ಗದಗ: ವ್ಯಕ್ತಿಯೊಬ್ಬ ಕೌಟುಂಬಿಕ ಕಲಹ ಹಾಗೂ ಸಾಲದಿಂದ ಬೇಸತ್ತು ಮೂವರು ಮಕ್ಕಳೊಂದಿಗೆ ತುಂಗಭದ್ರಾ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾದ ಘಟನೆ ಜಿಲ್ಲೆಯ ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಬ್ರಿಡ್ಜ್ ಬಳಿ ನಿನ್ನೆ(ಬುಧವಾರ) ನಡೆದಿದೆ. ಇಂದು ನಾಲ್ವರ ಶವ ನದಿಯಲ್ಲಿ ಪತ್ತೆಯಾಗಿವೆ.
ನಾಲ್ವರ ಶವ ಪತ್ತೆ ನಿನ್ನೆ ರಾತ್ರಿ ಮಂಜುನಾಥನ ಅಳಿಯ ವೇದಾಂತನ ಮೃತ ದೇಹ ಪತ್ತೆಯಾಗಿತ್ತು. ಇಂದು ಮಂಜುನಾಥ, ಮಗಳು ಧನ್ಯಾಳ ಹಾಗೂ ಪವನ್ ಮೃತ ದೇಹ ಪತ್ತೆ, ಎರಡು ಕಿಲೋಮೀಟರ್ ದೂರದಲ್ಲಿ ಪತ್ತೆಯಾಗಿವೆ. ಧನ್ಯಾ ಮೃತ ದೇಹ ಪತ್ತೆಯಾದ 1 ಕಿಲೋಮೀಟರ್ ಅಂತರದಲ್ಲಿ ಪವನ್ ಮೃತ ದೇಹ ಪತ್ತೆಯಾಗಿದೆ. 500 ಮೀಟರ್ ಅಂತರದಲ್ಲಿ ಮಂಜುನಾಥ ಅರಕೇರಿ ಮೃತದೇಹ ಪತ್ತೆಯಾಗಿದೆ ಎಂದು ಅಗ್ನಿಶಾಮಕ ದಳ ಹಾಗೂ ಮೀನುಗಾರರು ಮಾಹಿತಿ ನೀಡಿದ್ದಾರೆ.
ಅಗ್ನಿಶಾಮಕ, ಸ್ಥಳೀಯ ಮೀನುಗಾರರಿಂದ ಜಂಟಿ ಕಾರ್ಯಾಚರಣೆ ಎರಡು ದಿನಗಳ ಕಾಲ ನಿರಂತರ ಕಾರ್ಯಾಚರಣೆ ಬಳಿಕ ನಾಲ್ವರ ಶವ ಪತ್ತೆಯಾಗಿವೆ. ತುಂಬಿ ಹರಿಯುವ ನದಿಯಲ್ಲಿ ಎರಡು ಮಷಿನ್ ಬೋಟ್ ಮೂಲಕ ಅಗ್ನಿಶಾಮಕ ಶೋಧಕಾರ್ಯ ನಡೆಸಿದರೆ, ಸ್ಥಳೀಯ ಮೀನುಗಾರರು ತೆಪ್ಪಗಳನ್ನು ಬಳಸಿ ಜಂಟಿ ಶೋಧಕಾರ್ಯಾಚರಣೆ ನಡೆಸಿದರು. ಕೌಟುಂಬಿಕ ಕಲಹ, ಸಾಲದಿಂದ ಬೇಸತ್ತು ಆತ್ಮಹತ್ಯೆ!
ಕೌಟುಂಬಿಕ ಕಲಹ, ಸಾಲದಿಂದ ಬೇಸತ್ತು ಮಕ್ತುಂಪುರ ಗ್ರಾಮದ ಮಂಜುನಾಥ್ ಆತ್ಮಹತ್ಯೆಗೆ ಶರಣಾಗಿದ್ದರು. ಹೆಂಡತಿಯ ಅಣ್ಣನ ಮಗ ವೇದಾಂತ ಸೇರಿದಂತೆ ತನ್ನ ಇಬ್ಬರು ಮಕ್ಕಳೊಂದಿಗೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ ಸದ್ಯ ಮೃತ ದೇಹಗಳನ್ನು ಮುಂಡರಗಿ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಮರಣೋತ್ತರ ಪರೀಕ್ಷೆ ನಂತರ ಮೃತ ದೇಹಗಳನ್ನ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗುತ್ತದೆ. ಮುಕ್ತಂಪುರ ಗ್ರಾಮದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮೃತರೆಲ್ಲರೂ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಮಕ್ತಂಪುರ ಗ್ರಾಮದ ನಿವಾಸಿಗಳಾಗಿದ್ದಾರೆ ಎಂದು ತಿಳಿದು ಬಂದಿದೆ