ಭಾರತದ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಆಪಲ್ನದ್ದೇ ಅಧಿಪತ್ಯ

ಭಾರತದ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಆಪಲ್ನದ್ದೇ ಅಧಿಪತ್ಯ

ವರ್ಷದಿಂದ ವರ್ಷಕ್ಕೆ ಭಾರತದ ಸ್ಮಾರ್ಟ್ಫೋನ್ ಮಾರ್ಕೆಟ್ ಶೇ 6ರಷ್ಟು ಏರಿಕೆ ಕಂಡಿದ್ದು, ಈ ವರ್ಷದ ಮೂರನೇ ತ್ರೈಮಾಸಿಕದಲ್ಲಿ ಸ್ಮಾರ್ಟ್ಫೋನ್ ಮಾರುಕಟ್ಟೆ ಶೇ 46 ಮಿಲಿಯನ್ ರಫ್ತು ಹೊಂದಿದೆ. ಅಂತಾರಾಷ್ಟ್ರೀಯ ದತ್ತಾಂಶ ಕಾರ್ಪೊರೇಷನ್ ವರ್ಲ್ಡ್ವೈಡ್ ಕ್ವಾರ್ಟರ್ಲಿ ಮೊಬೈಲ್ ಫೋನ್ ಟ್ರಾಕರ್ ಪ್ರಕಾರ, ಮೂರನೇ ತ್ರೈಮಾಸಿಕದಲ್ಲಿ ಆಪಲ್ (Apple) 4 ಮಿಲಿಯನ್ ರಫ್ತಾಗಿದ್ದು, ದೇಶದಲ್ಲಿ ಅತಿ ಹೆಚ್ಚು ರಫ್ತಾದ ಮೊಬೈಲ್ ಇದಾಗಿದೆ.

2024ರ ಮೂರನೇ ತ್ರೈಮಾಸಿಕದಲ್ಲಿ ಆಪಲ್ 5.7 ರಿಂದ 8.6ರಷ್ಟು ಏರಿಕೆ ಕಂಡಿದೆ. ವರ್ಷದಿಂದ ವರ್ಷಕ್ಕೆ ಇದು 58.5ರಷ್ಟು ಬೆಳವಣಿಗೆ ಕಂಡಿದೆ. ಐಡಿಸಿ ಪ್ರಕಾರ, ಐಫೋನ್ 15 ಮತ್ತು ಐಫೋನ್ 13 ಅತಿ ಹೆಚ್ಚು ರಫ್ತು ಆದ ಆಪಲ್ ಫೋನ್ ಆಗಿದೆ. ಈ ನಡುವೆ ಒನ್ ಪ್ಲಸ್ ಈ ವರ್ಷ ತ್ರೈಮಾಸಿಕದಲ್ಲಿ ನಷ್ಟ ಅನುಭವಿಸಿದೆ.

ಅಂತಾರಾಷ್ಟ್ರೀಯ ದತ್ತಾಂಶ ಕಾರ್ಪೊರೇಷನ್ ವರ್ಲ್ಡ್ವೈಡ್ ಕ್ವಾಟರ್ಲಿ ಮೊಬೈಲ್ ಫೋನ್ ಟ್ರಾಕರ್, ಮಾರುಕಟ್ಟೆಯ ಹಂಚಿಕೆಯಲ್ಲಿ ವಿವೋ ಶೇ 15.8ರಷ್ಟು ಪಾಲನ್ನು ಹೊಂದುವ ಮೂಲಕ ಮೊದಲ ಸ್ಥಾನದಲ್ಲಿದೆ. ಸಂಸ್ಥೆ ನೋಂದಣಿ ಮಾಡಿದಂತೆ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದಾಗ ಶೇ 20ರಷ್ಟು ಏರಿಕೆಯಾಗಿದೆ.

ವಿವೋ ಬಳಿಕ ಒಪ್ಪೊ, ಸ್ಯಾಮ್ಸಂಗ್, ರಿಯಲ್ಮಿ ಮತ್ತು ಕ್ಸಿಯೋಮಿ ಕ್ರಮವಾಗಿ ಮಾರುಕಟ್ಟೆಯಲ್ಲಿ ಶೇ 13.9, 12.3, 11.5 ಮತ್ತು 11.4ರಷ್ಟು ಹೊಂದಿದೆ. ವರ್ಷದಿಂದ ವರ್ಷಕ್ಕೆ ಒಪ್ಪೊ ಶೇ 47.6ರಷ್ಟು ಬೆಳವಣಿಗೆ ಕಂಡಿದೆ. ಸ್ಯಾಮ್ಸಂಗ್ ಮೂರನೇ ತ್ರೈಮಾಸಿಕದಲ್ಲಿ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ, ಸ್ಯಾಮಸಂಗ್ 16.2ರಷ್ಟು ಇಳಿಕೆ ಕಂಡಿದೆ. ಈ ನಡುವೆ ರಿಯಲ್ಮಿ ಕೂಡ ಮಾರುಕಟ್ಟೆಯಲ್ಲಿ ಶೇ 19.4ರಷ್ಟು ನಷ್ಟ ಅನುಭವಿಸಿದೆ. ಆದರೆ ಕ್ಸಿಯೋಮಿ ಶೇ 2.7ರಷ್ಟು ಏರಿಕೆ ಕಂಡಿದೆ.

Leave a Reply

Your email address will not be published. Required fields are marked *