ತುಮಕೂರು:– ಕೆಸ್ಸಾರ್ಟಿಸಿಯ ನೂರಾರು ಹೊರ ಗುತ್ತಿಗೆ ನೌಕರರು ಪ್ರತಿಭಟನೆ ನಡೆಸಿ ಸಿದ್ದರಾಮಯ್ಯನವರೇ ನಮಗೆ ಗ್ಯಾರಂಟಿ ಮಾದರಿಯಲ್ಲಿಯೇ ನ್ಯಾಯ ಕೊಡಿ ಎಂದು ಆಗ್ರಹಿಸಿದರು.
ತಮ್ಮ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದ ನೂರಾರು ನೌಕರರು ನಮಗೆ ಏಜೆನ್ಸಿ ಬೇಡ. ಸರ್ಕಾರದಿಂದಲೇ ನಮಗೆ ಸಂಬಳ ಕೊಡಿ ಎಂದು ಒತ್ತಾಯಿಸಿದರು.
ತುಮಕೂರಿನ ಅಂತರಸನಹಳ್ಳಿಯ ಕೆಸ್ಸಾರ್ಟಿಸಿ ಡಿಪೋದ ಮುಂದೆ ಪ್ರತಿಭಟನೆ ನಡೆಸಿದ ನೌಕರರು ನಿಗಮದ ವತಿಯಿಂದ ಹೊರಗುತ್ತಿಗೆ ಕೆಲಸ ನೀಡಿ ಎಂದು ಆಗ್ರಹಿಸಿದರು.
ಏಜೆನ್ಸಿಯಿಂದ ಗುತ್ತಿಗೆ ನೌಕರಿ ಬೇಡ ಎಂದು ಪಟ್ಟು ಹಿಡಿದ ನೌಕರರು. ಕಡಿಮೆ ಸಂಬಳವನ್ನೇ ನೀಡಿ ನಿಗಮದಿಂದ ಕೆಲಸ ಕೊಡಿ. ಏಜೆನ್ಸಿಯಿಂದ ಕೆಲಸ ನಮಗೆ ಬೇಡವೇ ಬೇಡ ಎಂದ ನೌಕರರು ಪಟ್ಟು ಹಿಡಿದರು.
ಗ್ಯಾರಂಟಿ ಮಾದರಿಯಲ್ಲಿಯೇ ನಮಗೂ ನ್ಯಾಯ ಕೊಡಿ ಎಂದು ಆಗ್ರಹಿಸಿದ ನೌಕರರು, ನಮಗೆ ವೇತನವನ್ನೂ ಕಡಿಮೆ ಮಾಡಿ ಅನ್ಯಾಯ ಮಾಡಲಾಗಿದೆ. ಈ ಹಿಂದೆ 23 ಸಾವಿರ ವೇತನ ಕೊಡುತ್ತಿದ್ದರು ಈಗ ಕಡಿತ ಮಾಡಲಾಗಿದೆ. ಹೀಗಾಗಿ ಈ ಹಿಂದೆ ಕೊಡುತ್ತಿದ್ದ ವೇತನವನ್ನೇ ಕೊಡುವಂತೆ ಆಗ್ರಹ ಮಾಡಿದರು.