆಟ್ಟಿಗೆಯಲ್ಲಿ ಎಂಟು ತಿಂಗಳ ಮಗುವಿನ ಚಲನವಲನ ಕಂಡು ಪೋಷಕರು ಶಾಕ್ ಆಗಿದ್ದಾರೆ. ಬ್ರೆಜಿಲ್ ನಲ್ಲಿ ಎಂಟು ತಿಂಗಳ ಮಗುವನ್ನು ವೈದ್ಯರು ಸಾವನ್ನಪ್ಪಿದೆ ಎಂದು ಘೋಷಿಸಿದ ನಂತರ ಅಂತ್ಯಕ್ರಿಯೆಗೆ ಸಿದ್ಧತೆ ನಡೆಸಲಾಗಿತ್ತು ಆದರೆ ಶವಪೆಟ್ಟಿಗೆಯಲ್ಲಿ ಮಗುವಿನ ಚಲನವಲನ ಕಂಡು ಕುಟುಂಬ ಆಘಾತಕ್ಕೆ ಒಳಗಾಗಿದ್ದು ಮಗುವನ್ನು ಮತ್ತೆ ಆಸ್ಪತ್ರೆಗೆ ದಾಖಲಿಸಿದರು ಕೂಡ ಕೆಲ ಹೊತ್ತಿನಲ್ಲೇ ಮಗು ಮರಣ ಹೊಂದಿದೆ. ಇದು ವೈದ್ಯರ ನಿರ್ಲಕ್ಷಕ್ಕೆ ಹಿಡಿದ ಕೈಗನ್ನಡಿಯಂತಿದ್ದು ಪೋಷಕರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಅಕ್ಟೋಬರ್ 19ರಂದು ವೈರಲ್ ಸೋಂಕಿನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ಮಗುವಿಗೆ ಹೃದಯ ಬಡಿತ ಅಥವಾ ಉಸಿರಾಟದ ಯಾವುದೇ ಲಕ್ಷಣಗಳಿಲ್ಲ ಮಗು ಸಾವನ್ನಪ್ಪಿದೆ ಎಂದು ವೈದ್ಯರು ಘೋಷಿಸಿದರು. ಅಂತೆಯೇ ಪೋಷಕರು ಅಂಚೆಕ್ರಿಯೆಗೆ ಸಿದ್ಧತೆಗಳನ್ನು ಪ್ರಾರಂಭಿಸಿದ್ರು ಇದ್ದಕ್ಕಿದ್ದಂತೆ ಶವಪೆಟ್ಟಿಗೆ ಒಳಗಿದ್ದ ಮಗುವಿನಲ್ಲಿ ಸಣ್ಣಚಲನವಲನ ಕಂಡು ಪೋಷಕರು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಲ್ಲಾ ರೀತಿಯ ಪರೀಕ್ಷೆಗಳ ನಂತರ ಮಗು ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದಾರೆ.