ಬೆಂಗಳೂರಿನಲ್ಲಿ ನಿಲ್ಲದ `BMTC’ ಚಾಲಕರ ಮೇಲೆ ಹಲ್ಲೆ : ಹಾರ್ನ್ ಮಾಡಿದ್ದಕ್ಕೆ ಥಳಿಸಿ ಪರಾರಿಯಾದ ಆಟೋ ಡ್ರೈವರ್!

ಬೆಂಗಳೂರಿನಲ್ಲಿ ನಿಲ್ಲದ `BMTC' ಚಾಲಕರ ಮೇಲೆ ಹಲ್ಲೆ : ಹಾರ್ನ್ ಮಾಡಿದ್ದಕ್ಕೆ ಥಳಿಸಿ ಪರಾರಿಯಾದ ಆಟೋ ಡ್ರೈವರ್!

ಬೆಂಗಳೂರು : ಬೆಂಗಳೂರಿನಲ್ಲಿ ಇತ್ತೀಚಿಗೆ ಬಿಎಂಟಿಸಿ ಬಸ್ ಚಾಲಕರು, ನಿರ್ವಾಹಕರ ಮೇಲಿನ ಹಲ್ಲೆ ಪ್ರಕರಣಗಳು ಹೆಚ್ಚಾಗಿದ್ದು, ಇದೀಗ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.

ಬೆಂಗಳೂರಿನಲ್ಲಿ ಮೈಕೋ ಲೇಔಟ್ ಬಸ್ ನಿಲ್ದಾಣದ ಸಮೀಪ ಆಟೋ ಡ್ರೈವರ್ ಒಬ್ಬ ಬಸ್ ಚಾಲಕನ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ನಡೆದಿದೆ.

ರಸ್ತೆಯಲ್ಲಿ ನಿಂತಿದ್ದ ಆಟೋ ಸೈಡ್ ಗೆ ಹಾಕುವಂತೆ ಬಿಎಂಟಿಸಿ ಬಸ್ ಚಾಲಕ ಜ್ಞಾನಪ್ಪ ಹಾರ್ನ್ ಮಾಡಿದ್ದಕ್ಕೆ ಕೋಪಗೊಂಡ ಆಟೋ ಚಾಲಕ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ. ಈ ಮೂಲಕ ಕಳೆದ 2 ತಿಂಗಳಲ್ಲಿ ಇದು 5 ನೇ ಹಲ್ಲೆ ಪ್ರಕರಣವಾಗಿದೆ. ಎಸ್.ಜಿ.ಪಾಳ್ಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *